ಗುರು ಬಗ್ಗೆ ಕೃತಜ್ಞತೆ ವ್ಯಕ್ತಪಡಿಸುವುದೇ ಗುರುಪೂರ್ಣಿಮೆ: ಡಾ.ಅಭಿನವ ಶ್ರೀ

KannadaprabhaNewsNetwork |  
Published : Jul 22, 2024, 01:17 AM IST
ಚಿತ್ರ 21ಬಿಡಿಆರ್61 | Kannada Prabha

ಸಾರಾಂಶ

ಬಸವಕಲ್ಯಾಣ ನಗರದ ಘನಲಿಂಗ ರುದ್ರಮುನಿ ಶಿವಾಚಾರ್ಯ ಸಂಸ್ಥಾನ ಗವಿಮಠದಲ್ಲಿ ಗುರುಪೂರ್ಣಿಮೆ ನಿಮಿತ್ಯ ಸದ್ಭಕ್ತರಿಂದ ಪೂಜ್ಯರ ಪಾದಪೂಜೆ ಕಾರ್ಯಕ್ರಮ ಜರುಗಿತು.

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ

ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಅತ್ಯಂತ ಶ್ರೇಷ್ಠ ಸ್ಥಾನಮಾನವಿದೆ. ಮನುಷ್ಯನ ಜೀವನದಲ್ಲಿ ಧರ್ಮ ದೇವರು ಮತ್ತು ಗುರುವನ್ನು ಎಂದಿಗೂ ಮರೆಯಬಾರದು ಎಂದು ಗವಿಮಠದ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ನುಡಿದರು.

ಗುರುಪೂರ್ಣಿಮೆ ನಿಮಿತ್ತ ನಗರದ ಘನಲಿಂಗ ರುದ್ರಮುನಿ ಶಿವಾಚಾರ್ಯ ಸಂಸ್ಥಾನ ಗವಿಮಠದಲ್ಲಿ ಸದ್ಭಕ್ತರು ಏರ್ಪಡಿಸಿದ್ದ ಗುರು ಪೂರ್ಣಿಮೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಗುರುಗಳು ತಮ್ಮ ಭಕ್ತರಿಗೆ ಆಧ್ಯಾತ್ಮದ ಭೋದಾಮೃತ ನೀಡುತ್ತಿರುತ್ತಾರೆ. ಗುರುಗಳ ಋಣ ತೀರಿಸುವುದು ಅಸಾಧ್ಯ. ಆದರೂ ಭಕ್ತರು ಆ ಗುರುಗಳ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸುವುದೇ ಗುರುಪೂರ್ಣಿಮೆ ಆಚರಿಸುವುದರ ಹಿಂದಿನ ಉದ್ದೇಶವಾಗಿದೆ ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶಾಂತಲಿಂಗ ಮಠಪತಿ, ಡಾ.ಶಿವಲೀಲಾ ಮಠಪತಿ ದಂಪತಿಗಳು ಗುರುಗಳ ಪಾದಪೂಜೆ ನೆರವೇರಿಸಿದರು. ವಿವೇಕ ವಸ್ತ್ರದ ಸಂಗೀತ ಸೇವೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಎ.ಜಿ ಪಾಟೀಲ್, ಬಸವಂತಪ್ಪ ಲವಾರೆ, ಬಾಬುರಾವ್ ಚಳಕಾಪೂರೆ, ಮಲ್ಲಿಕಾರ್ಜುನ ಅಲಗುಡೆ, ವೀರಯ್ಯ ಸ್ವಾಮಿ, ಶರಣಬಸಪ್ಪ ಪವಾಡಶೆಟ್ಟಿ, ರೇವಣಸಿದ್ದಯ್ಯ ವಸ್ತ್ರದ, ಶಾಂತವೀರ ಪೂಜಾರಿ, ಸದಾನಂದ ಕಣಜೆ, ಪ್ರೊ ರುದ್ರೇಶ್ವರ ಗೋರ್ಟಾ, ಶಿವಕುಮಾರ್ ಚಿಂಚೋಳಿ, ಶಿವಕುಮಾರ ಮುನ್ನೊಳಿ, ರಾಜಕುಮಾರ್ ಕಾಂಬಳೆ ವಿನೋದ್ ಲಾಕೆ, ಇನ್ನಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!