ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಇಲ್ಲಿನ ವಿದ್ಯಾ ಪ್ರಸಾರಕ ಮಂಡಳದ ಎಸ್.ಆರ್.ನರಸಾಪೂರ ಕಲಾ ಮತ್ತು ಎಂ.ಬಿ.ಶಿರೂರ ವಾಣಿಜ್ಯ ಮಹಾವಿದ್ಯಾಲಯದ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ಸ್ನಾತಕೋತ್ತರ ವಿಭಾಗವು ಎಂಎ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಬೀಳ್ಕೊಡುವ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಬೆಳೆಸಿಕೊಂಡಾಗ ಭವಿಷ್ಯತ್ತಿನಲ್ಲಿ ಉತ್ತಮ ಜೀವನ ನಡೆಸಲು ಸಾಧ್ಯ. ರಾಮಾಯಣ ಹಾಗೂ ಮಹಾಭಾರತ ಉತ್ತಮ ಜೀವನ ಸಾಗಿಸಲು ದಾರಿದೀಪ. ಅವು ಹಲವು ಜೀವನ ಮೌಲ್ಯಗಳನ್ನು ತಿಳಿಸಿಕೊಡುತ್ತವೆ ಎಂದರು.ಅಧ್ಯಕ್ಷತೆ ವಹಿಸಿ ಪ್ರಾಚಾರ್ಯ ಶ್ರೀನಿವಾಸ ನರಗುಂದ ಮಾತನಾಡಿದರು. ಸುಮಾ ಹಾಗೂ ಅನಿತಾ ಪ್ರಾರ್ಥಿಸಿದರು. ಶ್ರುತಿ ನಾಯಕ ಸ್ವಾಗತಿಸಿದರು. ಅನಿತಾ ದಡ್ಡಿ ಪರಿಚಯಿಸಿದರು. ಆಸ್ಮಾ ಕಂದಗಲ್ ಹಾಗೂ ಚಂದ್ರಶೇಖರ ಹಿರ್ಲವರ ಅನಿಸಿಕೆ ಹೇಳಿದರು. ನಾಗರಾಜ ಮಲ್ಲಣ್ಣವರ ವಂದಿಸಿದರು. ಕಾವೇರಿ ಬಡಿಗೇರ ನಿರೂಪಿಸಿದರು. ಸಂಯೋಜಕ ಎಸ್.ವೈ.ಬೊಮ್ಮಣ್ಣವರ, ವಿದ್ಯಾರ್ಥಿ ಪ್ರತಿನಿಧಿ ಮೀನಾಕ್ಷಿ ಮನಗೂಳಿ, ಉಪನ್ಯಾಸಕರಾದ ಎಂ.ಡಿ.ಕೋರವಾರ, ಎಂ.ಕೆ. ಗುಡೂರ, ಕೆ.ಎಸ್. ದಾಸರ, ಎಸ್.ಎಸ್. ಕುಲಕರ್ಣಿ ಇದ್ದರು.