ಮುತ್ತತ್ತಿ ರಸ್ತೆಯ ಗಣೇಶ ದೇವಸ್ಥಾನದ ಆವರಣದಲ್ಲಿ ಮಹಾಮಂಡಲವನ್ನು ರಚಿಸಿ ಅದರ ಮಧ್ಯದಲ್ಲಿ ಬಾಳೆ ಕಂಬವನ್ನು ಇಟ್ಟು ಮೂರು ಜನ ವೀರಗಾಸೆ ಕುಣಿತದವರೊಂದಿಗೆ ಸ್ಮಶಾನವಾಸಿ ರುದ್ರನ ವೇಷಧಾರಿ ಮಂಡಲದ ಸುತ್ತ ಕುಣಿದು ಕುಪ್ಪಳಿಸಿ ಬಾಳೆ ಕಂಬವನ್ನು ಕಡಿದಾಗ ಸದ್ಭಕ್ತರು ಜೈಕಾರಗಳನ್ನು ಕೂಗುತ್ತಾ ಹರ್ಷ ವ್ಯಕ್ತಪಡಿಸಿದರು.
ಹಲಗೂರು: ಬೃಹನ್ಮಠದಲ್ಲಿ ಪ್ರತಿಷ್ಠಾಪಿಸಿ ಪ್ರತಿಷ್ಠಾಪಿಸಿದ್ದ ಸ್ವರ್ಣಗೌರಿಗೆ ವಿವಿಧ ಪೂಜೆಗಳನ್ನು ನಡೆಸಿ ಮೆರವಣಿಗೆ ಮೂಲಕ ಬೀಳ್ಕೊಡಲಾಯಿತು.
ತೊರೆಕಾಡನಹಳ್ಳಿ ಶಿಂಷಾನದಿಯಿಂದ ಅರಿಶಿನದಿಂದ ಸ್ವರ್ಣ ಗೌರಿ ಮಾಡಿಕೊಂಡು 9 ದಿನಗಳ ಕಾಲ ಪೂಜಾ ಪುರಸ್ಕಾರ ನಡೆಸಿದ ನಂತರ ಸೆ.22ರ ಸಂಜೆ ಮುತ್ತೈದೆಯರು ವಿಶೇಷವಾಗಿ ಪೂಜೆ ಸಲ್ಲಿಸಿದ ನಂತರ ಅರ್ಚಕರಾದ ವಿದ್ವಾನ್ ಪ್ರಸಾದ್ ರವರ ನೇತೃತ್ವದಲ್ಲಿ ಮಹಾ ಮಂಗಳಾರತಿ ನಡೆಸಿ ದೇವರ ಮೂರ್ತಿ ಕುದುರೆ ಸಾರೋಟಿನಲ್ಲಿ ಇಟ್ಟು ವಾದ್ಯಗೋಷ್ಠಿಗಳೊಡನೆ ಮೆರವಣಿಗೆ ನಡೆಸಲಾಯಿತು.
ಅಘೋರ ಭದ್ರಕಾಳಿಯ ಬಸಪ್ಪ ಮತ್ತು ಸ್ಮಶಾನವಾಸಿ ರುದ್ರವೇಷ, ವೀರಗಾಸೆ ಕುಣಿತ, ನಂದಿ ಧ್ವಜ ಕುಣಿತ ದೊಡನೆ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಬಂದಾಗ ಮನೆ ಮನೆಯಲ್ಲಿ ಪೂಜೆ ಸಲ್ಲಿಸಿ ಸ್ವರ್ಣ ಗೌರಿಯನ್ನು ಬೀಳ್ಕೊಟ್ಟರು.
ಮುತ್ತತ್ತಿ ರಸ್ತೆಯ ಗಣೇಶ ದೇವಸ್ಥಾನದ ಆವರಣದಲ್ಲಿ ಮಹಾಮಂಡಲವನ್ನು ರಚಿಸಿ ಅದರ ಮಧ್ಯದಲ್ಲಿ ಬಾಳೆ ಕಂಬವನ್ನು ಇಟ್ಟು ಮೂರು ಜನ ವೀರಗಾಸೆ ಕುಣಿತದವರೊಂದಿಗೆ ಸ್ಮಶಾನವಾಸಿ ರುದ್ರನ ವೇಷಧಾರಿ ಮಂಡಲದ ಸುತ್ತ ಕುಣಿದು ಕುಪ್ಪಳಿಸಿ ಬಾಳೆ ಕಂಬವನ್ನು ಕಡಿದಾಗ ಸದ್ಭಕ್ತರು ಜೈಕಾರಗಳನ್ನು ಕೂಗುತ್ತಾ ಹರ್ಷ ವ್ಯಕ್ತಪಡಿಸಿದರು.
