ಶಂಭುಲಿಂಗೇಶ್ವರ ಶಾಲೆ 2001 ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನೆ

KannadaprabhaNewsNetwork | Published : Feb 28, 2024 2:30 AM

ಸಾರಾಂಶ

ಇಲ್ಲಿನ ಸಮೀಪದ ಗಂಡಸಿಯ ಶಂಭುಲಿಂಗೇಶ್ವರ ವಿದ್ಯಾ ಸಂಸ್ಥೆಯಲ್ಲಿ ಓದಿದ 2000-2001 ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಂದ ಗುರುವಂದನೆ ಹಾಗೂ ಸ್ನೇಹ ಸಂಭ್ರಮ ಕಾರ್ಯಕ್ರಮವನ್ನು ಅರಸೀಕೆರೆ ಸಮೀಪ ಇರುವ ಹಳ್ಳಿಮನೆ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು

ಕನ್ನಡಪ್ರಭವಾರ್ತೆ ಹಾರನಹಳ್ಳಿ

ಇಲ್ಲಿನ ಸಮೀಪದ ಗಂಡಸಿಯ ಶಂಭುಲಿಂಗೇಶ್ವರ ವಿದ್ಯಾ ಸಂಸ್ಥೆಯಲ್ಲಿ ಓದಿದ 2000-2001 ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಂದ ಗುರುವಂದನೆ ಹಾಗೂ ಸ್ನೇಹ ಸಂಭ್ರಮ ಕಾರ್ಯಕ್ರಮವನ್ನು ಅರಸೀಕೆರೆ ಸಮೀಪ ಇರುವ ಹಳ್ಳಿಮನೆ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಸುದೀರ್ಘ 24 ವರ್ಷಗಳ ಶಾಲೆಯ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಸುಮಾರು 25000 ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡಿದಂತಹ ಗುರುವರ್ಯರಿಗೆ ಸನ್ಮಾನಿಸಲಾಯಿತು. ಪೂಜ್ಯ ಗುರುಗಳಾದ ಎಚ್.ಎನ್ ಗುಂಡುರಾವ್, ಜೆ.ಎಚ್. ಕೃಷ್ಣೇಗೌಡ, ವೈ.ಟಿ. ಬೆಟ್ಟಾಚಾರ್, ಡಿ.ಎನ್. ಜಡೇಗೌಡ, ಎಚ್.ವಿ. ಗೀತಾಬಾಲಿ, ಎಮ್.ಎನ್ ಜಯರಾಮ್, ಟಿ.ಎನ್. ದೇವರಾಜ್, ಜಿ.ಎನ್ ಮಮತಾ, ದಿ.ಸದಾಶಿವಯ್ಯನವರ ಧರ್ಮಪತ್ನಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಿಇಒ ಮೋಹನ್ ಕುಮಾರ್, ಗುರುಗಳಿಗೆ ಗೌರವ ವಂದನೆ ಸಲ್ಲಿಸುವ ಕಾರ್ಯದಿಂದ ಶಿಷ್ಯರು ಗುರುಗಳ ಮೇಲೆ ಇಟ್ಟಿರುವ ಭಕ್ತಿ ಭಾವವನ್ನು ತೋರಿಸುತ್ತದೆ. 24 ವರ್ಷಗಳ ನಂತರ ಎಸ್ಸೆಸ್ಸೆಲ್ಸಿ ಬ್ಯಾಚಿನ ಸ್ನೇಹಿತರೆಲ್ಲರೂ ಸೇರಿ ಹಮ್ಮಿಕೊಂಡಿರುವ ಔಚಿತ್ಯಪೂರ್ಣ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಸನ್ಮಾನಿತ ಗುರುಗಳಾದ ಎಚ್.ಎನ್. ಗುಂಡುರಾವ್ ಮಾತನಾಡಿ, ದೇಶ ನನಗೆ ಏನು ಕೊಟ್ಟಿದೆ ಎಂದು ಪ್ರಶ್ನಿಸದೆ, ದೇಶಕ್ಕಾಗಿ ನನ್ನ ಕೊಡುಗೆ ಏನಿದೆ ಎಂದು ಪ್ರತಿಯೊಬ್ಬ ನಾಗರಿಕನು ಆರ್ಥಮಾಡಿಕೊಳ್ಳಬೇಕು, ಸಮಾಜಕ್ಕೆ ಒಳ್ಳೆಯ ಕೆಲಸಗಳನ್ನು ಮಾಡುವಂತಹ ಗುಣವನ್ನು ಬೆಳೆಸಿಕೊಂಡಾಗ ಮಾತ್ರ ನಾವು ಬಲಿಷ್ಟ ದೇಶವನ್ನು, ಉತ್ತಮ ಸಮಾಜವನ್ನು ಕಟ್ಟಲು ಸಾದ್ಯವೆಂದು ತಿಳಿಸಿದರು. ಹಳೆಯ ವಿದ್ಯಾರ್ಥಿಗಳಿಗೆ ತಮ್ಮ ಪೋಷಕರನ್ನು ಪ್ರೀತಿಯಿಂದ ನೋಡಿಕೊಳ್ಳುವಂತೆ ಹಿತನುಡಿಯನ್ನು ಹೇಳಿದರು. 24 ವರ್ಷಗಳ ನಂತರ ಸೇರಿರುವ ಹಳೆಯ ವಿದ್ಯಾರ್ಥಿಗಳೆಲ್ಲರೂ ಗುರುವಂದನೆ ಹಾಗೂ ಸ್ನೇಹ ಸಂಭ್ರಮ ಕಾರ್ಯಕ್ರಮವನ್ನು ಆರ್ಥಪೂರ್ಣವಾಗಿ ಆಚರಿಸಿದರು. ಕಸ್ತೂರ ಭಾ ಆಶ್ರಮಕ್ಕೆ ವೈಟ್ ಬೋರ್ಡನ್ನು ಕೊಡುಗೆಯಾಗಿ ನೀಡಿದರು. ಕಾರ್ಯಕ್ರಮವನ್ನು ಪ್ರಭಾಕರ್ ಜಿ.ಎನ್ ನಿರೂಪಿಸಿದರು.

Share this article