ಜಿಮ್‌-ಫಿಟ್ನೆಸ್ ದುಶ್ಯಾಸನರ ಕುಕೃತ್ಯ ಮೊಗೆದಷ್ಟು ಹೊರಕ್ಕೆ!

KannadaprabhaNewsNetwork |  
Published : Jul 12, 2026, 02:30 AM IST
ಪೊಟೋ೧೦ಸಿಪಿಟ೨: ತಾಲೂಕಿನ ಹಾರೋಕೊಪ್ಪ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಮತ್ತು ಬಿಎಂಸಿ ಕೇಂದ್ರದ ನಿರ್ಮಾಣದ ಕಾಮಗಾರಿಗೆ ಬಮೂಲ್ ನಿರ್ದೇಶಕ ಎಸ್.ಲಿಂಗೇಶ್ ಕುಮಾರ್ ಭೂಮಿಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ಫಿಟ್ನೆಸ್ ಅಂತಾ ಜಿಮ್‌-ಫಿಟ್ನೆಸ್ ಅಂತಾ ಕ್ಲಾಸ್‌ಗೆ ಹೋದ ಪ್ರತಿಭಾವಂತ ವಿದ್ಯಾರ್ಥಿನಿಯೊಬ್ಬಳು ಅಲ್ಲಿನ ಟ್ರೈನರ್‌ ಹಾಗೂ ಅಲ್ಲಿ ಬಿಟ್ಟು ಮತ್ತೊಂದು ಸೆಂಟರ್‌ಗೆ ಸೇರಿದಾಗ ಅಲ್ಲಿನ ಟ್ರೈನರ್‌ ಕಂ ಬಾಡಿ ಬಿಲ್ಡರ್‌ನಿಂದಾಗಿ ಇಂದು ಅನುಭವಿಸಿದ ಯಾತನೆಯಿಂದ ಮಾನಸಿಕ ಸ್ಥಿತಿಯೇ ಹದಗೆಟ್ಟಿದ್ದು, ಒಬ್ಬಳೇ ಮಗಳ ಬಗ್ಗೆ ದೊಡ್ಡ ಕನಸು ಕಂಡಿದ್ದ ಹೆತ್ತವರು ಈಗ ಆಕೆಯ ಸ್ಥಿತಿಗೆ ನಿತ್ಯವೂ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.

- ಪ್ರತಿ ಹೆಣ್ಣುಮಕ್ಕಳೂ ಎಚ್ಚೆತ್ತುಕೊಳ್ಳದಿದ್ದರೆ ಬದುಕೇ ಮೂರಾಬಟ್ಟೆಯಾಗುವ ಅಪಾಯ ।

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

* ಪ್ರಕರಣ-1:

ಫಿಟ್ನೆಸ್ ಅಂತಾ ಜಿಮ್‌-ಫಿಟ್ನೆಸ್ ಅಂತಾ ಕ್ಲಾಸ್‌ಗೆ ಹೋದ ಪ್ರತಿಭಾವಂತ ವಿದ್ಯಾರ್ಥಿನಿಯೊಬ್ಬಳು ಅಲ್ಲಿನ ಟ್ರೈನರ್‌ ಹಾಗೂ ಅಲ್ಲಿ ಬಿಟ್ಟು ಮತ್ತೊಂದು ಸೆಂಟರ್‌ಗೆ ಸೇರಿದಾಗ ಅಲ್ಲಿನ ಟ್ರೈನರ್‌ ಕಂ ಬಾಡಿ ಬಿಲ್ಡರ್‌ನಿಂದಾಗಿ ಇಂದು ಅನುಭವಿಸಿದ ಯಾತನೆಯಿಂದ ಮಾನಸಿಕ ಸ್ಥಿತಿಯೇ ಹದಗೆಟ್ಟಿದ್ದು, ಒಬ್ಬಳೇ ಮಗಳ ಬಗ್ಗೆ ದೊಡ್ಡ ಕನಸು ಕಂಡಿದ್ದ ಹೆತ್ತವರು ಈಗ ಆಕೆಯ ಸ್ಥಿತಿಗೆ ನಿತ್ಯವೂ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.

