ಕನ್ನಡಪ್ರಭ ವಾರ್ತೆ ಮೈಸೂರು
ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಡಿಎಯಲ್ಲಿ ಬಹಳ ವರ್ಷದಿಂದ ರೈತರಿಗೆ ಪರಿಹಾರ ಕೊಡುವ ವಿಚಾರ ಗೊಂದಲದಲ್ಲಿತ್ತು. ಹಲವರು ಕೋರ್ಟ್ ಮೂಲಕ ಪರಿಹಾರಕ್ಕೆ ಬರುತ್ತಿದ್ದರು. ಕೋರ್ಟ್ ಕೂಡ ಭೂಸ್ವಾಧೀನ ಆಗದ ಭೂಮಿಗಳಿಗೆ 2013ರ ಕಾಯ್ದೆ ಪ್ರಕಾರ ಪರಿಹಾರ ಕೊಡುವಂತೆ ಸೂಚಿಸುತ್ತಿತ್ತು. ಆಗ ನಾವು ಹೊಸದಾಗಿ ನೋಟಿಫಿಕೇಶನ್ ಮಾಡಿ ಪರಿಹಾರ ಕೊಡಬೇಕಾಗಿತ್ತು. ಆಗ ಪ್ರಾಧಿಕಾರಕ್ಕೆ ಹೆಚ್ಚು ನಷ್ಟ ಉಂಟಾಗುತ್ತಿತ್ತು. ಇದನ್ನು ತಪ್ಪಿಸಲು 2020ರಲ್ಲಿ ಪ್ರಾಧಿಕಾರ 50:50 ಅನುಪಾತ ಅನುಸರಿಸಲು ನಿರ್ಣಯ ಮಾಡಿತ್ತು ಎಂದು ಹೇಳಿದರು.
ಈ ನಿರ್ಧಾರದ ಹಿಂದೆ ಪ್ರಾಧಿಕಾರಕ್ಕೆ ಆಗುವ ನಷ್ಟ ಉಳಿಸುವ ಉದ್ದೇಶ ಇತ್ತು. ನಿಯಮದಂತೆ ಪ್ರಾಧಿಕಾರ ತೀರ್ಮಾನ ಮಾಡಿ ನಡೆದುಕೊಂಡಿದೆ. ಅದನ್ನು ಜಾರಿ ಮಾಡುವ ಅಧಿಕಾರಿಗಳು ತಪ್ಪು ಮಾಡಿದ್ದರೇ ಪ್ರಾಧಿಕಾರ ಹೊಣೆಯಲ್ಲ. ಇದು ನನ್ನೊಬ್ಬನ ತೀರ್ಮಾನ ಎಂದು ಬಿಂಬಿಸಲು ಹೊರಟಿದ್ದಾರೆ. ಪ್ರಾಧಿಕಾರದ ಪ್ರತಿಯೊಬ್ಬ ಸದಸ್ಯರ ಸಲಹೆ ಪಡೆದೇ ನಿರ್ಣಯ ಮಾಡಿರುವುದು ಎಂದು ಅವರು ತಿಳಿಸಿದರು.ಪ್ರಾಧಿಕಾರದ ನಿರ್ಣಯ
ಭೂಮಿ ಕಳೆದುಕೊಂಡವರು ಕೋರ್ಟ್ ಗೆ ಹೋಗುತ್ತಿದ್ದರು. ಅಧಿಕಾರಿಗಳಿಗೆ ಪ್ರತಿದಿನ ಕೋರ್ಟ್ ಗೆ ಹೋಗುವುದು ಕಷ್ಟವಾಗುತ್ತಿತ್ತು. ಹೀಗಾಗಿ, ಎಲ್ಲವನ್ನೂ ಚರ್ಚಿಸಿ ಸುಂದರಮ್ಮ ಪ್ರಕರಣ, ಬೆಂಗಳೂರಿನ ಬೆಳಿಯಪ್ಪ ಹಾಗೂ ಬಿಡಿಎ ನಡುವೆ ನಡೆದ ಪ್ರಕರಣ ಹಾಗೂ ಐವರು ನ್ಯಾಯಧೀಶರ ಕೊಟ್ಟಿರುವ ತೀರ್ಪಿನ ಆದೇಶದ ಮೇಲೆ 50:50 ಅನುಪಾತದಡಿ ನಿವೇಶನ ಕೊಟ್ಟಿದ್ದೇವೆ. ಪ್ರಾಧಿಕಾರಕ್ಕೆ ಆಗುವ ನಷ್ಟವನ್ನು ತಡೆದಿದ್ದೇವೆ. ಕಾನೂನು ವ್ಯಾಪ್ತಿಯಲ್ಲಿ 50:50 ಅನುಪಾತದಡಿ ಭೂಮಿ ಕಳೆದುಕೊಂಡವರಿಗೆ ನಿವೇಶನ ಕೊಟ್ಟಿದ್ದೇವೆ. ಎಂಡಿಎ ಹಗರಣದ ಬಗ್ಗೆ ಸರ್ಕಾರ ಸೂಕ್ತ ತನಿಖೆ ನಡೆಯಲಿ ಎಂದು ಅವರು ಹೇಳಿದರು.
ಅಧಿಕಾರಿಗಳು ಭ್ರಷ್ಟಾಚಾರ ಮಾಡಿದ್ದರೆ ನಾವು ಹೊಣೆಯಲ್ಲ
ಸಿಎಂ ಪತ್ನಿಗೆ ನಿವೇಶನ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರತ್ಯೇಕ ಪ್ರಕರಣಗಳ ಬಗ್ಗೆ ನನಗೆ ಗೊತ್ತಿಲ್ಲ. ಪಾರ್ವತಿ ಅವರ ಕೇಸ್ ನಾನು ಸ್ಟಡಿ ಮಾಡಿಲ್ಲ ಎಂದರು.