ಗಜೇಂದ್ರಗಡ: ಗಜೇಂದ್ರಗಡ-ಉಣಚಗೇರಿ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ಪಟ್ಟಣದ ಮೈಸೂರು ಮಠದಲ್ಲಿ ಜು. ೨೫ರಿಂದ ಆ. ೨೪ರ ವರೆಗೆ ಹಾನಗಲ್ಲ ಕುಮಾರ ಮಹಾಸ್ವಾಮಿಗಳ ಪುರಾಣ ಪ್ರಾರಂಭವಾಗಲಿದೆ ಎಂದು ಗಜೇಂದ್ರಗಡ-ಉಣಚಗೇರಿ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಸಿದ್ದಣ್ಣ ಬಂಡಿ ಹೇಳಿದರು.
ಹಿರಿಯರಾದ ಎಸ್.ಎಸ್. ವಾಲಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಜನರು ಧಾರ್ಮಿಕ ಕಾರ್ಯಕ್ರಮಗಳಿಂದ ದೂರ ಉಳಿಯುತ್ತಿದ್ದಾರೆ. ಹೀಗಾಗಿ ಇಂತಹ ಪುರಾಣ-ಪ್ರವಚನ ಕಾರ್ಯಕ್ರಮಗಳ ಆಯೋಜನೆ ಅಗತ್ಯವಿದೆ. ಅದರಲ್ಲೂ ಯುವಕರು ಒತ್ತಡದ ಬದುಕಿನ ನಡುವೆ ಪ್ರತಿದಿನ ಸಂಜೆ ಮಠಕ್ಕೆ ಬಂದು ಪವಾಡ ಪುರುಷ ಹಾನಗಲ್ಲ ಕುಮಾರೇಶ್ವರರ ಪುರಾಣ ಆಲಿಸಬೇಕು ಎಂದರು. ಬಿ.ಎಸ್. ಶೀಲವಂತರ ಮಾತನಾಡಿದರು.
ಪುರಾಣ ಸಮಿತಿ ಅಧ್ಯಕ್ಷ ಶಿವಪ್ಪ ಮಡಿವಾಳರ, ಗಜೇಂದ್ರಗಡ-ಉಣಚಗೇರಿ ವೀರಶೈವ ಲಿಂಗಾಯತ ಸಮಾಜದ ಯುವ ಘಟಕದ ಅಧ್ಯಕ್ಷ ಅಪ್ಪು ಮತ್ತಿಕಟ್ಟಿ, ಮುಖಂಡರಾದ ಮಹಾಂತೇಶ ಅರಳಿ, ಬಸವರಾಜ ಬೇಲೇರಿ, ಪ್ರಭು ಚವಡಿ, ಬಸವರಾಜ ಕೋಟಗಿ, ಅಮರೇಶ ಗಾಣಿಗೇರ, ಶೇಕಣ್ಣ ಇಟಗಿ, ಚಿದಾನಂದಪ್ಪ ಹಡಪದ, ನಿಂಗಪ್ಪ ಹೂಗಾರ, ನಾಗಯ್ಯ ಗೋಂಗಡಶೆಟ್ಟಿಮಠ, ಮಾದೇವಪ್ಪ ಪವಾರ, ಹೇಮರಡ್ಡಿ ದೇವರಡ್ಡಿ, ವಿಜಯ ನೂಲ್ವಿ, ಮಹೇಶ ಪಲ್ಲೇದ, ಬಸವರಾಜ ನಂದಿಹಾಳ ಇದ್ದರು.