ಈ ವೇಳೆ ಬಳಗದ ಎಚ್.ಎಂ.ಮಲ್ಲೇಶ್ (ಕರಿ ಶೆಟ್ಟಿ) ಇವರಿಗೆ ಯುವ ಪೀಳಿಗೆ ಶಾಲು ಹೊದಿಸಿ ಪೇಟ ತೊಡಿಸಿ ಸನ್ಮಾನಿಸಿ ಅಭಿನಂದಿಸಿದರು. ಸ್ವರ್ಣ ಗೌರಿ ಬಳಗದ ಸದಸ್ಯ ತೋಂಟದಾರ್ಯ ನಾಗೇಂದ್ರ ಮಾತನಾಡಿ, ಪ್ರತಿದಿನ ಒಂದೊಂದು ಸಂಘದವರು ಹಾಗೂ ಭಕ್ತರು ಪೂಜೆ ಸಲ್ಲಿಸಿ ಯಶಸ್ಸಿಗೆ ಶ್ರಮಿಸಿದ್ದಾರೆ. ಮುಂದಿನ ವರ್ಷವೂ ಸಹ ಹೆಚ್ಚಿನ ಸಹಕಾರ ನೀಡುವಂತೆ ಕೋರಿದರು.
ಈ ವೇಳೆ ಸ್ವರ್ಣಗೌರಿ ಬಳಗದ ಶಿವಕುಮಾರ್ (ಪುಟ್ಟ,), ಮಹೇಂದ್ರ, ಅಶೋಕ, ಕೆ.ಎಂ.ಎನ್. ನಾಗೇಂದ್ರ, ಅಕ್ಕಿಬಾಬು, ರಾಜೇಶ, ಸದಾನಂದ, ಪ್ರದೀಪ, ನವೀನ ಸೇರಿದಂತೆ ಇತರರು ಇದ್ದರು.
ವೇದಾಂತ ದೇಶಿಕರ ತಿರುನಕ್ಷತ್ರಮಹೋತ್ಸವ
ಮೇಲುಕೋಟೆ: ಮೇಲುಕೋಟೆಯಲ್ಲಿ ವೇದಾಂತ ದೇಶಿಕರ ತಿರುನಕ್ಷತ್ರಮಹೋತ್ಸವ ಮಂಗಳವಾರ ವೈಭವದಿಂದ ನೆರವೇರಿತು. ಬೆಳಗ್ಗೆ ಕಲ್ಯಾಣಿಯಿಂದ ಭವ್ಯ ಮೆರವಣಿಗೆಯಲ್ಲಿ ತೀರ್ಥ ತಂದು ವೇದಾಂತ ದೇಶಿಕರಿಗೆ ಅಭಿಷೇಕ ನೆರವೇರಿಸಲಾಯಿತು. ರಾಮಾನುಜಾಚಾರ್ಯರ ಪಾದುಕೆಯಿಂದ ದೇಶಿಕರಿಗೆ ವಿಶೇಷ ಗೌರವಾರ್ಪಣೆ ನೆರವೇರಿಸಲಾಯಿತು. ಸಂಜೆ ಚೆಲುವನಾರಾಯಣಸ್ವಾಮಿಯೊಂದಿಗೆ ದೇಶಿಕರ ಉತ್ಸವ ಸಡಗರ ಸಂಭ್ರಮದೊಂದಿಗೆ ನೆರವೇರಿತು. ಕಳೆದ ಹತ್ತು ದಿನಗಳಿಂದ ನಡೆಯುತ್ತಿದ್ದ ವೇದಾಂತ ದೇಶಿಕರ ತಿರುನಕ್ಷತ್ರ ಮಹೋತ್ಸವ ಮಂಗಳವಾರ ಅದ್ಧೂರಿಯಾಗಿ ಮುಕ್ತಾಯಗೊಂಡಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.