- - -

* ಪ್ರಕರಣ-2:

ಮನೆಗೆಲಸ, ಮಕ್ಕಳ ಆರೈಕೆ, ಪತಿಯ ಕೆಲಸಕ್ಕೆ, ಮಕ್ಕಳನ್ನು ಶಾಲೆಗೆ ಕಳಿಸಿದ ನಂತರ ಜಿಮ್‌, ಫಿಟ್ನೆಸ್ ಅಂತಾ ಸಾವಿರಾರು ರು.ಗಳ ಶುಲ್ಕವನ್ನು ಭರಿಸಿ ಜಿಮ್-ಫಿಟ್ನೆಸ್ ಸೆಂಟರ್‌ಗೆ ಸೇರಿದ ಮಹಿಳೆಯರಿಗೆ ಅಲ್ಲಿಯೇ ಜಿಮ್‌ಗೆಂದು ಬಂದ ಅಪರಿಚಿತರು, ವಯಸ್ಕರ ಕೆಟ್ಟ ದೃಷ್ಟಿಯಿಂದ ನೋಡುವುದು, ವಿಕೃತ ಮನಸ್ಥಿತಿಯ ಪುರುಷರೊಂದಿಗೆ ಅಭ್ಯಾಸಕ್ಕೆ ಅನುವು ಮಾಡಿಕೊಡುವ ಹೀನ ಘಟನೆಗಳ ಸರಮಾಲೆಯೇ ಇಲ್ಲುಂಟು.

- - -

* ಪ್ರಕರಣ-3:

ಅಭ್ಯಾಸಕ್ಕೆಂದು ಜಿಮ್‌-ಫಿಟ್ನೆಸ್‌ಗೆ ಬಂದ ವರ್ತಕರು, ಉದ್ಯಮಿಗಳು, ಪ್ರಭಾವಿಗಳು, ಶ್ರೀಮಂತರೆನಿಸಿಕೊಂಡ ಕೆಲ ಕಾಕದೃಷ್ಟಿಯ ಜನರಿಂದಾಗಿ ಜಿಮ್‌-ಫಿಟ್ನೆಸ್‌ ಸೆಂಟರ್‌ನಲ್ಲಿ ಪ್ರತಿದಿನ, ಪ್ರತಿ ಕ್ಷಣವೂ ಮುಜುಗರಕ್ಕೆ ಒಳಗಾಗುವ, ತಮ್ಮ ಕಡೆಗೆ ಕೆಟ್ಟ ದೃಷ್ಟಿಯಿಂದ ನೋಡುತ್ತಿರುವ ಬಗ್ಗೆ ಸೆಂಟರ್ ಮಾಲೀಕ, ಟ್ರೈನರ್‌ಗೆ ಹೇಳಿದರೆ ವ್ಯಂಗ್ಯವಾದ ಪ್ರತಿಕ್ರಿಯೆ.

- - -

* ಪ್ರಕರಣ-4:

ಮನೆಯಲ್ಲಿ ಮಕ್ಕಳು, ಗಂಡ, ಕುಟುಂಬ ಸದಸ್ಯರಿಗೆ ತಿಂಡಿ, ಅಡುಗೆ ಮಾಡುತ್ತಾರೋ ಬಿಡುತ್ತಾರೋ ಗೊತ್ತಿಲ್ಲ. ಆದರೆ, ಜಿಮ್‌-ಫಿಟ್ನೆಸ್‌ ಸೆಂಟರ್‌ನ ಮಾಲೀಕ, ಟ್ರೈನರ್‌ ಅಥ‍ವಾ ಪರ್ಸನಲ್ ಟ್ರೈನರ್ ಅನಿಸಿಕೊಂಡ ಫಿಟ್ನೆಸ್‌ ಸೆಂಟರ್ ದುಶ್ಯಾಸನಿಗೆ ಪೌಷ್ಟಿಕಾಂಶಯುಕ್ತ ಆಹಾರ, ಬೇಯಿಸಿದ ಮೊಟ್ಟೆಗಳನ್ನು ತಪ್ಪದೇ ತರಬೇಕೆಂಬ ಫರ್ಮಾನು.

- - -

* ಪ್ರಕರಣ-5:

ಜಿಮ್‌, ಫಿಟ್ನೆಸ್ ಅಂತಾ ಹೋದವನ ಮಾತಿಗೆ ಮರುಳಾಗಿ ಆತನ ಒತ್ತಡಕ್ಕೆ ಮಣಿದು ಮಾದಕ ವಸ್ತು ಸೇವನೆ ಮಾಡಿದ ಯುವತಿಯೊಬ್ಬಳ ಜೊತೆಗೆ ಬಲವಂತವಾಗಿ ಸೇರಿ, ಆಕೆಯ ಗರ್ಭಿಣಿಯಾಗಿ ಅದೂ ಪ್ರಕರಣ ಅಲ್ಲಿಯೇ ಮುಚ್ಚಿ ಹೋದದ್ದು, ಆಕೆಯ ಬದುಕನ್ನೇ ಹಾಳು ಮಾಡಿದ ಮಾಲೀಕ ಕಂ ಟ್ರೈನರ್ ವಿರುದ್ಧ ಯಾವುದೇ ಕ್ರಮ ಇಲ್ಲ!

