ಕನ್ನಡಪ್ರಭ ವಾರ್ತೆ ಮಂಡ್ಯ
ವಿಶ್ರಾಂತ ಪ್ರಾಂಶುಪಾಲ ಡಾ.ಎಸ್.ಬಿ.ಶಂಕರೇಗೌಡ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಸಾಹಿತಿ ಡಾ. ಡಿ.ಕೆ. ರಾಜೇಂದ್ರ ಅವರಿಗೆ ಡಾ.ಹಾಮಾನಾ ಜಾನಪದ ಹಿರಿಯ ಪ್ರಶಸ್ತಿ ೫೦ ಸಾವಿರ ರು. ನಗದು ಪುರಸ್ಕಾರ, ಸಹ ಪ್ರಾಧ್ಯಾಪಕಿ ಡಾ.ಎಂ.ಕೆಂಪಮ್ಮ ಅವರಿಗೆ ಡಾ.ಹಾಮಾನಾ ಜಾನಪದ ಯುವ ಪ್ರಶಸ್ತಿ ೨೫ ಸಾವಿರ ರು. ನಗದು ಪುರಸ್ಕಾರವನ್ನು ಮಂಡ್ಯ ವಿವಿ ಕುಲಪತಿ ಪ್ರೊ.ಕೆ.ಶಿವಚಿತ್ತಪ್ಪ ಪ್ರದಾನ ಮಾಡುವರು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಪ್ರಶಸ್ತಿ ಪುರಸ್ಕೃತರ ಕುರಿತು ವಿಶ್ರಾಂತ ಕುಲಪತಿ ಡಾ. ಪದ್ಮಾ ಶೇಖರ್ ಮಾತನಾಡುವರು. ಉದ್ಯಮಿ ವಿವೇಕ್ ಹೆಗ್ಗಡೆ ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದರು.ಕ್ರೀಡಾ ಮೈದಾನದಲ್ಲಿ ಕನ್ನಡ ಭವನ-ಜೆಪಿ ಬೇಸರ:
ಕ್ರೀಡಾ ಚಟುವಟಿಕೆಗಾಗಿ ಮೀಸಲಿಟ್ಟ ಜಾಗದಲ್ಲಿ ಕನ್ನಡ ಭವನದ ನಿರ್ಮಿಸಲು ಮುಂದಾಗಿರುವ ಜಿಲ್ಲಾಡಳಿತದ ಕ್ರಮಕ್ಕೆ ಬೇಸರ ವ್ಯಕ್ತಪಡಿಸಿದ ಅವರು, ನಗರದ ಹೊರವಲಯದಲ್ಲಿ ಒಂದು ಎಕರೆ ಜಾಗ ಹುಡುಕಿ ಅಲ್ಲಿ ಕನ್ನಡ ಭವನ ನಿರ್ಮಿಸಿ ಸದಾ ಚಟುವಟಿಕೆ ಇರುವ ಹಾಗೆ ನೋಡಿಕೊಳ್ಳಬೇಕಿತ್ತು ಎಂದರು.ಕೋಟ್ಯಂತರ ರು. ಖರ್ಚು ಮಾಡಿ ಗಾಂಧಿ ಭವನ ಕಟ್ಟಡ ನಿರ್ವಿಸಿ ಬಾಗಿಲು ಹಾಕಿಕೊಂಡಿದ್ದರು. ಈ ಬಗ್ಗೆ ನಾನು ಬೀಗ ಹಾಕುವುದಾಗಿ ಎಚ್ಚರಿಕೆ ನೀಡಿ ನಂತರ ಉದ್ಘಾಟನೆ ಮಾಡಿದ್ದಾರೆ. ಅದನ್ನು ಅಕ್ಕ ಮಹಾದೇವಿ ವಿವಿಗೆ ವಹಿಸಿದರೆ ಅವರು ನಿರ್ವಹಣೆ ಮಾಡುತ್ತಾರೆ. ಜೊತೆಗೆ ಕಾರ್ಯಕ್ರಮಗಳನ್ನೂ ಮಾಡುತ್ತಾರೆ ಎಂದು ಸಲಹೆ ನೀಡಿರುವುದಾಗಿ ತಿಳಿಸಿದರು.
ಸ್ವಾತಂತ್ರ್ಯ ಸಂಗ್ರಾಮಕ್ಕೆ ಮದ್ದೂರು ಶಿವಪುರ ಇತಿಹಾಸದಲ್ಲಿ ದಾಖಲೆಯಾಗಿದೆ. ಆದರೆ, ಅಲ್ಲಿನ ಧ್ವಜ ಸತ್ಯಾಗ್ರಹ ಸೌಧದ ಕಥೆಯನ್ನು ಕೇಳುವವರೇ ಇಲ್ಲದಂತಾಗಿದೆ. ಸಚಿವರು, ಶಾಸಕರು ಸೇರಿದಂತೆ ಜನಪ್ರತಿನಿಧಿಗಳಿಗೆ ಅದರ ದುಸ್ಥಿತಿಯನ್ನು ವಿವರಿಸಿದರೂ ಯಾರೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಇನ್ನು ಕಲಾಮಂದಿರದಲ್ಲಿ ವೇದಿಕೆಯೇ ಕುಸಿಯುವಂತಾಗಿದೆ. ಸರ್ಕಾರಿ ಯಂತ್ರ ಯಾವ ರೀತಿ ಇದೆ ಎಂಬುದಕ್ಕೆ ಇದು ಸಾಕ್ಷಿ ಎಂದು ಬೇಸರ ವ್ಯಕ್ತಪಡಿಸಿದರು.