ಹಲಗೂರು: ನಿವೃತ್ತ ಪ್ರಾಂಶುಪಾಲ ಆಲಂಗೂರ್ ಮಂಜುನಾಥ್‌ಗೆ ಬೀಳ್ಕೊಡುಗೆ

KannadaprabhaNewsNetwork |  
Published : Jul 01, 2026, 01:45 AM IST
30ಕೆಎಂಎನ್ ಡಿ15 | Kannada Prabha

ಸಾರಾಂಶ

ನಾನು ಕರ್ತವ್ಯ ನಿರ್ವಹಿಸುವಾಗ ಎಲ್ಲರೂ ಪೂರ್ಣ ಸಹಕಾರ ನೀಡಿದ್ದೀರಿ. ನನಗೆ ನೀಡಿದ ಸಹಕಾರವನ್ನು ಕೃಷ್ಣೇಗೌಡರಿಗೂ ಕಾಲೇಜಿನ ಅಭಿವೃದ್ಧಿಗೆ ಸಹಕರಿಸಿ. ಒಂದು ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರು ಒಗ್ಗಟ್ಟಾಗಿರಬೇಕು. ಆಗ ಮಾತ್ರ ಸಂಸ್ಥೆ ಉತ್ತಮ ರೀತಿಯಲ್ಲಿ ಬೆಳೆಯಲು ಸಾಧ್ಯ.

ಹಲಗೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಆಲಂಗೂರು ಮಂಜುನಾಥ್ ಅವರು ನಿವೃತ್ತರಾದ ಹಿನ್ನೆಲೆಯಲ್ಲಿ ಕಾಲೇಜು ವತಿಯಿಂದ ಮಂಜುನಾಥ್ ಮತ್ತು ಪತ್ನಿ ವಸಂತಿ ಅವರನ್ನು ಅಭಿನಂದಿಸಿ ಬೀಳ್ಕೊಡುಗೆ ನೀಡಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾನು ಕರ್ತವ್ಯ ನಿರ್ವಹಿಸುವಾಗ ಎಲ್ಲರೂ ಪೂರ್ಣ ಸಹಕಾರ ನೀಡಿದ್ದೀರಿ. ನನಗೆ ನೀಡಿದ ಸಹಕಾರವನ್ನು ಕೃಷ್ಣೇಗೌಡರಿಗೂ ಕಾಲೇಜಿನ ಅಭಿವೃದ್ಧಿಗೆ ಸಹಕರಿಸಿ. ಒಂದು ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರು ಒಗ್ಗಟ್ಟಾಗಿರಬೇಕು. ಆಗ ಮಾತ್ರ ಸಂಸ್ಥೆ ಉತ್ತಮ ರೀತಿಯಲ್ಲಿ ಬೆಳೆಯಲು ಸಾಧ್ಯ. ಒಗ್ಗಟ್ಟಾದ್ದು ಕಷ್ಟಪಟ್ಟರೆ ಮಾತ್ರ ಪ್ರತಿಫಲ ಸಿಗುತ್ತದೆ ಎಂದರು.

ಸೀಮಾ ಕೌಸರ್ ಮಾತನಾಡಿ, ಸರಳವಾಗಿದ್ದ ಆಲಗೂರ್ ಮಂಜುನಾಥ್ ಅವರ ಕರ್ತವ್ಯ ನಿಷ್ಠೆ ನಮಗೆಲ್ಲ ಮಾದರಿಯಾಗಿದೆ. ಅವರು ಹೇಳಿಕೊಟ್ಟ ದಾರಿಯಲ್ಲೇ ನಾವು ನಡೆಯಬೇಕು. ಅವರ ಆದರ್ಶ ನಮಗೆಲ್ಲ ಮಾದರಿಯಾಗಲಿದೆ ಎಂದು ಹೇಳಿದರು.