- - - - - - - - - -

ಈ ಐದೂ ಪ್ರಕರಣಗಳು ಕೇವಲ ಸ್ಯಾಂಪಲ್‌ಗಳು ಮಾತ್ರ. ಆದರೆ, ಸರ್ಕಾರ ನೈತಿಕ ಪೊಲೀಸ್‌ಗಿರಿ ಅಂತೆಲ್ಲಾ ಪ್ರತಿಭಟನೆ ಮಾಡಿದವರ ಬಗ್ಗೆ ಟೀಕಿಸುವ ಬದಲಿಗೆ ರಾಜ್ಯದ ಮಹಿಳೆಯರ ವಿಚಾರವೆಂಬ ಕಾರಣಕ್ಕಾದರೂ ಒಂದು ಕ್ಷಣ ರಾಜಕೀಯ, ಪಕ್ಷಬೇಧ, ಸಿದ್ಧಾಂತ ಬೇರೆಯೆಂಬ ವಿಚಾರ ಬದಿಗಿಟ್ಟು, ಮಹಿಳಾ ರಕ್ಷಣೆಗೆ ತಕ್ಷಣ‍ವೇ ಕಾರ್ಯೋನ್ಮುಖ ಆಗಬೇಕಾದ ಅನಿವಾರ್ಯತೆ ಇದೆ. ಯಾರೋ ಅಮಾಯಕ ಹೆಣ್ಣುಮಕ್ಕಳು, ಕುಟುಂಬಗಳ ಹೆಣಗಳು ಬಿದ್ದ ನಂತರ ನಾಲ್ಕು ಹನಿ ಕಣ್ಣೀರು ಸುರಿಸುವ ಬದಲು, ಯಾವುದೋ ಕುಟುಂಬ ಬೀದಿ ಪಾಲಾಗುವ ಮುನ್ನ, ಯಾರೋ ಮಕ್ಕಳು ಅನಾಥರಾಗುವ ಮುನ್ನ ಸ್ವತಃ ಮುಖ್ಯಮಂತ್ರಿಗಳಾದರೂ ಇಂತಹ ಗಂಭೀರ ವಿಚಾರದಲ್ಲಿ ಬದ್ಧತೆ ಮೆರೆಯಬೇಕಿದೆ.

ಪೋಲಿಸ್ ಇಲಾಖೆಯಂತೂ ಸ್ಪಷ್ಟವಾಗಿ ಯಾರಾದರೂ ಸಂತ್ರಸ್ಥರು ದೂರು ನೀಡದ ಹೊರತು, ತಾವೇನೂ ಮಾಡಲಾಗದು ಎಂದು ಹೇಳಿ ಸುಮ್ಮನಾಗಿದೆ. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಜು.12ರಂದು ದಾವಣಗೆರೆ ನಗರಕ್ಕೆ ಪೂರ್ವನಿಗದಿ ಕಾರ್ಯಕ್ರಮಕ್ಕೆ ಆಗಮಿಸಬೇಕಾಗಿತ್ತು. ಆದರೆ, ಕಾರಣಾಂತರದಿಂದ ಆಯೋಗದ ಅಧ್ಯಕ್ಷರ ಪ್ರವಾಸ ರದ್ದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ವಿದ್ಯಾರ್ಥಿನಿಯರು, ಯುವತಿಯರು, ಹೆಣ್ಣುಮಕ್ಕಳಿಗೆ ಜಿಮ್ ಮತ್ತು ಫಿಟ್ನೆಸ್ ಸೆಂಟರ್‌ಗಳ ದುಶ್ಯಾಸನರಿಂದ ಆಗುತ್ತಿರುವ ಶೋಷಣೆ, ಅನ್ಯಾಯ, ಲೈಂಗಿಕ ದೌರ್ಜನ್ಯ, ಮಾನಸಿಕ ವೇದನೆ ತಡೆಯಲು ಜನಸಾಮಾನ್ಯರು ಯಾರತ್ತ ಮುಖ ಮಾಡಬೇಕೆಂಬುದೇ ಈಗ ಪ್ರಶ್ನೆಯಾಗಿದೆ.

