-ಶ್ರೀರಾಮ ಭಕ್ತ ಹನುಮಂತನ ಜನ್ಮದಿನೋತ್ಸವ । ಜಿಲ್ಲೆಯ ವಿವಿಧೆಡೆ ಸಂಭ್ರಮ-ಸಡಗರ । ಹನುಮಾನ್ ಸ್ಮರಣೆ । ಪೂಜೆ ಪುನಸ್ಕಾರ
----ಕನ್ನಡಪ್ರಭ ವಾರ್ತೆ ಕಲಬುರಗಿ
ಜಿಲ್ಲಾದ್ಯಂತ ಶ್ರೀರಾಮನ ಭಕ್ತ ಹನುಮಂತ ದೇವರ ಜನ್ಮದಿನೋತ್ಸವ ಸಂಭ್ರಮ-ಸಡಗರಗಳಿಂದ ಜಿಲ್ಲೆಯಲ್ಲಿ ವಿವಿಧೆಡೆ ನಡೆಯಿತು.ಜಿಲ್ಲೆಯಲ್ಲಿರುವ ಹನುಮಂತ ದೇವರ ಅತ್ಯಂತ ಪವಿತ್ರ ಹಾಗೂ ಪುರಾಣ ಪ್ರಸಿದ್ಧ ಕ್ಷೇತ್ರಗಳಲ್ಲಂತೂ ಹನುಮಾನ್ ಸ್ಮರಣೆ ವಿಶೇಷವಾಗಿ ನಡೆಯಿತು.
ಬಲಭೀಮಸೇನ ದೇವಸ್ಥಾನ ಟ್ರಸ್ಟ್ ಪರವಾಗಿ ಸದಸ್ಯರೆಲ್ಲರೂ ರಾಸಣಗಿಯಲ್ಲಿದ್ದುಕೊಂಡು ಹುನುಮ ಜಯಂತಿ ಪೂಜೆ-ಪುನಸ್ಕಾರಗಳನ್ನು ನಡೆಸಿಕೊಟ್ಟರು. ದೇವರ ದರುಶನಕ್ಕೆ ಬಂದ ಭಕ್ತರೆಲ್ಲರಿಗೂ ಬೇಳೆ ಕೋಸಂಬರಿ ಹಾಗೂ ಪಾನಕ ನೀಡಿದರು.ಭೀಮಾ ತೀರದಲ್ಲಿರುವ ರಾಸಣಗಿ ಬಲಭೀಮಸೇನ ದೇವರು, ನೆಲೋಗಿ ಬಲಭೀಮ ದೇವರಿಗೆ ಈ ದಿನ ವಿಶೇಷ ಎಲೆ ಪೂಜೆ ಅರ್ಪಣೆಯಾಯ್ತು. ಇದಲ್ಲದೆ ಬೆಳಗ್ಗೆಯೇ ತೊಟ್ಟಿಲೋತ್ಸವ ನಡೆದು ಹನುಮಂತನ ಜನ್ಮದಿನೋತ್ಸವವನ್ನು ಭಕ್ತರೆಲ್ಲರೂ ಆಚರಿಸಿ ಸಂಭ್ರಮಿಸಿದರು.
ಕಾಸರ ಭೋಸ್ಗಾದಲ್ಲಿರುವ ಪುರಾತನ ಹಾಗೂ ವ್ಯಾಸರಾಯರು ಪ್ರತಿಷ್ಠಾಪಿಸಿರುವ ಹನುಮಂತ ದೇವರಿಗೂ ಅಲ್ಲಿನ ಅರ್ಚಕರಾದ ಹಳ್ಳೆಪ್ಪಾಚಾರ್ಯ ಜೋಶಿಯವರು ಹಾಗೂ ಪರಿವಾರದವರು ಪೂಜಾ ಕೈಂಖರ್ಯ ನೆರವೇರಿಸಿದರು.ಜೇವರ್ಗಿ ತಾಲೂಕಿನಲ್ಲಿರುವ ದುಮ್ಮದ್ರಿಯಲ್ಲಿ ನೆಲೆ ನಿಂತಿರುವ ವರಹಳ್ಳೆರಾಯ ಹೆಸರಿನ ಪ್ರಾಣ ದೇವರಿಗೂ ಭಕ್ತರೆಲ್ಲರೂ ಸೇರಿ ಪೂಜೆ, ಲಂಕಾರ ಅರ್ಪಿಸಿದರು. ಮಳ್ಳಿ ಸೇರಿದಂತೆ ಸುತ್ತಲಿನ ಹತ್ತಾರು ಹಳ್ಳಿಗಳ ಜನ ಸೇರಿಕೊಂಡು ಹನುಮಂತ ದೇವರಿಗೆ ವಿವಿಧ ಸೇವೆಗಳನ್ನು ಅರ್ಪಿಸಿ ಪುನೀತರಾದರು.
ಜೇವರ್ಗಿ ಗಡಿಯಲ್ಲಿರುವ ಹಾಗೂ ದೇವರಹಿಪ್ಪರಗಿ ತಾಲೂಕಿನ ಕೋರವಾರದಲ್ಲಿ ನೆಲೆ ನಿಂತಿರುವ ಶ್ರೀ ವಾದಿರಾಜ ಯತಿಗಳು ಪ್ರತಿಷ್ಠಾಪಿಸಿರುವ ಕೋರವಾರದ ಬಲಭೀಮಸೇನ ದೇವರ ಸನ್ನಿಧಾನದಲ್ಲಿಯೂ ಪೂಜಾದಿಗಳು ನಡೆದವು. ರಜತ ಕವಚ, ಚಿನ್ನಾಭರಣಗಳೊಂದಿಗೆ ಇಲ್ಲಿನ ಬಲಭೀಮಸೇನ ದೇವರು ಅತ್ಯಂತ ಆಕರ್ಷಕವಾದಂತಹ ಅಲಂಕಾರದಲ್ಲಿ ತನ್ನ ಆರಾಧಕ ಭಕ್ತರಿಗೆ ಅನುಗ್ರಹಿಸಿದರು......ಬಾಕ್ಸ್.....
