ಹಲಗೂರು: ಶರನ್ನವರಾತ್ರಿ ಅಂಗವಾಗಿ ವಿಶೇಷ ಪೂಜೆ ಆರಂಭ

KannadaprabhaNewsNetwork |  
Published : Oct 13, 2026, 01:45 AM IST
12ಕೆಎಂಎನ್ ಡಿ14 | Kannada Prabha

ಸಾರಾಂಶ

9 ದಿನಗಳ ಕಾಲ ದಿನನಿತ್ಯ ಸಂಜೆ 7ರಿಂದ ರಾತ್ರಿ 10:00 ವರೆಗೆ ವಿಶೇಷ ಪೂಜೆಗಳು ನಡೆಯಲಿವೆ. ಭಕ್ತರು ದೇವರಿಗೆ ಬೆಲ್ಲದಾರತಿ, ನಿಂಬೆ ಹಣ್ಣಿನ ಆರತಿ ಮಾಡುವ ಮುಖಾಂತರ ನಮ್ಮ ಕಷ್ಟಕಾರ್ಪಣವನ್ನು ನಿವಾರಿಸುವಂತೆ ದೇವರಲ್ಲಿ ಪ್ರಾರ್ಥಿಸುತ್ತಾರೆ.

ಹಲಗೂರು:

ಶ್ರೀಕಾಳಿಕಾಂಬ ಶಿವ ದೇವಸ್ಥಾನದಲ್ಲಿ ಶರನ್ನವರಾತ್ರಿ ಹಬ್ಬದ ಅಂಗವಾಗಿ 9 ದಿನಗಳ ಪೂಜಾ ಕಾರ್ಯಕ್ರಮಕ್ಕೆ ಅರ್ಚಕ ಉಮೇಶ್ ಆರಾಧ್ಯ ಚಾಲನೆ ನೀಡಿದರು.

ಪೂಜೆ ಆರಂಭಕ್ಕೂ ಮುನ್ನ ದೇವರ ಮೂರ್ತಿಯನ್ನು ಶುಚಿಗೊಳಿಸಿ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ನಡೆಸಿ ನಂತರ ವಿವಿಧ ಪುಷ್ಪಗಳಿಂದ ಅಲಂಕರಿಸಿ ಮಹಾ ಮಂಗಳಾರತಿ ನಂತರ ಬಂದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗಿಸಲಾಯಿತು.

ನವರಾತ್ರಿ ಪ್ರಾರಂಭದ ದಿನ ಭಾನುವಾರದಂದು ಕಾಳಿಕಾಂಬ ಶಿವ ದೇವಸ್ಥಾನದ ಪ್ರಾಂಗಣದಲ್ಲಿ ದುರ್ಗಾಪರಮೇಶ್ವರಿ (ಚಾಮುಂಡೇಶ್ವರಿ) ದೇವರಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ನಡೆಸಿದ ನಂತರ ಭಕ್ತಾದಿಗಳು ದೇವಸ್ಥಾನದ ಆವರಣದಲ್ಲಿ ದೇವರ ಮೂರ್ತಿಯನ್ನು ಹೊತ್ತು ಮೂರು ಸುತ್ತು ಪ್ರದಕ್ಷಿಣೆ ಹಾಕಿ ಘೋಷಣೆಗಳನ್ನು ಕೂಗುತ್ತಾ ತಮ್ಮ ಭಕ್ತಿಭಾವ ಸಮರ್ಪಿಸಿದರು.

ಅರ್ಚಕ ಉಮೇಶ್ ಆರಾಧ್ಯ ಮಾತನಾಡಿ, 9 ದಿನಗಳ ಕಾಲ ದಿನನಿತ್ಯ ಸಂಜೆ 7ರಿಂದ ರಾತ್ರಿ 10:00 ವರೆಗೆ ವಿಶೇಷ ಪೂಜೆಗಳು ನಡೆಯಲಿವೆ. ಭಕ್ತರು ದೇವರಿಗೆ ಬೆಲ್ಲದಾರತಿ, ನಿಂಬೆ ಹಣ್ಣಿನ ಆರತಿ ಮಾಡುವ ಮುಖಾಂತರ ನಮ್ಮ ಕಷ್ಟಕಾರ್ಪಣವನ್ನು ನಿವಾರಿಸುವಂತೆ ದೇವರಲ್ಲಿ ಪ್ರಾರ್ಥಿಸುತ್ತಾರೆ ಎಂದರು.

