ಹಲಗೂರು: ಮುತ್ತತ್ತಿ ರಸ್ತೆಯ ವಿದ್ಯಾ ಗಣಪತಿ ಮೂರ್ತಿ ವಿಸರ್ಜನೆ

KannadaprabhaNewsNetwork |  
Published : Sep 02, 2025, 01:00 AM IST
1ಕೆಎಂಎನ್ ಡಿ23 | Kannada Prabha

ಸಾರಾಂಶ

ಮುತ್ತತ್ತಿ ರಸ್ತೆಯ ವಿದ್ಯಾಗಣಪತಿ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಿದ್ದ ವಿದ್ಯಾಗಣಪತಿಯನ್ನು ಅದ್ಧೂರಿಯಾಗಿ ವಿಸರ್ಜಿಸಲಾಯಿತು. ಗೌರಿ ಗಣೇಶ ಹಬ್ಬದಂದು ಪ್ರತಿಷ್ಠಾಪಿಸಿ ದಿನ ನಿತ್ಯ ಪೂಜೆ ನಡೆಸಿಕೊಂಡು ಭಕ್ತರು, ಸಾರ್ವಜನಿಕರಿಗೆ ಪ್ರಸಾದ ವಿನಿಯೋಗಿಸಲಾಗುತ್ತಿತ್ತು.

ಕನ್ನಡಪ್ರಭ ವಾರ್ತೆ ಹಲಗೂರು

ಮುತ್ತತ್ತಿ ರಸ್ತೆಯ ವಿದ್ಯಾಗಣಪತಿ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಿದ್ದ ವಿದ್ಯಾಗಣಪತಿಯನ್ನು ಅದ್ಧೂರಿಯಾಗಿ ವಿಸರ್ಜಿಸಲಾಯಿತು.

ಗೌರಿ ಗಣೇಶ ಹಬ್ಬದಂದು ಪ್ರತಿಷ್ಠಾಪಿಸಿ ದಿನ ನಿತ್ಯ ಪೂಜೆ ನಡೆಸಿಕೊಂಡು ಭಕ್ತರು, ಸಾರ್ವಜನಿಕರಿಗೆ ಪ್ರಸಾದ ವಿನಿಯೋಗಿಸಲಾಗುತ್ತಿತ್ತು. ಸೋಮವಾರ ಬೆಳಗ್ಗೆ ದೇವಸ್ಥಾನದ ಆವರಣದಿಂದ ವಿದ್ಯಾ ಗಣಪತಿಯನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಿ ಮೆರವಣಿಗೆ ಮುಖಾಂತರ ವೀರಭದ್ರ ದೇವರ ಕುಣಿತ ವೀರಗಾಸೆ ಕುಣಿತ ದೊಡನೆ ಪ್ರಮುಖ ರಸ್ತೆಗಳಲ್ಲಿ ಸಾಗಿ ನಂತರ ವಿಸರ್ಜಿಸಲಾಯಿತು.

ಈ ಸಂದರ್ಭದಲ್ಲಿ ಅಕ್ಕಿ ಬಾಬು, ಎಣ್ಣೆ ಮಿಲ್ ಕಿಶೋರ್, ಮಹೇಂದ್ರ, ಎಚ್.ಎಂ.ಎಸ್ ಗ್ರೂಪ್ ಶಿವಕುಮಾರ್, ಅಶ್ವಿನ್ ಕುಮಾರ್, ಶಿವಶಂಕರ್, ಕಾರ್ತಿಕ್, ನಂದೀಶ್, ಅಕ್ಷಯ್, ಸಂಜು, ನಂದ, ಎಚ್.ಪಿ.ಮನೋಜ್ ಕುಮಾರ್, ಎಚ್.ಪಿ.ದುರಿನ್ ಕುಮಾರ್, ದೀಪು ,ಸೂರಿ, ಎಚ್ಪಿ ಹೇಮಂತ್ ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.ಗ್ರಾಪಂ ಪ್ರಭಾರ ಅಧ್ಯಕ್ಷರಾಗಿ ಸಿ.ಲತಾ ಅಧಿಕಾರ ಸ್ವೀಕಾರ

ಹಲಗೂರು: ಗ್ರಾಮ ಪಂಚಾಯ್ತಿ ಪ್ರಭಾರ ಅಧ್ಯಕ್ಷರಾಗಿ ಸಿ.ಲತಾ ಸೋಮವಾರ ಅಧಿಕಾರ ಸ್ವೀಕರಿಸಿದರು.