ನೆಲೋಗಿಯಲ್ಲಿ ವಿಶೇಷ ಪೂಜೆ ರಥೋತ್ಸವಜೇವರ್ಗಿ ತಾಲೂಕಿನ ನೆಲೋಗಿಯಲ್ಲಿರುವ ಬಲಬೀಮ ಸೇನ ದೇವರ ರಥೋತ್ಸವ ಸಂಜೆ ನಡೆಯಿತು. ರತೋತ್ಸವ ಸೇವೆ ಅರ್ಪಣೆಯಾಗೋವರೆಗೂ ಇಡೀ ನೆಲೋಗಿ ಜನರೇ ಹನುಮಂತ ದೇವರ ಭಕ್ತಿಗಾಗಿ ಉಪವಾಸ ವೃತ ಆಚರಿಸೋದು ಪರಂಪರೆ. ಅದರಂತೆಯೇ ಇಂದೂ ಕೂಡಾ ನೆಲೋಗಿಯಲ್ಲಿ ಉಪವಾಸವಿದ್ದೆ ಭಕ್ತರೆಲ್ಲರೂ ನೆಲೋಗಿ ಹನಮಂತ ದೇವರನ್ನು ಸ್ಮರಿಸಿದರು. ಸಂಜೆ ಹೊತ್ತು ಜೋಷಿ ಪರಿವಾರ, ಮಾಹೂರಕರ್ ಪರಿವಾರ ಸೇರಿದಂತೆ ಊರಿನ ಭಕ್ತರೆಲ್ಲರೂ ಸೇರಿಕೊಂಡು ರಥೋತ್ಸವ ಸೆವೆಯ ನಂತರ ಪ್ರಸಾವ ಸೇವಿಸಿದರು.
----------....ಬಾಕ್ಸ್...
ಕೋರಂಟಿ ಹನುಮಂತ ದೇವರ ದರುಶನಕ್ಕೆ ಜನಜಾತ್ರೆಕಲಬುರಗಿ ನಗರದಲ್ಲಿರುವ ಕೋರಂಟಿ ಹನುಮಂತ ದೇವರ ದರುಶನಕ್ಕೆ ಇಂದು ಬೆಳಗ್ಗೆಯಿಂದಲೇ ಭಕ್ತರು ಸರತಿಯಲ್ಲಿ ನಿಂತು ಭಕ್ತಿ ಅರ್ಪಿಸಿದರು. ಇಲ್ಲಿಗೆ ಬಂದು ದೇವರ ದರುಶನ ಪಡೆದು ಭಜಿಸಿದರೆ ಮನದ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆಯಿಂದ ಹನುಮ ಜಯಂತಿ ಪ್ರಯುಕ್ತ ಭಕ್ತರ ನೂಕು ನುಗ್ಗಲು ಇತ್ತು.
----ಫೋಟೋ- ಹನುಮ 1
ರಾಸಣಗಿ ಬಲಭೀಮ ಸೇನ ಮಂದಿರದಲ್ಲಿ ತೊಟ್ಟಿಲೋತ್ಸವ, ಭಕ್ತರ ಸೇವೆ ಅರ್ಪಣೆಫೋಟೋ- ಹನುಮ 2
ರಾಸಣಗಿ ಬಲಭೀಮಸೇನ ದೇವರುಫೋಟೋ- ಹನುಮ 3
ಭೀಮಾ ತೀರದ ಪುಣ್ಯಕ್ಷೇತ್ರ ಜೇವರ್ಗಿಯ ನೆಲೋಗಿ ಬಲಭೀಮಸೇನ ದೇವರ ವಿಶ್ವರೂಪ ನೋಟಫೋಟೋ- ಹನುಮ 4
ಜೇವರ್ಗಿ ತಾಲೂಕಿನ ಕಾಸರ ಭೋಸ್ಗಾ ಹನುಮಂತ ದೇವರ ವಿಶ್ವರೂಪ ದರ್ಶನಫೋಟೋ- ಹನುಮ 5
ಜೇವರ್ಗಿ ತಲೂಕಿನ ದುಮ್ಮದ್ರಿ ವರಹಳ್ಳೆರಾಯ ಹೆಸರಲ್ಲೇ ಭಕ್ತರನ್ನು ಪೊರೆಯುತ್ತಿರುವ ಪ್ರಾಣ ದೇವರ ವಿಶ್ವರೂಪಫೋಟೋ- ಹನುಮ 6 ಮತ್ತು ಹನುಮ 7
ಜೇವರ್ಗಿ ಗಡಿ, ದೇವರ ಹಿಪ್ಪರ್ಗಿ ತಾಲೂಕಿನ ಕೋರವಾರದಲ್ಲಿ ನೆಲೆ ನಿಂತಿರುವ ವಾದಿರಾಜರು ಪ್ರತಿಷ್ಠಾಪಿತ ರಾಜಾಧಿರಾಜ ಬಲಭೀಮ ದೇವರ ವಿಶೇಷ ಅಲಂಕಾರ ನೋಟ--