ಲೊಕೇಶನ್ ಮಾಹಿತಿ ನೀಡಿದ ಆರೋಪ, ಹಾನಗಲ್ಲ ಸಿಪಿಐ ಅಮಾನತು

KannadaprabhaNewsNetwork |  
Published : Jun 18, 2025, 12:31 AM ISTUpdated : Jun 18, 2025, 12:32 AM IST
17ಎಚ್‌ವಿಆರ್5-ಆಂಜನೇಯ ಎನ್.ಎಚ್. | Kannada Prabha

ಸಾರಾಂಶ

ಲೊಕೇಶನ್‌ನಿಂದ ಸಮಸ್ಯೆಗೆ ಸಿಲುಕಿದ್ದ ಹಾನಗಲ್ಲ ಪಟ್ಟಣದ ಪ್ರಭಾವಿ ವ್ಯಕ್ತಿಯೊಬ್ಬ ನೀಡಿದ್ದ ಮಾಹಿತಿ ಅನ್ವಯ ಪ್ರಾಥಮಿಕ ತನಿಖೆ ನಡೆಸಿ ವರದಿ ಪಡೆದಿದ್ದ ದಾವಣಗೆರೆ ವಲಯದ ಐಜಿಪಿ ರವಿಕಾಂತೇಗೌಡ ಅವರು ಸಿಪಿಐ ಆಂಜನೇಯ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಹಾನಗಲ್ಲ: ಪಟ್ಟಣದ ಪ್ರಭಾವಿ ವ್ಯಕ್ತಿ ತಂಗಿದ್ದ ಸ್ಥಳದ ಕುರಿತು ಲೊಕೇಶನ್ ಸಹಿತ ಬೇರೆಯವರಿಗೆ ಮಾಹಿತಿ ನೀಡಿದ ಆರೋಪದಡಿ ಹಾನಗಲ್ಲ ಪೊಲೀಸ್ ಠಾಣೆಯ ಸರ್ಕಲ್ ಇನ್‌ಸ್ಪೆಕ್ಟರ್ ಆಂಜನೇಯ ಎನ್.ಎಚ್. ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಲಾಗಿದೆ.ಲೊಕೇಶನ್‌ನಿಂದ ಸಮಸ್ಯೆಗೆ ಸಿಲುಕಿದ್ದ ಹಾನಗಲ್ಲ ಪಟ್ಟಣದ ಪ್ರಭಾವಿ ವ್ಯಕ್ತಿಯೊಬ್ಬ ನೀಡಿದ್ದ ಮಾಹಿತಿ ಅನ್ವಯ ಪ್ರಾಥಮಿಕ ತನಿಖೆ ನಡೆಸಿ ವರದಿ ಪಡೆದಿದ್ದ ದಾವಣಗೆರೆ ವಲಯದ ಐಜಿಪಿ ರವಿಕಾಂತೇಗೌಡ ಅವರು ಸಿಪಿಐ ಆಂಜನೇಯ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.ಐಜಿಪಿ ಆದೇಶ ಉಲ್ಲೇಖಿಸಿ ಮತ್ತೊಂದು ಆದೇಶ ಹೊರಡಿಸಿರುವ ಜಿಲ್ಲಾ ಎಸ್ಪಿ ಅಂಶುಕುಮಾರ, ಸಿಪಿಐ ಆಂಜನೇಯ ಅವರನ್ನು ಜೂ. 15ರಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಅವರಿಂದ ತೆರವಾದ ಸ್ಥಾನಕ್ಕೆ ಪ್ರಭಾರಿಯಾಗಿ ಶಿಗ್ಗಾಂವಿ ಸಿಪಿಐ ಅನಿಲ್‌ಕುಮಾರ ರಾಠೋಡ್ ಅವರನ್ನು ನಿಯೋಜಿಸಲಾಗಿದೆ.ಅಪರಾಧ ಪ್ರಕರಣಗಳ ತನಿಖೆ ಸಂದರ್ಭದಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಲೊಕೇಶನ್ ತಿಳಿದುಕೊಳ್ಳುವ ಅವಕಾಶ ಪೊಲೀಸರಿಗಿದೆ. ಆದರೆ, ಸಿಪಿಐ ಆಂಜನೇಯ ಅವರು ಈ ಅವಕಾಶವನ್ನು ದುರುಪಯೋಗ ಮಾಡಿಕೊಂಡಿರುವುದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಜಮೀನು ಒತ್ತುವರಿ ತೆರವಿಗೆ ಆಗ್ರಹ