ಈ ಹಿಂದೆ ಅಧ್ಯಕ್ಷೆ ಎಚ್.ಕೆ.ಶಶಿಕಲಾ ಶ್ರೀನಿವಾಸಾಚಾರಿ ಅವರ ರಾಜೀನಾಮೆಯಿಂದ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಜಿಲ್ಲಾ ಉಪ ವಿಭಾಗಾಧಿಕಾರಿಗಳ ಅದೇಶದ ಮೇರೆಗೆ ಉಪಾಧ್ಯಕ್ಷರಾದ ಸಿ.ಲತಾ ಅವರನ್ನು ಹಂಗಾಮಿ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಕಚೇರಿ ಸಭಾಂಗಣದಲ್ಲಿ ಪಿಡಿಓ ಕೆ.ಚೆಂದಿಲ್ ಮತ್ತು ಸಿಬ್ಬಂದಿ ಶಾಲು ಹೊದಿಸಿ ನೂತನ ಅಧ್ಯಕ್ಷರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಪಿಡಿಒ ಕೆ.ಚೆಂದಿಲ್, ಮುಖಂಡರಾದ ಶ್ರೀನಿವಾಸಾಚಾರಿ, ಮಹದೇವು, ಎಚ್.ಎಸ್.ಕುಮಾರ್, ಬಿಲ್ ಕಲೆಕ್ಟರ್ ಆನಂದ್, ಸಿಬ್ಬಂದಿ ರಾಜಣ್ಣ ಇದ್ದರು.ಸೆ.೪ರಂದು ಕನಕ ನಡೆ-ನುಡಿ ಉತ್ಸವ

ಕನ್ನಡಪ್ರಭ ವಾರ್ತೆ ಮಂಡ್ಯ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಬೆಂಗಳೂರು, ಮಹಿಳಾ ಸರ್ಕಾರಿ ಕಾಲೇಜು ಕನ್ನಡ ವಿಭಾಗ ಇವರ ವತಿಯಿಂದ ಸೆ.೪ರಂದು ಬೆಳಗ್ಗೆ ೧೦.೩೦ ಗಂಟೆಗೆ ಕಾಲೇಜಿನ ಮೌಲ್ಯಮಾಪನ ಕೊಠಡಿಯಲ್ಲಿ ಕನಕ ಸಂಸ್ಕೃತಿ ಸಂಚಲನ ಕನಕ ನಡೆ-ನುಡಿ ಉತ್ಸವ ನಡೆಯಲಿದೆ.

ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ. ಚಿಕ್ಕಣ್ಣ ಸಮಾರಂಭ ಉದ್ಘಾಟಿಸುವರು. ಕಾಲೇಜಿನ ಪ್ರಾಂಶುಪಾಲ ಡಾ. ಗುರುರಾಜ್ ಪ್ರಭು ಕೆ. ಅವರು ಅಧ್ಯಕ್ಷತೆ ವಹಿಸುವರು. ಕನಕ ಸಂಸ್ಕೃತಿ ಸಂಚಲ ಪ್ರತಿಭಾ ಸ್ಪರ್ಧೆಯಲ್ಲಿ ಮಂಡ್ಯ, ನಾಗಮಂಗಲ, ಪಾಂಡವಪುರ, ಕೃಷ್ಣರಾಜಪೇಟೆ, ಶ್ರೀರಂಗಪಟ್ಟಣದ ಕೆ.ಆರ್. ಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಹಾಗೂ ಮದ್ದೂರಿನ ಮಹಿಳಾ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸುವರು ಎಂದು ಸಮಾರಂಭದ ವ್ಯವಸ್ಥಾಪಕರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''