ಕನ್ನಡಪ್ರಭ ವಾರ್ತೆ ಭದ್ರಾವತಿ
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಈ ಜಾತ್ರಾ ಮಹೋತ್ಸವದ ವಿಶೇಷ ಎಂದರೆ ಎಲ್ಲಾ ಜಾತಿ, ಧರ್ಮದವರು ಸೇರಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.
ಏ.೨೦ರ ಸೋಮವಾರ ಬೆಳಿಗ್ಗೆ ೮ ಗಂಟೆಗೆ ಹೊಸ ಸಿಡಿ ಮರ ಪ್ರತಿಷ್ಠಾಪನೆ ಹಾಗೂ ಧ್ವಜಾರೋಹಣ ಕಾರ್ಯಕ್ರಮದೊಂದಿಗೆ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗುವುದು. ೨೧ರ ಮಂಗಳವಾರ ಬೆಳಿಗ್ಗೆ ೮ ಗಂಟೆಗೆ ದೇವರುಗಳಿಗೆ ಅಭಿಷೇಕ, ಮಧ್ಯಾಹ್ನ ೧೧ ಗಂಟೆಗೆ ಮಹಾಮಂಗಳಾರತಿ ನಂತರ ಅನ್ನದಾನ ನಡೆಯಲಿದೆ ಎಂದರು.ರಾತ್ರಿ ೮ ಗಂಟೆಗೆ ವಿಶೇಷ ಆಕರ್ಷಕ ಜಾನಪದ ಕಲಾ ತಂಡಗಳೊಂದಿಗೆ`ಶ್ರೀ ದೇವರುಗಳ ರಾಜಬೀದಿ ಉತ್ಸವ ನಡೆಯಲಿದೆ. ನಂತರ ಆಯೋಜಿಸಲಾಗಿರುವ ಸಭಾ ಕಾರ್ಯಕ್ರಮ ಸಂಸದ ಬಿ.ವೈ ರಾಘವೇಂದ್ರ, ಶಾಸಕರಾದ ಬಿ.ಕೆ ಸಂಗಮೇಶ್ವರ್, ಬಲ್ಕೀಶ್ ಬಾನು, ಸಮಾಜ ಸೇವಕ ಸಿ. ಮಹೇಶ್ ಕುಮಾರ್ ಸೇರಿದಂತೆ ಇನ್ನಿತರರು ಉದ್ಘಾಟಿಸುವರು. ತಹಸೀಲ್ದಾರ್ ಪರುಸಪ್ಪ ಕುರುಬರ, ನಗರಸಭೆ ಸದಸ್ಯರಾದ ಅನುಪಮ ಚನ್ನೇಶ್ ಮತ್ತು ಆರ್. ಶ್ರೇಯಸ್(ಚಿಟ್ಟೆ) ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು ಎಂದರು.
ಸಂಜೆ ೬.೩೦ಕ್ಕೆ ದೇವಸ್ಥಾನದ ಮುಂಭಾಗದಲ್ಲಿ ರಸಮಂಜರಿ ಕಾರ್ಯಕ್ರಮ ಮತ್ತು ಸನ್ಮಾನ ಸಮಾರಂಭ ನಡೆಯಲಿದ್ದು, ಬಿ.ಎಸ್ ಗಣೇಶ್, ಟಿಪ್ಪು ಸುಲ್ತಾನ್, ಮಹೇಶ್, ಚಂದ್ರು, ಸಂದೀಪ್, ಪ್ರಶಾಂತ್, ಮೆಹಬೂಬ್, ಫೀರ್‌ಷರೀಫ್, ಸೌಮ್ಯ ನಟರಾಜ್, ರಾಜೇಶ್ವರಿ ರಾಜು, ಪ್ರಸನ್ನ, ಕೃಷ್ಣ(ಕೋಟಿ), ಪರಶುರಾಮ, ಸಂದೀಪ್ ಹೊನ್ನವಿಲೆ, ಕಿರಣ್, ಕೇಶವ ಕೆಂಚಪ್ಪ, ಎಂ.ಎ ಅಜಿತ್, ಬಿ.ಕೆ ಲಕ್ಷ್ಮಣ್, ವೀಣಾ ಕೃಷ್ಣಮೂರ್ತಿ, ವೈ. ಸತ್ಯನಾರಾಯಣ, ಹೇಮಾವತಿ ಶಿವಾನಂದ್, ಸೋಮಶೇಖರ್, ಶಿವು ಪಾಟೀಲ್ ಮತ್ತು ಕುಮಾರ್ ಅವರನ್ನು ಸನ್ಮಾನಿಸಲಾಗುವುದು ಎಂದರು.
ಸಂಜೆ ೬.೩೦ಕ್ಕೆ ರಸಮಂಜರಿ ಕಾರ್ಯಕ್ರಮ ನಡೆಯಲಿದ್ದು, ಶಿವಕುಮಾರ್, ಉಮೇಶ್, ಶಾಂತಮ್ಮ ಹೊನ್ನೂರಪ್ಪ, ಡಾ. ಅಶ್ವಥ್ ನಾರಾಯಣ, ಜಯಮ್ಮ ಯಲ್ಲಪ್ಪ, ವಿ.ಟಿ ವಿಜಯಣ್ಣ, ಗೀತಮ್ಮ ನಾಗರಾಜ್, ಸಂಜಯ್, ಸರೋಜಮ್ಮ ಬಸಣ್ಣ, ಲಕ್ಷ್ಮೀಕಾಂತ, ಗಣೇಶ್ ಸಾಮಿಲ್, ವೆಂಕಟೇಶ್, ಅಶೋಕ್, ಗಿರೀಶ್, ನೇತ್ರಮ್ಮ ಮತ್ತು ಮಕ್ಕಳು, ನಾಗರತ್ನ ವಿರುಪಾಕ್ಷಪ್ಪ, ಪ್ರಮೋದ್, ಮೋಹನ್, ಚಂದ್ರಣ್ಣ, ರಂಜಿತ್, ಚಂದ್ರಮ್ಮ ಪರಶುರಾಮ್, ಮಂಜೇಶ್ ಮತ್ತು ಮಂಜುನಾಥ್ ಸೇರಿದಂತೆ ಇನ್ನಿತರರಿಗೆ ಸನ್ಮಾನ ನಡೆಯಲಿದೆ. ಕುಸ್ತಿ ಪಂದ್ಯಾವಳಿ ೨೪ ರಿಂದ ೨೬ರವರೆಗೆ ೩ ದಿನಗಳ ಕಾಲ ಮಧ್ಯಾಹ್ನ ೩ ಗಂಟೆಯಿಂದ ರಾತ್ರಿ ೧೦ ಗಂಟೆವರೆಗೆ ನಡೆಯಲಿದೆ. ಈ ಬಾರಿ ವಿಶೇಷ ಎಂದರೆ ಎರಡು ಬೆಳ್ಳಿ ಗದೆಯ ಕುಸ್ತಿಯನ್ನು ಆಯೋಜಿಸಲಾಗಿದೆ. ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಕೋರಿದರು.