ಫೋಟೋ - 27ಎಂವೈಎಸ್ 54- ಕೆ.ಆರ್. ನಗರದ ಎಸ್. ನಂಜಪ್ಪ ರಸ್ತೆಯ ನಂದನ್ ಪಂಕ್ಷನ್ ಹಾಲ್ ನಲ್ಲಿ ಹೆಬ್ಬಾಳು ಸರ್ಕಾರಿ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕರು ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಂಬಂದ ಮತು ಭಾಂದವ್ಯ ದೈವಿಕವಾಗಿರುವುದರಿಂದ ಕಲಿಕೆಯ ಅವಧಿಯಲ್ಲಿ ಗುರುಗಳ ಮಾರ್ಗದರ್ಶನ ಮತ್ತು ಸಲಹೆ ಪಡೆಯುವವರು ಬದುಕಿನಲ್ಲಿ ಯಶಸ್ಸು ಗಳಿಸುತ್ತಾರೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಎಂ.ಆರ್. ಪುಟ್ಟರಾಜು ಹೇಳಿದರು.ಪಟ್ಟಣದ ಎಸ್. ನಂಜಪ್ಪ ರಸ್ತೆಯ ನಂದನ್ ಫಂಕ್ಷನ್ ಹಾಲ್ ನಲ್ಲಿ ಹೆಬ್ಬಾಳು ಸರ್ಕಾರಿ ಪ್ರೌಢಶಾಲೆಯಲ್ಲಿ 2004-05ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪ್ರೌಢಾವಸ್ಥೆಗೆ ಬಂದ ನಂತರ ತಮ್ಮ ಜವಬ್ದಾರಿ ಅರಿತು ಓದಿನಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ದಶಕಗಳ ಹಿಂದೆ ತಾವು ಓದಿ ಅಕ್ಷರ ಕಲಿತ ಶಾಲೆ ಮತ್ತು ಪಾಠ ಮಾಡಿದ ಶಿಕ್ಷಕರನ್ನು ನೆನೆದು ಹಳೆಯ ವಿದ್ಯಾರ್ಥಿಗಳು ಗುರುಗಳಿಗೆ ವಂದನೆ ಸಲ್ಲಿಸುತ್ತಿರುವುದು ಇತರರಿಗೆ ಮಾದರಿಯಾಗಿದ್ದು ಇದರ ಜತೆಗೆ ನಿಮಗೆ ಅಕ್ಷರ ಕಲಿಯಲು ನೆರವಾದ ಶಾಲೆಗಳಿಗೂ ಸಹಾಯ ಮಾಡಬೇಕು ಎಂದು ಅವರು ಸಲಹೆ ನೀಡಿದರು.
ಈ ವೇಳೆ ಹೆಬ್ಬಾಳು ಪ್ರೌಢಶಾಲೆಯಲ್ಲಿ 2004-05ರಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರು ಮತ್ತು ಸಿಬ್ಬಂದಿಗೆ ಆ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸಲಾಯಿತು.