ಕ್ರೀಡಾಕೂಟದಲ್ಲಿ ಹಳಿಯಾಳ, ಮುಂಡಗೋಡಕ್ಕೆ ಸಮಗ್ರ ಪ್ರಶಸ್ತಿ

KannadaprabhaNewsNetwork |  
Published : Oct 08, 2026, 02:15 AM IST
ಹುಣಸವಾಡ ಗ್ರಾಮದ  ಬಾಲಕರ ತಂಡವು ಖೋ ಖೋ ಆಟದಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ. | Kannada Prabha

ಸಾರಾಂಶ

ಗುಂಪು ಆಟಗಳ ಫಲಿತಾಂಶ: ಬಾಲಕಿಯರು: ವಾಲಿಬಾಲ್ - ಪ್ರಥಮ: ಮುಂಡಗೋಡ, ದ್ವಿತೀಯ: ಸಿದ್ದಾಪುರ, ಕಬಡ್ಡಿ - ಪ್ರಥಮ: ಹಳಿಯಾಳ, ದ್ವಿತೀಯ: ಮುಂಡಗೋಡ.

ಹಳಿಯಾಳ: ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ 2026- 27ನೇ ಸಾಲಿನ ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ 14 ವರ್ಷದೊಳಗಿನ ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ಹಳಿಯಾಳ ಮತ್ತು ಮುಂಡಗೋಡ ತಾಲೂಕುಗಳು ಮೇಲುಗೈ ಸಾಧಿಸಿವೆ.ಗುಂಪು ಆಟಗಳ ಫಲಿತಾಂಶ: ಬಾಲಕಿಯರು: ವಾಲಿಬಾಲ್ - ಪ್ರಥಮ: ಮುಂಡಗೋಡ, ದ್ವಿತೀಯ: ಸಿದ್ದಾಪುರ, ಕಬಡ್ಡಿ - ಪ್ರಥಮ: ಹಳಿಯಾಳ, ದ್ವಿತೀಯ: ಮುಂಡಗೋಡ, ಖೋ-ಖೋ ಪ್ರಥಮ: ಹಳಿಯಾಳ, ದ್ವಿತೀಯ: ಮುಂಡಗೋಡ, ಥ್ರೋಬಾಲ್ - ಪ್ರಥಮ: ಶಿರಸಿ, ದ್ವಿತೀಯ: ಯಲ್ಲಾಪುರ, ಬಾಲ್ ಬ್ಯಾಡ್ಮಿಂಟನ್ - ಪ್ರಥಮ: ಮುಂಡಗೋಡ, ದ್ವಿತೀಯ: ಸಿದ್ದಾಪುರ, ಬಾಲಕರ ವಿಭಾಗ: ಕಬಡ್ಡಿ- ಪ್ರಥಮ: ಮುಂಡಗೋಡ, ದ್ವಿತೀಯ: ಶಿರಸಿ ಖೋ-ಖೋ - ಪ್ರಥಮ: ಹಳಿಯಾಳ, ದ್ವಿತೀಯ: ಮುಂಡಗೋಡ, ಬಾಲ್ ಬ್ಯಾಡ್ಮಿಂಟನ್- ಪ್ರಥಮ: ಶಿರಸಿ, ದ್ವಿತೀಯ: ಸಿದ್ದಾಪುರ,

ವೈಯಕ್ತಿಕ ಅಥ್ಲೆಟಿಕ್ಸ್(ಬಾಲಕಿಯರು): 100 ಮೀ. ಓಟ: ಪ್ರಥಮ- ಪ್ರಣತಿ ವಿ. ಗೌಡ, ಶಿರಸಿ, ದ್ವಿತೀಯ ತೇಜಸ್ವಿನಿ ನಾಯಕ್ ಯಲ್ಲಾಪುರ. 200 ಮೀ. ಓಟ: ಪ್ರಥಮ- ಪ್ರಣತಿ ವಿ. ಗೌಡ, ಶಿರಸಿ, ದ್ವಿತೀಯ ಕೃತಿಕಾ ನಾಗರಾಜ ನಾಯ್ಕ, ಶಿರಸಿ, 400 ಮೀ. ಓಟ: ಪ್ರಥಮ- ಸಾವಿತ್ರಿ ಕೊಳೇಕರ, ಮುಂಡಗೋಡ, ದ್ವಿತೀಯ ಮಂಧಾರ ಆರೇರ ಶಿರಸಿ.

600 ಮೀ. ಓಟ: ಪ್ರಥಮ- ಮಂಧಾರ ಆರೇರ, ಶಿರಸಿ. ದ್ವಿತೀಯ ಸಾವಿತ್ರಿ ಕೊಳೇಕರ, ಮುಂಡಗೋಡ. 80ಮಿ ಹರ್ಡಲ್ಸ್: ಪ್ರಥಮ - ಮಂಧಾರ ಮಧು ಆರೇರ, ದ್ವಿತೀಯ ಸಾವಿತ್ರಿ ಕೊಳೇಕರ, ಮುಂಡಗೋಡ. ಉದ್ದ ಜಿಗಿತ: ಪ್ರಥಮ- ತನು ದೇವಾಡಿ. ಯಲ್ಲಾಪುರ, ದ್ವಿತೀಯ ಧನ್ಯಶ್ರೀ ನಾಯಕ, ಯಲ್ಲಾಪುರ.

ಎತ್ತರ ಜಿಗಿತ: ಪ್ರಥಮ- ಪ್ರಿನ್ಸಿ ವಿಜಯ ದೊಡ್ಮಣಿ, ಹಳಿಯಾಳ. ದ್ವಿತೀಯ-ಬಿಂದು ಹೆಗಡೆ ಸಿದ್ದಾಪುರ. ಗುಂಡು ಎಸೆತ: ಪ್ರಥಮ- ಸಂಜನಾ ವಿಲೇಶ ಶೆಟ್ಟಿ ಶಿರಸಿ. ದ್ವಿತೀಯ -ಶರೀನ ಡನಿಸ್ ಕಾಮ್ರೇಕರ ಹಳಿಯಾಳ. ಚಕ್ರ ಎಸೆತ: ಪ್ರಥಮ ನೀರಜಾ ನಾಯಕ ಯಲ್ಲಾಪುರ, ದ್ವಿತೀಯ ಮುಂಜೀರಾ ಅಬ್ದುಲ್ ರಝಾಕ್ ಶಿರಸಿ. 4*100 ರಿಲೇ: ಪ್ರಥಮ ಶಿರಸಿ ಹಾಗೂ ದ್ವಿತೀಯ ಯಲ್ಲಾಪುರ.

ಬಾಲಕರ ವಿಭಾಗ: 100 ಮೀ ಓಟ: ಪ್ರಥಮ- ಸಮರ್ಥ ಉಡಂಗಿ ಹಳಿಯಾಳ, ದ್ವಿತೀಯ ತನ್ಮಯ ದಿನೇಶ ನಾಯಕ ಶಿರಸಿ. 200ಮೀ ಓಟ: ಪ್ರಥಮ- ತನ್ಮಯ ದಿನೇಶ್ ನಾಯಕ ಶಿರಸಿ, ದ್ವಿತೀಯ ವರುಣ ಜೆ ಸಿದ್ಧಾಪುರ. 400 ಮೀ. ಓಟ: ಪ್ರಥಮ-- ತನ್ಮಯ ದಿನೇಶ್ ನಾಯಕ ಶಿರಸಿ, ದ್ವಿತೀಯ ಸಮರ್ಥ ಉಡಂಗಿ ಹಳಿಯಾಳ, 600 ಮೀ. ಓಟ: ಪ್ರಥಮ-ಪ್ರದೀಪ ಗೋಲೆಹಳ್ಳಿ, ಹಳಿಯಾಳ, ದ್ವಿತೀಯ ಉಮೇಶ ಕುಡೇಕರ ಮುಂಡಗೋಡ. 80ಮೀ ಹರ್ಡಲ್ಸ್: ಪ್ರಥಮ-ಅರ್ಷ ಶೇಖ್ ಯಲ್ಲಾಪುರ, ದ್ವಿತೀಯ ಮಹ್ಮದ ಜವೀರ ಹಳಿಯಾಳ. ಉದ್ದ ಜಿಗಿತ: ಪ್ರಥಮ-ವಿಠ್ಠಲ ಎಡಗೆ ಮುಂಡಗೋಡ, ದ್ವಿತೀಯ ಅರ್ಷ ಶೇಖ್, ಯಲ್ಲಾಪುರ. ಎತ್ತರ ಜಿಗಿತ: ಪ್ರಥಮ- ಭುವನ ನಾಯ್ಕ ಶಿರಸಿ, ಗುಂಡು ಎಸೆತ: ಪ್ರಥಮ-ಭುವನ ಎಚ್.ಎಂ., ಶಿರಸಿ. ಚಕ್ರ ಎಸೆತ: ಪ್ರಥಮ- ಮಹಮ್ಮದ ಅಪ್ತಾಬ್ ಆಸೀಫ್‌, ಶಿರಸಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವರ್ಣವಲ್ಲೀ ಮಠದ ನೂತನ ಆಡಳಿತ ಮಂಡಳಿಗೆ ಪದಾಧಿಕಾರಿಗಳ ಆಯ್ಕೆ
ಹಳಿಯಾಳದಲ್ಲಿ ರಾಜ್ಯಮಟ್ಟದ ಕುಸ್ತಿ ಸ್ಪರ್ಧೆಗೆ ತೆರೆ