ಒತ್ತಡದ ಜೀವನ, ಬದುಕಿನ ಜಂಜಾಟದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಇರುತ್ತದೆ. ಫಿಟ್ ಆಗಿರಬೇಕೆಂಬ ಕನಸು, ಆರೋಗ್ಯವಾಗಿ ಇರಬೇಕೆಂಬ ಗುರಿ ಇದ್ದೇ ಇರುತ್ತದೆ. ಅದನ್ನೇ ತಮ್ಮ ಸ್ವಾರ್ಥ ಸಾಧನೆ, ತಮ್ಮ ಗುರಿ ಸಾಧನೆ ಕೆಲವು ಜಿಮ್ ಮಾಲೀಕರು, ಕೆಲವು ಟ್ರೈನರ್‌ಗಳು, ಕೆಲವು ಪರ್ಸನಲ್ ಟ್ರೈನರ್ (ಪಿಟಿ) ಎನ್ನುವವರು ದುರ್ಬಳಕೆ ಮಾಡಿಕೊಂಡ ನಿದರ್ಶನಗ‍ಳಿವೆ. ಇಂತಹವರ ಜೊತೆಗೆ ಕೆಲವರು ಜಿಮ್‌, ಫಿಟ್ನೆಸ್ ನೆಪದಲ್ಲಿ ಸೆಂಟರ್‌ಗೆ ಬಂದ ಹೆಣ್ಣುಮಕ್ಕಳನ್ನು ಗುರಾಯಿಸುವ, ಗಾಸಿಪ್ ಮಾಡುವ, ಕಾಕದೃಷ್ಟಿಯಿಂದ ನೋಡುವ ಹೀನ ಮನಸ್ಥಿತಿಯ ಪುರುಷರ ಸಂಖ್ಯೆಯೂ ಕಡಿಮೆ ಇಲ್ಲ. ಜಿಮ್-ಫಿಟ್ನೆಸ್‌ ಸೆಂಟರ್‌ಗೆ ಹೋದವರೆಲ್ಲಾ ಹಾಗೆ ಮಾಡುವುದಿಲ್ಲ. ಆದರೆ, ಹೀಗೆ ಮಾಡುವವರು ಅಲ್ಲಿಗೆ ಹೋದವರೇ ಎಂಬುದು ಸಹಿತ ಅಷ್ಟೇ ಸ್ಪಷ್ಟ.

- - -

* ದಾವಣಗೆರೆ ಹಳೆ ಭಾಗದ ಹೆಣ್ಮಕ್ಕಳೂ ಸುರಕ್ಷಿತವಲ್ಲ! ಮಹಿಳೆಯರು ಮುಜುಗರಕ್ಕೆ ಒಳಗಾಗುವಂತಹ ವಾತಾವರಣ ಇಂತಹ ಜಿಮ್‌, ಫಿಟ್ನೆಸ್ ಸೆಂಟರ್‌ಗಳಲ್ಲಿ ಇರುತ್ತದೆ. ಕೆಲವೊಂದು ಜಿಮ್‌ಗಳಲ್ಲಂತೂ ಟ್ರೈನರ್‌ಗಳು, ಪರ್ಸನಲ್ ಟ್ರೈನರ್‌ಗಳು ಅಂತಾ ಇರುವವರು ಹೊಸದಾಗಿ ಸೇರ್ಪಡೆಯಾಗುವ, ಫಿಟ್ನೆಸ್‌ಗೆಂದು ಬರುವ ವಿದ್ಯಾರ್ಥಿನಿಯರು, ಯುವತಿಯರು, ಮಹಿಳೆಯರನ್ನು ನೋಡಿ, ಅದು ನನಗೆ, ಅವಳು ನನಗೆ ಅಂತೆಲ್ಲಾ ಕಣ್ಸನ್ನೆ, ಮಾತಾಡಿಕೊಂಡು ವರ್ತಿಸುತ್ತಿದ್ದಾರೆಂದರೆ ಜಿಮ್ ಮತ್ತು ಫಿಟ್ನೆಸ್ ಸೆಂಟರ್‌ಗಳಿಗೆ ಹೋಗುವ ಹೆಣ್ಣುಮಕ್ಕಳು, ವಿದ್ಯಾರ್ಥಿನಿಯರು, ಯುವತಿಯರು ಒಂದುಕ್ಷಣ ಆಲೋಚಿಸಬೇಕು.