ನೂತನ ಪ್ರಾಂಶುಪಾಲ ಡಾ.ಕೃಷ್ಣೇಗೌಡ ಮಾತನಾಡಿ, ಶಿಸ್ತಿನ ಸಿಪಾಯಿಯಾಗಿದ್ದ ಆಲಂಗೂರು ಮಂಜುನಾಥ ಅವರು ಸಮಯಕ್ಕೆ ಸರಿಯಾಗಿ ಕಾಲೇಜಿಗೆ ಬರುತ್ತಿದ್ದರು. ಕಾಲೇಜಿನ ಅಭಿವೃದ್ಧಿಗೆ ತುಂಬಾ ಶ್ರಮಿಸಿದ್ದಾರೆ. ಅವರಿಗೆ ಸಹಕಾರ ನೀಡಿದಂತೆ ನನಗೂ ಸಹ ಸಹಕಾರ ನೀಡಿ ಎಂದು ಕೋರಿದರು.

ಈ ವೇಳೆ ಉಪನ್ಯಾಸಕರಾದ ಡಾ.ಎನ್.ಎಸ್.ಶಂಕರೇಗೌಡ, ಡಾ.ಶ್ರೀನಿವಾಸ್, ತಾರಾ ಜಯಲಕ್ಷ್ಮಿ, ಗುರುಪ್ರಸಾದ್, ಸುಧಾ ಬಿದರಿ, ಬಿ.ಸಿ.ರವಿ, ಕುಮಾರಸ್ವಾಮಿ, ಆನಂದ್ ನೀಲಿ, ಅತಿಥಿ ಉಪನ್ಯಾಸಕರಾದ ಮೂರ್ತಿ, ಭವ್ಯ, ಮಧುಕುಮಾರ್, ಪ್ರಶಾಂತ್, ರಂಜನ್, ಚೇತಾನಾ ಶ್ರೀ, ರವಿ ಉಪಸ್ಥಿತರಿದ್ದರು.ಡಾ.ಜಿ.ಸಿ.ಬೆಟ್ಟೇಗೌಡ ನೂತನ ಮಂಡ್ಯ ಡಿಎಚ್‌ಒ

ಮಂಡ್ಯ:ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ ಡಾ.ಜಿ.ಸಿ.ಬೆಟ್ಟಸ್ವಾಮಿ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಜಿಲ್ಲಾ ಆರೋಗ್ಯಾಧಿಕಾರಿಯಾಗಿದ್ದ ಡಾ.ಕೆ.ಮೋಹನ್‌ ಅವರನ್ನು ಮೈಸೂರಿಗೆ ವರ್ಗಾವಣೆ ಮಾಡಿರುವುದರಿಂದ ಆ ಸ್ಥಾನಕ್ಕೆ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಯಾಗಿದ್ದ ಡಾ.ಜಿ.ಸಿ.ಬೆಟ್ಟಸ್ವಾಮಿ ಅವರಿಗೆ ಬಡ್ತಿ ನೀಡಲಾಗಿದೆ. ಡಾ.ಕೆ.ಮೋಹನ್‌ ಅವರು ಡೆಕಾಯ್‌ ಆಪರೇಷನ್‌ ಪರಿಚಯಿಸುವ ಮೂಲಕ ಹೆಣ್ಣು ಭ್ರೂಣ ಹತ್ಯೆಯನ್ನು ಪರಿಣಾಮಕಾರಿಯಾಗಿ ತಡೆಯುವಲ್ಲಿ ಯಶಸ್ವಿಯಾಗಿದ್ದರು. ಈ ಕಾರ್ಯಕ್ಕೆ ಡಾ.ಜಿ.ಸಿ.ಬೆಟ್ಟಸ್ವಾಮಿ ಅವರೂ ಕೂಡ ಕೈಜೋಡಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ಪರ್ಧಾತ್ಮಕ ಪರೀಕ್ಷೆಗೆ ಪಿಯುಸಿಯಿಂದಲೇ ಅಣಿಯಾಗಿ
ಪಾವಗಡದಲ್ಲಿ ಕಾಯಂ ಶಿಕ್ಷಕರ ಕೊರತೆ