ಹಿರೇಕೆರೂರು: ಒತ್ತುವರಿಯಾಗಿರುವ ಹುಲ್ಲುಗಾವಲು ಜಮೀನನ್ನು ತೆರವುಗೊಳಿಸಿ, ಹದ್ದಬಸ್ತ್ ಮಾಡಬೇಕೆಂದು ಆಗ್ರಹಿಸಿ ಬಾಳಂಬೀಡ ಗ್ರಾಮಸ್ಥರು ಗ್ರೇಡ್- 2 ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

ತಾಲೂಕಿನ ಬಾಳಂಬೀಡ ಗ್ರಾಮದ ರಿ.ಸ.ನಂ. 70,71,73 ಹುಲ್ಲುಗಾವಲು ಜಮೀನು ಇವೆ. ಈ ಜಮೀನನ್ನು ಅಕ್ಕಪಕ್ಕದ ಜಮೀನುದ್ದಾರರು ಮತ್ತು ಹಾದ್ರಿಹಳ್ಳಿ ಗ್ರಾಮಸ್ಥರು ಅನಧಿಕೃತವಾಗಿ ಸಾಗುವಳಿ ಮಾಡುತ್ತಿದ್ದಾರೆ. ನಮ್ಮ ಗ್ರಾಮದ ಜಾನುವಾರುಗಳಿಗೆ ಮೇಯಿಸಲು ಬೇರೆ ಗುಡ್ಡಗಾಡು ಇಲ್ಲ. ಈ ಹುಲ್ಲುಗಾವಲು ಜಮೀನನ್ನು ಒತ್ತುವರಿ ಮಾಡಿ ಮತ್ತು ಅನಧಿಕೃತವಾಗಿ ಸಾಗುವಳಿ ಮಾಡಿದ್ದರಿಂದ ಜಾನುವಾರುಗಳನ್ನು ಮೇಯಿಸಲು ತೊಂದರೆಯಾಗಿದೆ. ಹಾಗಾಗಿ ಈ ಜಮೀನನ್ನು ಒತ್ತುವರಿ ತೆರವು ಮಾಡಬೇಕು. ಕಾನೂನುಬದ್ಧವಾಗಿ ಹದ್ದಬಸ್ತ ಮಾಡಿಸಿ ಗುರುತಿನ ಕಲ್ಲುಗಳನ್ನು ನೆಡಬೇಕೆಂದು ಗ್ರಾಮಸ್ಥರು ಮನವಿಯಲ್ಲಿ ಅಗ್ರಹಿಸಿದ್ದಾರೆ.

ಬಸನಗೌಡ ಭರಮಗೌಡ್ರ, ಬಿ.ಎಚ್. ಶಿರಿಹಳ್ಳಿ, ನಾಗರಾಜ ಹುಲ್ಲತ್ತಿ, ಪುನೀತ ಬಣಕಾರ, ಹನುಮಂತಪ್ಪ ಶೇತಸನದಿ, ರಾಮಚಂದ್ರ ಅಣಿಜೇರ, ಪ್ರಕಾಶ ತುಮಿನಕಟ್ಟಿ, ವಿಶ್ವನಾಥ ಪೂಜಾರ, ಲತೇಶ್ ಜೋಗಿಹಳ್ಳಿ, ರಾಜೇಶ್ ಬೆಟಗೇರಿ, ಸಚಿನ ಭರಮಗೌಡ್ರ, ಗ್ರಾಮಸ್ಥರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