ಲಕ್ಷ್ಮೇಶ್ವರದಲ್ಲಿ ಸಂಭ್ರಮದ ಗುರುದತ್ತ ಜಯಂತಿ ಆಚರಣೆ

KannadaprabhaNewsNetwork |  
Published : Dec 10, 2025, 01:30 AM IST
ಲಕ್ಷ್ಮೇಶ್ವರದ ಶಂಕರ ಭಾರತಿಮಠದಲ್ಲಿ ದತ್ತ ಜಯಂತಿ ಅಂಗವಾಗಿ ಮಧುಕರಿ ಸೇವೆ ನಡೆಯಿತು. | Kannada Prabha

ಸಾರಾಂಶ

ಬಾಲಚಂದ್ರಭಟ್ ಹುಲಮನಿ ಅವರ ಮಾರ್ಗದರ್ಶನದಲ್ಲಿ ಶ್ರೀಕಾಂತ ಪೂಜಾರ ಗುರುಚರಿತ್ರೆ ಪಾರಾಯಣ ಮಾಡಿದರು. ಶನಿವಾರ ಕೊನೆಯ ದಿವಸ ಸತ್ಯನಾರಾಯಣ ಪೂಜೆ ಹಾಗೂ ವಟು ಪೂಜೆಗಳನ್ನು ನೆರವೇರಿಸಲಾಯಿತು.

ಲಕ್ಷ್ಮೇಶ್ವರ: ಪಟ್ಟಣದ ಶಂಕರಭಾರತಿ ಮಠದಲ್ಲಿ ಬ್ರಹ್ಮವೃಂದ(ಬ್ರಾಹ್ಮಣ ಸಮಾಜ)ದ ವತಿಯಿಂದ ದತ್ತ ಜಯಂತಿ ಅಂಗವಾಗಿ ಶನಿವಾರ ಮಧುಕರಿ ಸೇವಾ ಪೂಜೆ ಮತ್ತು ಸತ್ಯನಾರಾಯಣ ಪೂಜೆಯೊಂದಿಗೆ ಸಂಪನ್ನವಾಯಿತು.

ಇದಕ್ಕೂ ಮುನ್ನ ಅಂದರೆ ಗುರುವಾರ ವಟುಪೂಜೆ ಹಾಗೂ ದತ್ತಾತ್ರೇಯ ತೊಟ್ಟಿಲೊತ್ಸವ ಸಂಪ್ರದಾಯದಂತೆ ಅದ್ಧೂರಿಯಾಗಿ ಜರುಗಿತು. ನಿತ್ಯ ರುದ್ರಾಭಿಷೇಕ, ವಿಶೇಷ ಅಲಂಕಾರ, ಗುರುಚರಿತ್ರೆ ಪಾರಾಯಣ, ಮಹಿಳೆಯರಿಂದ ಭಜನಾ ಕಾರ್ಯಕ್ರಮಗಳು ಸಾಂಗವಾಗಿ ನಡೆದವು.

ಬಾಲಚಂದ್ರಭಟ್ ಹುಲಮನಿ ಅವರ ಮಾರ್ಗದರ್ಶನದಲ್ಲಿ ಶ್ರೀಕಾಂತ ಪೂಜಾರ ಗುರುಚರಿತ್ರೆ ಪಾರಾಯಣ ಮಾಡಿದರು. ಶನಿವಾರ ಕೊನೆಯ ದಿವಸ ಸತ್ಯನಾರಾಯಣ ಪೂಜೆ ಹಾಗೂ ವಟು ಪೂಜೆಗಳನ್ನು ನೆರವೇರಿಸಲಾಯಿತು. ಹಿರಿಯ ವೈದಿಕರಾದ ಅನಂತಭಟ್ ಪೂಜಾರ ಸತ್ಯನಾರಾಯಣ ಪೂಜೆಯನ್ನು ಶಾಸ್ತ್ರೋಕ್ತವಾಗಿ ನಡೆಸಿಕೊಟ್ಟರು. ನಂತರ ಮದುಕರಿ ಸೇವೆ ನಡೆಸಲಾಯಿತು. ವಿಪ್ರ ಸಮಾಜದ ಹತ್ತಾರು ಯುವಕರು ಸೇರಿ ಮನೆ ಮನೆಗೆ ತೆರಳಿ ಮಧುಕರಿ ಸಂಗ್ರಹ ನೆರವೇರಿಸಿದರು, ಸಮಾಜದವರು ಶ್ರೀಮಠಕ್ಕೆ ಆಗಮಿಸಿ ಮಧುಕರಿ ಸೇವೆ ಅರ್ಪಿಸಿದರು.