ಹೀಗೆ ಕಳಿಸುವ ಕುಟುಂಬಗಳ ಹಿರಿಯರು, ಗಂಡ, ಸಹೋದರರು ಸಹಿತ ಜಿಮ್‌, ಫಿಟ್ನೆಸ್‌ ಸೆಂಟರ್‌ ಮಾಲೀಕರು, ಟ್ರೈನರ್‌, ಪರ್ಸನಲ್ ಟ್ರೈನರ್‌ಗಳ ಪೂರ್ವಾಪರ ತಿಳಿಯಬೇಕಾದ ಅನಿವಾರ್ಯತೆ ಇದೆ. ಪ್ರತಿಷ್ಟಿತ ಬಡಾವಣೆ, ಹೊಸ ಬಡಾವಣೆಗಳ, ಸಾಮಾನ್ಯ ಬಡಾವಣೆಗಳಲ್ಲಷ್ಟೇ ಅಲ್ಲ, ದಾವಣಗೆರೆ ಹಳೇ ಭಾಗದಲ್ಲೂ ಹೆಚ್ಚಿನ ಮಹಿಳೆಯರು, ವಿದ್ಯಾರ್ಥಿನಿಯರು, ಯುವತಿಯರು ಜಿಮ್, ಫಿಟ್ನೆಸ್ ಅಂತೆಲ್ಲಾ ಹೋಗುತ್ತಾರೆ. ಅಲ್ಲಿಯೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗೇನೂ ಇಲ್ಲ.

ಪ್ರತಿದಿನ ಕಡ್ಡಾಯವಾಗಿ ಜಿಮ್‌ಗೆ ಹೋಗುತ್ತಿದ್ದಾರೆಂದರೆ, ನಿಮ್ಮ ಮನೆಯ ಹೆಣ್ಣುಮಕ್ಕಳ ಮಾತು, ವರ್ತನೆಯಲ್ಲಿ ವ್ಯತ್ಯಾಸ ಕಂಡುಬರುತ್ತಿದ್ದರೆ ಅಂತಹ ಕುಟುಂಬಗಳು ಎಚ್ಚರಗೊಳ್ಳಬೇಕಾಗಿದೆ. ಎಲ್ಲರೆದುರು ನಯ ನಾಜೂಕಿನಲ್ಲೇ ಮಾತನಾಡುವ ಇಂತಹ ಟ್ರೈನರ್‌ಗಳು ತಾವು ತರಬೇತಿ ನೀಡುವ ಮಹಿಳೆಯರು, ಯುವತಿಯರು, ವಿದ್ಯಾರ್ಥಿನಿಯರ ಜೊತೆಗೆ ಮಾತನಾಡುವ ಮಾತುಗಳು, ಏಕವಚನದಲ್ಲಿ ನಿಂದಿಸುವುದನ್ನು ಯಾವ ಕುಟುಂಬ ಸಹ ಸಹಿಸುವುದಿಲ್ಲ. ಅಂತಹ ನಿದರ್ಶನಗಳೇನೂ ಕಡಿಮೆ ಇಲ್ಲಿಲ್ಲ.

ಇನ್ನಾದರೂ ಕುಟುಂಬಗಳು, ಹಿರಿಯರು, ವಿಶೇಷವಾಗಿ ಹೆಣ್ಣು ಮಕ್ಕಳು ಜಾಗ್ರತರಾಗಬೇಕಿದೆ. ಮಹಿಳಾ ಜಿಮ್‌, ಫಿಟ್ನೆಸ್ ಸೆಂಟರ್, ಮಹಿಳಾಮಾಲೀಕರು, ಸರ್ಟಿಫೈಡ್‌ ಮಹಿಳಾ ಟ್ರೈನರ್‌ಗಳಲ್ಲೇ ತರಬೇತಿ ಪಡೆಯುವುದು ಸೂಕ್ತ ಎಂಬ ಸಲಹೆಗಳು ವ್ಯಕ್ತವಾಗುತ್ತಿವೆ.

- - -

-(ಸಾಂದರ್ಭಿಕ ಫೋಟೋಗಳು).

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಕರ ಹಕ್ಕುಗಳ ರಕ್ಷಣೆಗೆ ಸಂಸತ್ತಿನಲ್ಲಿ ಧ್ವನಿಯಾಗಲು ಮನವಿ
ಸಿದ್ದೇಶ್ವರ ಕೈ ಬಲಪಡಿಸಲು ಕಾರ್ಯಕರ್ತರಿಗೆ ಸುನಿಲ ಕರೆ