ಇದೇ ವೇಳೆ ಅಪಾರ ಭಕ್ತಾದಿಗಳು ಬಂದು ದೇವರಿಗೆ ಪೂಜೆ ಸಲ್ಲಿಸಿ ಪುನೀತರಾದರು. ಭಕ್ತಾದಿಗಳಿಗೆ ಪ್ರಸಾದ ವಿನಿಯೋಗಿಸಲಾಯಿತು. ಕಾರ್ಯಕ್ರಮದಲ್ಲಿ ಅನಂತಸ್ವಾಮಿ, ಲಿಂಗಣ್ಣ ಸ್ವಾಮಿ, ವಿಕ್ರಂ ಸೋನಿ, ಸುನಿಲ್ ಕುಮಾರ್, ಯೋಗೇಂದ್ರ, ಮಹದೇವಸ್ವಾಮಿ, ಪ್ರವೀಣ, ಸೇರಿದಂತೆ ಅಪಾರ ಭಕ್ತಾದಿಗಳು ಪಾಲ್ಗೊಂಡಿದ್ದರು.ಅದಿದೇವತೆ ಕಿಕ್ಕೇರಮ್ಮ ಶರನ್ನವರಾತ್ರಿ ಪುರ ಪ್ರವೇಶ, ಪೂಜೆ

ಕನ್ನಡಪ್ರಭ ವಾರ್ತೆ ಕಿಕ್ಕೇರಿಕಿಕ್ಕೇರಿ-ಲಕ್ಷ್ಮೀಪುರ ಗ್ರಾಮದ ಅದಿದೇವತೆ ಕಿಕ್ಕೇರಮ್ಮ ಶರನ್ನವರಾತ್ರಿಯ ಮೊದಲ ದಿನ ಭಾನುವಾರ ಪುರ ಪ್ರವೇಶಿಸಿತು.

ಉತ್ಸವ ಮೂರ್ತಿ ಹಾಗೂ ಮೂಲ ವಿಗ್ರಹಗಳಿಗೆ ವಿವಿಧ ವಸ್ತ್ರ, ಆಭರಣ ತೊಡಿಸಿ, ಪರಿಮಳ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ದೇವಿಗೆ ಅರ್ಚಕರು ಮಹಾಪೂಜೆ ಸಲ್ಲಿಸಿ ಅಧಿಕೃತವಾಗಿ ಮೆರವಣಿಗೆ ಚಾಲನೆ ನೀಡಿದರು. ಲಕ್ಷ್ಮೀಪುರ ಗ್ರಾಮಸ್ಥರು ಉಪವಾಸವಿದ್ದು ದೇವಿ ಮೆರವಣಿಗೆ ಜತೆ ಹೆಜ್ಜೆ ಹಾಕಿದರು. ಮೆರವಣಿಗೆಯೊಂದಿಗೆ ಚಾಮರ, ಗಂಟಾನಾದ, ಚಕ್ರವಾದ್ಯದೊಂದಿಗೆ ಸಾಗಿತು. ದಾರಿಯುದ್ದಕ್ಕೂ ಭಕ್ತರು ರಂಗೋಲಿ ಬಿಡಿಸಿ ದೇವಿಯನ್ನು ಸಂಭ್ರಮದಿಂದ ಬರಮಾಡಿಕೊಂಡರು.ಹೊಸಬೀದಿ, ರಥಬೀದಿ, ಕೋಟೆ ಗಣಪತಿ, ಆಂಜನೇಯ ಬೀದಿ, ಕೆ.ಎಸ್.ನರಸಿಂಹಸ್ವಾಮಿ ಬೀದಿ, ಸುಬ್ಬರಾಯರ ಛತ್ರ ಬೀದಿ, ಬ್ರಹ್ಮೇಶ್ವರ ಬೀದಿ ಸುತ್ತ ಸಾಗಿ ಅಂತಿಮವಾಗಿ ನರಸಿಂಹಸ್ವಾಮಿ ದೇಗುಲಕ್ಕೆ ಸಾಗಿತು.

ಭಕ್ತರು ದೇವಿಗೆ ಹಣ್ಣು ಕಾಯಿ ಅರ್ಪಿಸಿ ದೀಪಧಾರತಿ ಬೆಳಗಿದರು. ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು. ಹಲವು ಭಕ್ತರು ಕಿಕ್ಕೇರಮ್ಮ ಮೂಲದೇವಿಗೆ ತೊಡಿಸಲು ಸೀರೆ, ಕುಪ್ಪಸ ನೀಡಿದರು.ಒಂಭತ್ತು ದಿನಗಳು ನಿತ್ಯವೂ ಗ್ರಾಮದಲ್ಲಿ ಮೆರವಣಿಗೆ ಮಾಡಲು ದೇವರ ಒಕ್ಕಲಿನ ಭಕ್ತರು ಸಜ್ಜಾಗಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರೀರಂಗಪಟ್ಟಣ ದಸರಾಗೆ ಯುವ ಸಂಭ್ರಮ ಹೊಸ ಮೆರುಗು: ಅದಿತಿ ಪ್ರಭುದೇವ
ಮೇಲುಕೋಟೆ: ಅ.16 ರಿಂದ 19ರವರೆಗೆ ನವರಾತ್ರಿ ಸಂಗೀತ-ನೃತ್ಯೋತ್ಸವ