ಬಸವಣ್ಣನವರಿಗೆ ಆಪ್ತರಾಗಿದ್ದವರು ಹಡಪದ ಅಪ್ಪಣ್ಣ

KannadaprabhaNewsNetwork | Published : Apr 23, 2025 2:04 AM

ಸಾರಾಂಶ

12ನೇ ಶತಮಾನದ ಅನುಭವ ಮಂಟಪದಲ್ಲಿ ಅನೇಕ ಶರಣರು ಬಸವಣ್ಣವರ ಜೊತೆಯಲ್ಲಿದ್ದರು. ಅದರಲ್ಲಿ ಬಸವಣ್ಣವರಿಗೆ ಆಪ್ತರಾಗಿದ್ದವರು ಹಡಪದ ಅಪ್ಪಣ್ಣನವರು ಎಂದು ಉಪನ್ಯಾಸಕಿ ಶಕುಂತಲಾ ಹಂಪಿಮಠ ಹೇಳಿದರು.

ಮುಂಡರಗಿ: 12ನೇ ಶತಮಾನದ ಅನುಭವ ಮಂಟಪದಲ್ಲಿ ಅನೇಕ ಶರಣರು ಬಸವಣ್ಣವರ ಜೊತೆಯಲ್ಲಿದ್ದರು. ಅದರಲ್ಲಿ ಬಸವಣ್ಣವರಿಗೆ ಆಪ್ತರಾಗಿದ್ದವರು ಹಡಪದ ಅಪ್ಪಣ್ಣನವರು ಎಂದು ಉಪನ್ಯಾಸಕಿ ಶಕುಂತಲಾ ಹಂಪಿಮಠ ಹೇಳಿದರು.ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ‌, ‌ಶರಣ ಸಾಹಿತ್ಯ ಪರಿಷತ್ತು, ಚೈತನ್ಯ ಶಿಕ್ಷಣ ಸಂಸ್ಥೆಯ ಸೌರಭ ಆಶ್ರಯದಲ್ಲಿ ನಡೆದ 15ನೇ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಹಡಪದ ಅಪ್ಪಣ್ಣನವರ ಕುರಿತು ಅವರು ಮಾತನಾಡಿದರು.

ಹಿಂದಿನ ಕಾಲದಲ್ಲಿ ಬೆಳಗ್ಗೆ ಅಥವಾ ಯಾವುದಾದರೂ ಶುಭ ಸಮಾರಂಭಗಳಿಗೆ ಹೊರಡುವಾಗ ಹಡಪದ ಸಮುದಾಯದವರು ಎದುರಿಗೆ ಬರಬಾರದು ಎಂದು ಮೂಢನಂಬಿಕೆ ಇತ್ತು. ಅದನ್ನು ಸೂಕ್ಷ್ಮವಾಗಿ ಗಮನಿಸಿದ ಅಣ್ಣ ಬಸವಣ್ಣವರು ಹಡಪದ ಅಪ್ಪಣ್ಣನವರನ್ನು ತಮ್ಮ ಆಪ್ತ ಕಾರ್ಯದರ್ಶಿಯನ್ನಾಗಿ ಮಾಡಿಕೊಂಡು ತಮ್ಮನ್ನು ಭೇಟಿಯಾಗಲು ಬರುವವರು ಎಲ್ಲರೂ ಮೊದಲು ಅಪ್ಪಣ್ಣನವರನ್ನು ಕಂಡು ನಂತರ ಒಳಗೆ ಹೋಗುವಂತೆ ಮಾಡಿ ಜನರಲ್ಲಿದ್ದ ಮೂಢ ನಂಬಿಕೆಯನ್ನು ತೆಗೆದು ಹಾಕಿದ್ದರು. ಅಪ್ಪಣ್ಣ ಹಾಗೂ ಅವರ ಧರ್ಮಪತ್ನಿ ಸಹ ಶ್ರೇಷ್ಠ ವಚನಕಾರರಾಗಿ ಅನೇಕ ವಚನಗಳನ್ನು ರಚಿಸಿದ್ದರು ಎಂದರು.ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸಂತೋಷ ಹಿರೇಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ಶರಣರ ಬದುಕು ಶ್ರೆಷ್ಠವಾದದ್ದು. ಅವರು ತಮ್ಮ ವಚನಗಳ ಮೂಲಕ ಸಮಾಜಕ್ಕೆ ಅರಿವು ಮೂಡಿಸುತ್ತಿದ್ದರು. ಹಡಪದ ಅಪ್ಪಣ್ಣವರು ಬಸವಣ್ಣವರಿಗೆ ಕಾಯಕದ ಮೂಲಕ ಬಹಳ ಹತ್ತಿರವಾಗಿದ್ದರು. ಶರಣ ಚಿಂತನ ಮಾಲೆಯ ಮೂಲಕ ಶರಣರ ನುಡಿಗಳನ್ನು ಆಲಿಸೋಣ ಎಂದರು.ವಿಶ್ರಾಂತ ಪ್ರಾ.ಡಾ.ವಿ.ಕೆ.ಕೊಳೂರಮಠ ಮಾತನಾಡಿದರು.ಈ ಸಂದರ್ಭದಲ್ಲಿ ಆರ್.ಎಲ್.ಪೊಲೀಸ್ ಪಾಟೀಲ, ಪ್ರತಿಭಾ ಹೊಸಮನಿ, ಸಿ.ಕೆ.ಗಣಪ್ಪನವರ, ಮಹೇಶ ಮೇಟಿ, ಹನುಮರಡ್ಡಿ ಇಟಗಿ, ವಿ.ಎಫ್.ಗುಡದಪ್ಪನವರು, ಎಂ.ಐ. ಮುಲ್ಲಾ, ಕೃಷ್ಣಾ ಸಾವುಕಾರ, ಜ್ಯೋತಿ ಗಣಪ್ಪನವರ, ಮಧುಮತಿ ಇಳಕಲ್, ಕಾವೇರಿ ಬೋಲಾ, ಜಯಶ್ರೀ ಅಳವಂಡಿ, ಉಮಾ ದೊಡ್ಡಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಸಾಪ ಗೌರವ ಕಾರ್ಯದರ್ಶಿ ಮಂಜುನಾಥ ಮುಧೋಳ ಪ್ರಾಸ್ತಾವಿಕವಾಗಿ ಮಾತನಾಡಿದರು.ವೀಣಾ ಪಾಟೀಲ ಸ್ವಾಗತಿಸಿದರು. ಕಸಾಪ ಅಧ್ಯಕ್ಷ ಎಂ.ಜಿ.ಗಚ್ಚಣ್ಣವರ ವಂದಿಸಿದರು.

Share this article