- ಹೊನ್ನಾಳಿಯಲ್ಲಿ 126ನೇ ಜಯಂತಿ ಕಾರ್ಯಕ್ರಮದಲ್ಲಿ ಕಡದಕಟ್ಟೆ ಜಗದೀಶ್ ಅಭಿಮತ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಅವಿಭಜಿತ ಹೊನ್ನಾಳಿ ತಾಲೂಕಿನ ಹೊಸಕೊಪ್ಪದ ದಿವಂಗತ ಎಚ್.ಎಸ್. ರುದ್ರಪ್ಪ ಅವರು ನಾಡು, ದೇಶ ಕಂಡ ಅಪರೂಪದ ವಿಶಿಷ್ಟ ವ್ಯಕ್ತಿತ್ವದ, ಸದಾ ರೈತರ ಹಿತಾಸಕ್ತಿಗಾಗಿ ಹೋರಾಟ ನಡೆಸಿದ ಗಾಂಧಿವಾದಿ, ಧೀಮಂತ ನಾಯಕರಾಗಿದ್ದರು ಎಂದು ರೈತ ಯುವ ಮುಖಂಡ ಕಡದಕಟ್ಟೆ ಜಗದೀಶ್ ಹೇಳಿದರು.ಪಟ್ಟಣದ ಯುಟಿಪಿ ಸರ್ಕಲ್‌ನಲ್ಲಿ ಬುಧವಾರ ಆಯೋಜಿಸಲಾಗಿದ್ದ ಎಚ್.ಎಸ್.ರುದ್ರಪ್ಪ ಅವರ 126ನೇ ಜಯಂತಿ ಕಾರ್ಯಕ್ರಮದಲ್ಲಿ ಅವರ ಪುತ್ಥಳಿಗೆ ಮಾಲಾರ್ಪಣೆ ಹಾಗೂ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಹಾಲಿ ಶಾಸಕ ಡಿ.ಜಿ.ಶಾಂತನಗೌಡ ಅವರ ಪುತ್ರರೂ ಆದ ಡಿ.ಎಸ್. ಸುರೇಂದ್ರ ಗೌಡ ಅವರು ದಿ. ಎಚ್.ಎಸ್. ರುದ್ರಪ್ಪ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಿದರು. ರುದ್ರಪ್ಪ ಅಪ್ಪಟ ಗಾಂಧಿವಾದಿಗಳಾಗಿ ರಾಜಕೀಯ ಕ್ಷೇತ್ರದಲ್ಲಿನ ಹಲವಾರು ಹಂತಗಳಲ್ಲಿ ಅಧಿಕಾರ ನಡೆಸಿದ ಪ್ರತಿಭಾವಂತರಾಗಿದ್ದರು. ಜೊತೆಗೆ ನಾಡಿನ ರೈತ ಸಮುದಾಯದ ಒಳಿತಿಗಾಗಿ ಕೂಡ ಸಾಕಷ್ಟು ಹೋರಾಟ, ಸೇವೆಗಳನ್ನು ಸಲ್ಲಿಸಿದ್ದಾರೆ ಎಂದರು.
- - -
ಹೊನ್ನಾಳಿ ಯುಟಿಪಿ ಸರ್ಕಲ್ ಬಳಿ ಬುಧವಾರ ರೈತ ಮುಖಂಡ, ಮಾಜಿ ಸಚಿವರಾದ ದಿವಂಗತ ಎಚ್.ಎಸ್. ರುದ್ರಪ್ಪ ಜನ್ಮದಿನ ಕಾರ್ಯಕ್ರಮದಲ್ಲಿ ರೈತ ಸಂಘದಿಂದ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಲಾಯಿತು. ರೈತ ಮುಖಂಡ ಜಗದೀಶ್, ಡಿ.ಎಸ್. ಸುರೇಂದ್ರ ಗೌಡ, ಮುಖಂಡರು ಇದ್ದರು.