ನಂತರ ಮಹಾಪ್ರಸಾದ ಸಾಂಗವಾಗಿ ನೆರವೇರಿತು. ಶ್ರೀಕಾಂತ ಪೂಜಾರ ಗುರುಚರಿತ್ರೆ ಪಾರಾಯಣ ಮಾಡಿದ್ದರಿಂದ ಹಾಗೂ ಅನಂತಭಟ್ ಪೂಜಾರ ಇವರನ್ನು ಸಮಾಜದ ವತಿಯಿಂದ ಗೌರವಿಸಲಾಯಿತು. ಈ ವೇಳೆ ಬ್ರಹ್ಮವೃಂದದ ಅಧ್ಯಕ್ಷ ಗೋಪಾಲ ಪಡ್ನೀಸ್, ಬಾಹ್ಮಣ ಸಮಾಜದ ತಾಲೂಕು ಅಧ್ಯಕ್ಷ ಕೃಷ್ಣ ಕುಲಕರ್ಣಿ ಮಾತನಾಡಿದರು. ಕಾರ್ಯದರ್ಶಿ ಅರವಿಂದ ದೇಶಪಾಂಡೆ, ಗುರಣ್ಣ ಪಾಟೀಲಕುಲರ್ಣಿ, ಕೆ.ಎಸ್. ಕುಲಕರ್ಣಿ, ನಾರಾಯಣಭಟ್ ಪುರಾಣಿಕ, ಪಲ್ಲಣ್ಣ ಕುಲಕರ್ಣಿ, ಧ್ರುವ ಬೆಟಗೇರಿ, ಅನಿಲ ಕುಲಕರ್ಣಿ, ದಿಗಂಬರ ಪೂಜಾರ, ಬಿ.ಕೆ. ಕುಲಕರ್ಣಿ, ಆರ್.ಎನ್. ಪಂಚಬಾವಿ, ಎ.ಪಿ. ಕುಲಕರ್ಣಿ, ಆರ್.ಎಚ್. ಕುಲಕರ್ಣಿ, ಚಿಕ್ಕರಸ ಪೂಜಾರ, ಸಂಜಯ ಪಾಟೀಲ, ರಾಜಾಚಾರ್ಯ ರಾಯಚೂರ, ವರದೇಂದ್ರ ಪುರೋಹಿತ, ಆನಂದ ಕುಲಕರ್ಣಿ(ಶ್ಯಾಬಳ), ವ್ಯಾಪಾರಿ, ರಾಘವೇಂದ್ರ ಪೂಜಾರ, ಸಾಹುಕಾರ, ರಾಘವೇಂದ್ರ ಪುರೋಹಿತ ಹಾಗೂ ಸಮಾಜದವರು, ವಿಪ್ರ ಮಹಿಳೆಯರು ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಸಿದ ಕರ್ನಾಟಕ ಕ್ರಿಕೆಟ್‌ ಗುಣಮಟ್ಟ - ಈ ಸಲ 7 ಟಿ20ಯಲ್ಲಿ ಗೆದ್ದಿದ್ದು ಕೇವಲ 2
ಬುರುಡೆ ಕೇಸ್‌ ಹಿಂದೆ ಅರ್ಬನ್‌ ನಕ್ಸಲ್‌ : ಬಿಜೆಪಿ