ಫಲಾನುಭವಿಗಳ ಮನೆ ತಲುಪುತ್ತಿರುವ ಗ್ಯಾರಂಟಿ ಯೋಜನೆ: ಗುರುಬಸವರಾಜ

KannadaprabhaNewsNetwork |  
Published : Mar 19, 2025, 12:33 AM IST
ಚಿತ್ರ :೧೮ಎಚ್‌ಬಿಎಚ್೧ಹಗರಿಬೊಮ್ಮನಹಳ್ಳಿ ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಸಮಿತಿಯ ಸಭೆಯಲ್ಲಿ ಸದಸ್ಯ ಗೌರಜ್ಜನವರ ಗಿರೀಶ್ ಮಾತನಾಡಿದರು. | Kannada Prabha

ಸಾರಾಂಶ

ತಾಲೂಕಿನಾದ್ಯಂತ ಸರ್ಕಾರದ ಗ್ಯಾರಂಟಿ ಯೋಜನೆಗಳು ಫಲಾನುಭವಿಗಳ ಮನೆ ತಲುಪುತ್ತಿವೆ.

ತಾಪಂ ಸಭಾಂಗಣದಲ್ಲಿ ಗ್ಯಾರಂಟಿ ಸಮಿತಿ ಸಭೆಬಸ್‌ಗಳಿಗೆ ತಂಬ್ರಹಳ್ಳಿ ಹೆಸರಿನ ನಾಮಫಲಕ ಹಾಕಲು ಒತ್ತಾಯಕನ್ನಡಪ್ರಭ ವಾರ್ತೆ ಹಗರಿಬೊಮ್ಮನಹಳ್ಳಿತಾಲೂಕಿನಾದ್ಯಂತ ಸರ್ಕಾರದ ಗ್ಯಾರಂಟಿ ಯೋಜನೆಗಳು ಫಲಾನುಭವಿಗಳ ಮನೆ ತಲುಪುತ್ತಿವೆ ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಗುರುಬಸವರಾಜ ಸೊನ್ನದ್ ತಿಳಿಸಿದರು.ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಸಮಿತಿಯ ಮೊದಲ ಸಭೆಯಲ್ಲಿ ಅವರು ಮಾತನಾಡಿದರು. ಗ್ಯಾರಂಟಿ ಯೋಜನೆಗಳಿಂದ ಯಾರೊಬ್ಬರೂ ವಂಚಿತವಾಗದಂತೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಗೃಹಲಕ್ಷ್ಮಿ ಯೋಜನೆಯಿಂದ ತಾಲೂಕಿನಲ್ಲಿ ಒಟ್ಟು ೩೯೨೪೬ ಫಲಾನುಭವಿಗಳಿಗೆ ಒಟ್ಟು ೧೭ ತಿಂಗಳಲ್ಲಿ ₹೧೦೯ ಕೋಟಿ ವಿನಿಯೋಗವಾಗಿದೆ. ಶಕ್ತಿಯೋಜನೆ ತಿಂಗಳಿಗೆ ₹೨ ಕೋಟಿ ತಾಲೂಕಿನಲ್ಲಿ ವಿನಿಯೋಗವಾಗುತ್ತಿದೆ. ಶೇ.೯೮ರಷ್ಟು ಗುರಿ ಸಾಧನೆ ಮಾಡಿರುವುದು ಸರ್ಕಾರದ ಸೌಲಭ್ಯ ಸಮರ್ಪಕವಾಗಿ ತಲುಪಿರುವುದಕ್ಕೆ ಸಾಕ್ಷಿಯಂತಿದೆ ಎಂದರು.