ಹಾನಗಲ್ಲ ವಕೀಲರ ಸಂಘ ಮಾದರಿಯಾಗಿದ್ದು, ನ್ಯಾಯಕ್ಕಾಗಿ ಸೇವೆ ಸಲ್ಲಿಸುವ ವಕೀಲರ ಸಮೂಹ ಇಲ್ಲಿದೆ ಎಂದು ಹಾನಗಲ್ಲ ಹಿರಿಯ ವಿಭಾಗದ ನ್ಯಾಯಾಲಯದ ನ್ಯಾಯಾಧೀಶೆ ಅನಿತಾ ಮೆಚ್ಚುಗೆ ವ್ಯಕ್ತಪಡಿಸಿದರು.
ಹಾನಗಲ್ಲ: ಹಾನಗಲ್ಲ ವಕೀಲರ ಸಂಘ ಮಾದರಿಯಾಗಿದ್ದು, ನ್ಯಾಯಕ್ಕಾಗಿ ಸೇವೆ ಸಲ್ಲಿಸುವ ವಕೀಲರ ಸಮೂಹ ಇಲ್ಲಿದೆ ಎಂದು ಹಾನಗಲ್ಲ ಹಿರಿಯ ವಿಭಾಗದ ನ್ಯಾಯಾಲಯದ ನ್ಯಾಯಾಧೀಶೆ ಅನಿತಾ ಮೆಚ್ಚುಗೆ ವ್ಯಕ್ತಪಡಿಸಿದರು.
ಹಾನಗಲ್ಲ ನ್ಯಾಯಾಲಯದಿಂದ ಮೈಸೂರು ಜಿಲ್ಲೆಯ ಹುಣಸೂರು ನ್ಯಾಯಾಲಯದ ಸಿವಿಲ್ ನ್ಯಾಯಾಧೀಶರಾಗಿ ವರ್ಗಾವಣೆಗೊಂಡ ಸಂದರ್ಭದಲ್ಲಿ ವಕೀಲರ ಸಂಘದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಹಾನಗಲ್ಲ ನ್ಯಾಯಾಲಯದಲ್ಲಿ ನನ್ನ ಮೂರು ವರ್ಷದ ಸೇವೆಯಲ್ಲಿ ಇಲ್ಲಿನ ವಕೀಲರ ಕಾರ್ಯ ಕ್ಷಮತೆ ನನಗೆ ಬಹು ಮೆಚ್ಚುಗೆಯಾಗಿದೆ ಎಂದರು.ವಕೀಲರ ಸಂಘದ ಅಧ್ಯಕ್ಷ ಟಿ.ಬಿ. ಸವಣೂರ ಮಾತನಾಡಿ, ಇಲ್ಲಿರುವ ಅವಧಿಯಲ್ಲಿ ವಕೀಲರ ಸಂಘದ ಮನವಿಗಳಿಗೆ ಸೂಕ್ತವಾಗಿ ಸ್ಪಂದನೆ ನೀಡಿರುವ ನ್ಯಾಯಾಧೀಶೆ ಅನಿತಾ ಅವರ ತೀರ್ಪು ಹೈಕೋರ್ಟ್‌ನಲ್ಲಿಯೂ ಮನ್ನಣೆ ಪಡೆದುಕೊಂಡಿವೆ. ನ್ಯಾಯಾಧೀಶರಾದ ಅನಿತಾ ಅವರ ಅವಧಿಯಲ್ಲಿ ನ್ಯಾಯವಾದಿಗಳು ಹೆಚ್ಚು ಶಿಸ್ತು, ಕಾರ್ಯ ಕ್ಷಮತೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎಂದರು.ನ್ಯಾಯವಾದಿ ಎಂ.ಎಸ್. ಹುಲ್ಲೂರ ಮಾತನಾಡಿ, ನ್ಯಾಯಾಧೀಶರಾದ ಅನಿತಾ ಅವರು ಹಾನಗಲ್ಲ ನ್ಯಾಯಾಲಯದಲ್ಲಿ ೩ ವರ್ಷಗಳ ಅವಧಿಯಲ್ಲಿ ದಕ್ಷ, ಕಾರ್ಯ ಕ್ಷಮತೆಯುಳ್ಳ, ನ್ಯಾಯ ಬಯಸಿ ಬಂದವರಿಗೆ ಉತ್ತಮ ನ್ಯಾಯ ಒದಗಿಸಿಕೊಟ್ಟಿದ್ದಾರೆ. ವಕೀಲರಲ್ಲಿ ಯಾರು ಹೆಚ್ಚು ಕಡಿಮೆ ಎನ್ನದೆ ಎಲ್ಲರನ್ನೂ ಸಮಾನವಾಗಿ ಕಂಡಿದ್ದರು. ವಕೀಲರಿಗೆ ಆದರ್ಶವಾಗಿರುವ ನ್ಯಾಯಧೀಶೆ ಅನಿತಾ ಅವರು ತಾಳ್ಮೆಯಿಂದ ಎಲ್ಲವನ್ನೂ ಸ್ವೀಕರಿಸಿ ನ್ಯಾಯ ಒದಗಿಸಿ ಕೊಡುತ್ತಿದ್ದರು ಎಂದರು.ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಬಿ. ವೆಂಕಟಪ್ಪ, ಸಂಘದ ಕಾರ್ಯದರ್ಶಿ ಎಂ.ಎಸ್. ಕಾಳಂಗಿ, ಸಹ ಕಾರ್ಯದರ್ಶಿ ಎಸ್.ಕೆ. ದೊಡ್ಡಮನಿ, ಹಿರಿಯ ವಕೀಲರಾದ ಬಿ.ಎಸ್. ಅಕ್ಕಿವಳ್ಳಿ, ಕೆ.ಬಿ. ದೊಡ್ಡಮನಿ, ಕೆ.ಜಿ ಸವದತ್ತಿ, ಎಫ್.ಬಿ. ಮಡಿವಾಳರ, ರಾಜು ಗೌಳಿ, ಎಂ.ಎಸ್. ಹುಲ್ಲೂರ, ಎಂ.ಎಂ. ಮುಲ್ಲಾ, ಅಶೋಕ ಹಂಗರಗಿ, ರವಿ ಪೂಜಾರ, ವೀಣಾ ಬ್ಯಾತನಾಳ, ಎಸ್.ಜಿ. ವಿಶ್ವನಾಥ, ಪಿ.ಎಸ್. ಕಡ್ಲೇರ, ರವಿ ಕಲಾಲ, ಹಿತ್ತಲಮನಿ, ಎಸ್.ಸಿ. ಬೈಲಣ್ಣನವರ ಮೊದಲಾದವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.