ಹ್ಯಾಂಡ್‌ಬಾಲ್ ಸ್ಪರ್ಧೆ: ರಾಜ್ಯ ತಂಡಕ್ಕೆ ಆಯ್ಕೆ

KannadaprabhaNewsNetwork |  
Published : Nov 27, 2024, 01:01 AM IST
೨೫ಕೆಎಂಎನ್‌ಡಿ-೨ರಾಷ್ಟ್ರಮಟ್ಟದ ಹ್ಯಾಂಡ್‌ಬಾಲ್ ಸ್ಪರ್ಧ್ಗೆ ಆಯ್ಕೆಯಾಗಿರುವ ಎಸ್.ವಿ.ಶ್ರೀಧರ್. | Kannada Prabha

ಸಾರಾಂಶ

ಮಂಡ್ಯ ಜಿಲ್ಲಾ ತಂಡವನ್ನು ಪ್ರತಿನಿಧಿಸಿದ್ದ ಆದರ್ಶ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಎಸ್.ವಿ.ಶ್ರೀಧರ್ ಪ್ರಥಮ ಸ್ಥಾನ ಗಳಿಸಿರುವುದರ ಜೊತೆಗೆ ಮುಂದಿನ ತಿಂಗಳು ಪಂಜಾಬ್‌ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ರಾಜ್ಯ ತಂಡದಿಂದ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಹಾಸನದಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ ಕಾಲೇಜು) ಮತ್ತು ಹಾಸನದ ಬ್ರಿಗೇಡ್ ಪದವಿ ಪೂರ್ವ ಕಾಲೇಜು ಇವರ ಸಹಯೋಗದಲ್ಲಿ ನ.೧೯ರಿಂದ ೨೦ರವರೆಗೆ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟದ ಹ್ಯಾಂಡ್‌ಬಾಲ್ ಸ್ಪರ್ಧೆಯಲ್ಲಿ ಮಂಡ್ಯ ಜಿಲ್ಲಾ ತಂಡವನ್ನು ಪ್ರತಿನಿಧಿಸಿದ್ದ ಆದರ್ಶ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಎಸ್.ವಿ.ಶ್ರೀಧರ್ ಪ್ರಥಮ ಸ್ಥಾನ ಗಳಿಸಿರುವುದರ ಜೊತೆಗೆ ಮುಂದಿನ ತಿಂಗಳು ಪಂಜಾಬ್‌ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ರಾಜ್ಯ ತಂಡದಿಂದ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಯ ಈ ಸಾಧನೆಗೆ ಆದರ್ಶ ಪದವಿ ಪೂರ್ವ ಕಾಲೇಜಿನ ಸಂಸ್ಥಾಪಕರಾದ ಡಾ.ಮೂರ್ತಿ, ಕಾಲೇಜಿನ ಪ್ರಾಂಶುಪಾಲ ಎಸ್.ಡಿ.ದೊಡ್ಡಾಚಾರ್, ಕಾಲೇಜಿನ ಡೀನ್ ಎಚ್.ಸಿ.ಅಭಿಲಾಷ್, ಕ್ರೀಡಾ ಕಾರ್ಯದರ್ಶಿ ಡಿ.ಸಿ.ಅಭಿಷೇಕ್ ಮತ್ತು ಬೋಧಕ, ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.

ಭಕ್ತರಿಗೆ ದರ್ಶನ ನೀಡಿದ ಸೀತಾಸಮೇತ ರಾಮಚಂದ್ರಪ್ರಭು ರಥ

ಮೇಲುಕೋಟೆ:

ಶ್ರೀಚೆಲುವನಾರಾಯಣಸ್ವಾಮಿ ದಿವ್ಯಸನ್ನಿಧಿಗೆ ತೆಲಂಗಾಣದ ಭದ್ರಾಚಲಂನ ಸೀತಾಸಮೇತ ರಾಮಚಂದ್ರಪ್ರಭು ದೇವಾಲಯದ ರಥ ಆಗಮಿಸಿ ಭಕ್ತರಿಗೆ ದರ್ಶನ ನೀಡಿತ್ತು.

ರಾಮಾನುಜರ ಕರ್ಮಭೂಮಿ ಮೇಲುಕೋಟೆಗೂ ಭದ್ರಾಚಲಂಗೂ ಅವಿನಾಭಾವ ಸಂಪರ್ಕವಿದೆ. ಭದ್ರಾಚಲಂ ರಾಮದಾಸರು ದೇವಾಲಯವನ್ನು ನಿರ್ಮಿಸಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಭಕ್ತಿ ಪ್ರಧಾನವಾದ ಸಾವಿರಾರು ಮೇರು ಕೀರ್ತನೆಗಳನ್ನು ರಚಿಸಿ ಶ್ರೀರಾಮನಿಗೆ ಅರ್ಪಿಸಿದ್ದರು

ಇಂತಹ ಮಹತ್ವದ ದೇವಾಲಯದಿಂದ ಸಾಂಪ್ರದಾಯಿಕ ಶೈಲಿಯಲ್ಲಿ ನಿರ್ಮಿಸಲಾದ ಪ್ರಚಾರ ರಥದೊಂದಿಗೆ ಆಗಮಿಸಿದ ಅಧಿಕಾರಿಗಳು ಮತ್ತು ಅರ್ಚಕರು ಮೇಲುಕೋಟೆಗೆ ಆಗಮಿಸಿ ಚೆಲುವನಾರಾಯಣಸ್ವಾಮಿ ದೇವಾಲಯದಿಂದ ಪೂಜೆಮಾಡಿಸಿ ಭಕ್ತರಿಗೆ ರಾಮಚಂದ್ರನ ದರ್ಶನ ಮಾಡಿಸಿದರು.

ರಥದಜೊತೆಗೆ ಆಗಮಿಸಿದ್ದ ಭದ್ರಾಚಲಂ ದೇಗುಲದ ಸಿಇಒ ಮತ್ತು ಅರ್ಚಕರು ಚೆಲುವನಾರಾಯಣಸ್ವಾಮಿ ಮತ್ತು ಬೆಟ್ಟದೊಡೆಯ ಯೋಗನರಸಿಂಹನ ದರ್ಶನ ಪಡೆದರು. ಭಕ್ತರು ರಥದಿಂದ ಕೇಳಿಬರುತ್ತಿದ್ದ ವೇದಮಂತ್ರ ಹಾಗೂ ಭದ್ರಚಲರಾಮದಾಸರ ಕರ್ನಾಟಕ ಶಾಸ್ತ್ರೀಯ ಸಂಗೀತ ಕೀರ್ತನೆಯೊಂದಿಗೆ ಸೀತಾಮಾತೆಯೊಂದಿಗೆ ವಿರಾಜಮಾನನಾಗಿದ್ದ ರಾಮಚಂದ್ರನ ದರ್ಶನಪಡೆದು ಪುಳಕಿತರಾದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