ಸಮಿತಿ ಸದಸ್ಯ ಗೌರಜ್ಜನವರ್ ಗಿರೀಶ್ ಮಾತನಾಡಿ, ಯುವನಿಧಿಯ ಬಗ್ಗೆ ಅಧಿಕಾರಿಗಳು ವ್ಯಾಪಕ ಪ್ರಚಾರ ಮಾಡುವ ಅಗತ್ಯತೆ ಇದೆ. ಸರ್ಕಾರ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುತ್ತಿದ್ದು, ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದೆ. ತಂಬ್ರಹಳ್ಳಿಯಿಂದ ಸಾವಿರಾರು ವಿದ್ಯಾರ್ಥಿಗಳು ಪಟ್ಟಣದ ಶಾಲಾ-ಕಾಲೇಜು ಆಶ್ರಯಿಸಿದ್ದು, ಸಮರ್ಪಕವಾಗಿ ಬಸ್ ವ್ಯವಸ್ಥೆ ಕಲ್ಪಿಸಬೇಕು. ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಬಸ್ ವ್ಯವಸ್ಥೆಗೊಳಿಸಬೇಕು. ಪರೀಕ್ಷೆ ಬರೆವ ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸುವಂತೆ ಸರ್ಕಾರದ ಆದೇಶವಿದ್ದು, ನಿರ್ವಾಹಕರು ಅನಗತ್ಯ ಕಿರಿಕಿರಿ ಮಾಡಬಾರದು. ತಂಬ್ರಹಳ್ಳಿ ಮುಖ್ಯ ಹೋಬಳಿಯಾಗಿದ್ದು, ಮಾರ್ಗವಾಗಿ ಹೋಗುವ ಎಲ್ಲಾ ಬಸ್‌ಗಳಿಗೆ ತಂಬ್ರಹಳ್ಳಿ ಹೆಸರಿನ ನಾಮಫಲಕ ಹಾಕಬೇಕು. ಅನ್ನಭಾಗ್ಯ ಅಕ್ಕಿಯನ್ನು ಫಲಾನುಭವಿಗಳು ಕಾಳಸಂತೆಯಲ್ಲಿ ಮಾರುವುದನ್ನು ನಿಲ್ಲಿಸಬೇಕು ಎಂದರು.ಈ ಕುರಿತಂತೆ ಸಮಿತಿ ಕಾರ್ಯದರ್ಶಿ ಇಒ ಡಾ. ಜಿ. ಪರಮೇಶ್ವರ ಮಾತನಾಡಿ, ಸರ್ಕಾರದ ಗ್ಯಾರಂಟಿ ಯೋಜನೆಗಳು ಸದ್ಬಳಕೆಯಾಗುತ್ತಿವೆ. ಆರ್ಥಿಕ, ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಿದೆ. ತಾಲೂಕು ಮಟ್ಟದ ಅಧಿಕಾರಿಗಳು ಗ್ಯಾರಂಟಿ ಸಮಿತಿಯ ಅಧ್ಯಕ್ಷರು, ಸದಸ್ಯರುಗಳಿಗೆ ಪೂರಕವಾಗಿ ಕೆಲಸ ನಿರ್ವಹಿಸಬೇಕು ಎಂದರು.ಸದಸ್ಯರಾದ ಸಂತೋಷ್, ಕದರಮ್ಮನವರ ನಾಗಮ್ಮ, ಸರ್ದಾರ್ ರಾಮಪ್ಪ, ಹನುಮಂತಪ್ಪ, ಉಲುವತ್ತಿ ರಾಘವೇಂದ್ರ, ಸುಧಾ ಉಮೇಶ್ ಗೌಡ, ಸದ್ದಾಂ, ಉಪ್ಪಾರ್ ಕಾರ್ತಿಕ್, ಉಪ್ಪಾರ ಪ್ರಕಾಶ, ವೆಂಕಟೇಶ ನಾಯ್ಕ, ಮೇಟಿ ಮಂಜುನಾಥ, ದೊಡ್ಡಬಸಪ್ಪ, ಜೆಸ್ಕಾಂ ಎಇಇ ನಾಗರಾಜ, ಸಿಡಿಪಿಒ ಬೋರೇಗೌಡ, ಉದ್ಯೋಗ ಮತ್ತು ಕೌಶಲಾಭಿವೃದ್ಧಿ ಇಲಾಖೆ ವೆಂಕಟೇಶ್ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!