ಹನುಮಾನ್ ಚಾಲೀಸ ಪಾರಾಯಣ ಆಧ್ಯಾತ್ಮಿಕ ಸಂಚಲನ ಸೃಷ್ಟಿಸಲಿದೆ: ಟಿ.ಎಸ್.ಶ್ರೀವತ್ಸ

KannadaprabhaNewsNetwork |  
Published : Feb 11, 2026, 01:15 AM IST
32 | Kannada Prabha

ಸಾರಾಂಶ

ಮಹಾರಾಜ ಕಾಲೇಜು ಮೈದಾನದಲ್ಲಿ ಫೆ.14 ರಂದು ಅವಧೂತ ದತ್ತಪೀಠ ಗಣಪತಿ ಸಚ್ಚಿದಾನಂದ ಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿರಯವ ಶ್ರೀ ಹನುಮಾನ್ ಚಾಲೀಸ ಪಾರಾಯಣ ಮಹಾಯಜ್ಞದಲ್ಲಿ ಮೈಸೂರಿಗರು ಲಕ್ಷಾಂತರ ಸಂಖ್ಯೆಯಲ್ಲಿ ಪಾಲ್ಗೊಂಡು ಹನುಮನ ಸ್ಮರಣೆ ಮಾಡಿ, ಹಿಂದೂ ಸಮಾಜದ ರಕ್ಷಣೆಗೆ ಕೈಜೋಡಿಸಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರಿನಲ್ಲಿ ಹನುಮಾನ್ ಚಾಲೀಸ ಪಾರಾಯಣ ಆಧ್ಯಾತ್ಮಿಕ ಸಂಚಲನ ಸೃಷ್ಟಿಸಲಿದೆ ಎಂದು ಶಾಸಕ ಟಿ.ಎಸ್. ಶ್ರೀವತ್ಸ ತಿಳಿಸಿದರು.

ನಗರದ ಗಣಪತಿ ಸಚ್ಚಿದಾನಂದ ಆಶ್ರಮದಿಂದ ಹೊರಟ ಪ್ರಚಾರ ವಾಹನಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದ ಅವರು, ಮಹಾರಾಜ ಕಾಲೇಜು ಮೈದಾನದಲ್ಲಿ ಫೆ.14 ರಂದು ಅವಧೂತ ದತ್ತಪೀಠ ಗಣಪತಿ ಸಚ್ಚಿದಾನಂದ ಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿರಯವ ಶ್ರೀ ಹನುಮಾನ್ ಚಾಲೀಸ ಪಾರಾಯಣ ಮಹಾಯಜ್ಞದಲ್ಲಿ ಮೈಸೂರಿಗರು ಲಕ್ಷಾಂತರ ಸಂಖ್ಯೆಯಲ್ಲಿ ಪಾಲ್ಗೊಂಡು ಹನುಮನ ಸ್ಮರಣೆ ಮಾಡಿ, ಹಿಂದೂ ಸಮಾಜದ ರಕ್ಷಣೆಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಮೈಸೂರಿನ ಸರ್ವಜನಾಂಗದವರು ವಿವಿಧ ಬಡಾವಣೆಗಳು ಸೇರಿದಂತೆ ಗ್ರಾಮಂತರ ಪ್ರದೇಶ ಹಳ್ಳಿ ಹಳ್ಳಿಯಿಂದ ಹನುಮಾನ್ ಚಾಲೀಸ ಪಾರಾಯಣದಲ್ಲಿ ಭಾಗವಹಿಸಲು ಉತ್ಸುಕರಾಗುತ್ತಿದ್ದಾರೆ. ಖುಷಿಯಿಂದ ಸಂಘಟಿತರಾಗುತ್ತಿದ್ದಾರೆ ಎಂದರೆ ಹಿಂದೂ ಸಮಾಜದ ರಕ್ಷಣೆಗೆ ಗಣಪತಿಸಚ್ಚಿದಾನಂದ ಸ್ವಾಮೀಜಿಯವರ ಹನುಮಾನ ಚಾಲೀಸ ಕಾರ್ಯಕ್ರಮ ಪ್ರೇರಣೆಯಾಗಿದೆ ಆಧ್ಯಾತ್ಮಿಕ ಲೋಕವೆ ಸೃಷ್ಟಿಯಾಗಲಿದೆ ಎಂದರು.

ಆಂಜನೇಯನ ಭಕ್ತರು ಲಕ್ಷಕಂಠದಿಂದ ಜೈ ಹನುಮಾನ್ ಎಂದು ಘೋಷಣೆ ಹಾಕಿದಾಗ ಅದರಲ್ಲಿ ಸಿಗುವ ಆನಂದ, ಪುಣ್ಯ ಅದ್ಭುತವಾದದ್ದು. ಮೈಸೂರಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಅವರು ಹೇಳಿದರು.

ನಗರ ಪಾಲಿಕೆ ಮಾಜಿ ಸದಸ್ಯರಾದ ಎಂ.ಡಿ. ಪಾರ್ಥಸಾರಥಿ, ಸುಬ್ಬಯ್ಯ, ಮುಖಂಡರಾದ ಜೋಗಿ ಮಂಜು, ರಾಕೇಶ್ ಗೌಡ, ಅಜಯ್ ಶಾಸ್ತ್ರಿ, ಪ್ರದೀಪ್ ಕುಮಾರ್, ಪ್ರಜೇಶ್ ಕುಮಾರ್, ಸುರೇಶ್ ಮೊದಲಾದವರು ಇದ್ದರು.

ಇಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

ಮೈಸೂರು: ಸೆಸ್ಕ್ 66/11 ಕೆ.ವಿ ರಾಜೀವ್‌ ನಗರ ಮತ್ತು ದೇವನೂರು ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ಕೆಪಿಟಿಸಿಎಲ್ ವತಿಯಿಂದ ತ್ರೈಮಾಸಿಕ ಅವಧಿಯ ನಿರ್ವಹಣಾ ಕಾಮಗಾರಿಯನ್ನು ಹಾಗೂ ಹಾಲಿ ಇರುವ 220 ಕೆ.ವಿ ಹೂಟಗಳ್ಳಿ- ವಾಜಮಂಗಲ- ಟಿ.ಕೆ. ಹಳ್ಳಿ ಏಕಮುಖ ವಿದ್ಯುತ್ ಪ್ರಸರಣ ಮಾರ್ಗದ ಬದಲಾಗಿ 75.594 ಕಿ.ಮೀ ದ್ವಿಮುಖ ವಿದ್ಯುತ್ ಗೋಪುರ ಹಾಗೂ ದ್ವಿಮುಖ ವಿದ್ಯುತ್ ಮಾರ್ಗವನ್ನು ನಿರ್ಮಾಣ ಮಾಡುವ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ಫೆ.11ರ ಬೆಳಗ್ಗೆ 10 ರಿಂದ ಸಂಜೆ 5.30 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ಅನಿಯಮಿತ ವ್ಯತ್ಯಯವಾಗಲಿದೆ.

ರಾಜೀವ್‌ನಗರ ವಿ.ವಿ ಕೇಂದ್ರದ ವ್ಯಾಪ್ತಿಯಲ್ಲಿ ರಾಜೀವನಗರ 2ನೇ ಹಂತ, ಕ್ರಿಷ್ಚಿಯನ್ ಕಾಲೋನಿ, ಯಾಸಿನ್ ಮಸ್ಜಿದ್, ಎಸ್. ಬಡಾವಣೆ, ಸೂರ್ಯನಾರಾಯಣ ದೇವಸ್ಥಾನ ರಸ್ತೆ, ಆಲ್ ಬಜಾರ್ ಮಸ್ಜಿದ್ ವೃತ್ತ, ಅಂಬೇಡ್ಕರ್ ಭವನ ರಸ್ತೆ, ಕ್ಯೂಬಾ ಮಸ್ಜಿದ್ ವೃತ್ತ, ನಾರಾಯಣ ಹೃದಯಾಲಯ ಆಸ್ಪತ್ರೆ, ಕಾಮನಕೆರೆಹುಂಡಿ, ಕೆ.ಎಚ್.ಬಿ. ಬಡಾವಣೆ, ಆರ್ ಟಿಒ- 55, ಆಸೀನಾ ಬಡಾವಣೆ, ರಾಜೀವನಗರ 3ನೇ ಹಂತ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ದೇವನೂರು ವಿ.ವಿ. ಕೇಂದ್ರದ ವ್ಯಾಪ್ತಿಯಲ್ಲಿ ಬಿ.ಡಿ ಕಾಲೋನಿ, ಅಜೀಜ್ ಸೇಠ್ ನಗರ, 320 ಮನೆ, ಕೇಸರಿ ಕಾಲೋನಿ, ಮಹದೇವಪುರ ಮುಖ್ಯ ರಸ್ತೆ, ಶಕ್ತಿನಗರ, ರಾಜ್‌ ಕುಮಾರ್ ರಸ್ತೆ, ಕಲ್ಯಾಣಗಿರಿ, ಅಕ್ಷಯ ಭಂಡಾರ್, ರಮ್ಮನಹಳ್ಳಿ, ಕಾಳಿಸಿದ್ದನಹುಂಡಿ, ಹಂಚ್ಯಾ, ಸಾತಗಳ್ಳಿ, ಗಳಿಗರಹುಂಡಿ, ನೆಹರು ನಗರ, ಸಾತಗಳ್ಳಿ ಗ್ರಾಮ, ಡಿ.ಟಿ.ಎಸ್. ರಾವ್ ನಗರ, ವಿಟಿಯು ಕಾಲೇಜು ಎದುರು, ಸನ್ ಪ್ಯೂರ್ ಬಡಾವಣೆ, ಸಾತಗಳ್ಳಿ ಬಿ ಜೋನ್, ವಿಟಿಯು ಕಾಲೇಜು, ಭಾರತ್ ನಗರ, ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಐಗಳಿಯಲ್ಲಿ ಮಹಾವೀರ ಜಯಂತಿ ಆಚರಣೆ
ಮನುಕುಲ ಉದ್ದಾರಿಸಿದ ಮಹಾನ್ ಚೇತನ: ಶಿವಲೀಲಾ ಸದಾಶಿವ ಬುಟಾಳಿ