ಜಿಲ್ಲಾದ್ಯಂತ ಸಂಭ್ರಮದ ಹನುಮ ಜಯಂತಿ

KannadaprabhaNewsNetwork |  
Published : Dec 14, 2024, 12:46 AM IST
5.ವೀರಾಂಜುನೇಯಸ್ವಾಮಿಗೆ  ಬೆಣ್ಣೆ ಅಲಂಕಾರ ಮಾಡಿರುವುದು | Kannada Prabha

ಸಾರಾಂಶ

ರಾಮನಗರ: ನಗರದ ವಿವಿಧೆಡೆ ಶ್ರೀ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಹನುಮಜಯಂತಿಯನ್ನು ಸಡಗರ ಸಂಭ್ರಮದಿಂದ ಆಚರಿಸುವ ಮೂಲಕ ಭಕ್ತರು ಭಕ್ತಿಯ ಪರಾಕಾಷ್ಟೆ ಮೆರೆದರು.

ರಾಮನಗರ: ನಗರದ ವಿವಿಧೆಡೆ ಶ್ರೀ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಹನುಮಜಯಂತಿಯನ್ನು ಸಡಗರ ಸಂಭ್ರಮದಿಂದ ಆಚರಿಸುವ ಮೂಲಕ ಭಕ್ತರು ಭಕ್ತಿಯ ಪರಾಕಾಷ್ಟೆ ಮೆರೆದರು.

ನಗರದ ಪ್ರಸಿದ್ಧ ಅಗ್ರಹಾರದ ಶ್ರೀ ಅಭಯ ಆಂಜನೇಯಸ್ವಾಮಿ ದೇವಾಲಯದಲ್ಲಿ ಬೆಳಿಗ್ಗೆ ಫಲ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ, 9 ಗಂಟೆಗೆ ಪವಮಾನ ಹೋಮ, ಪೂರ್ಣಾಹುತಿ ನಡೆದವು. ಗಾಯಕಿ ಜಾನ್ಸಿ ತಂಡದವರಿಂದ ಭಜನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಲ್ಲೆಡೆ ದೇವಾಲಯಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದ ಅನ್ನದಾನ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಿದವು.

ಕೆಂಗಲ್ ಆಂಜನೇಯಸ್ವಾಮಿ, ಶ್ರೀ ರಾಮದೇವರ ಬೆಟ್ಟದ ಆರ್ಚ್ ಬಳಿಯಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯ, ಕೆಂಪೇಗೌಡ ವೃತ್ತದ ಪಂಚಮುಖಿ ಆಂಜನೇಯ, ಹೊಸಳ್ಳಿ ಬಯಲು, ಜಿಲ್ಲಾಧಿಕಾರಿ ಕಚೇರಿ ಮುಂಭಾಗ, ಗಾಂಧಿನಗರ, ವಾಟರ್ ಟ್ಯಾಂಕ್ ವೃತ್ತದ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಅದ್ಧೂರಿಯಾಗಿ ಹನುಮ ಜಯಂತಿ ಯನ್ನು ಆಚರಣೆ ಮಾಡಲಾಯಿತು. ಅಭಯ ಆಂಜನೇಯಸ್ವಾಮಿ ದೇವಾಲಯದ ಎರಡು ಇಕ್ಕೆಲಗಳ ರಸ್ತೆಗಳನ್ನು ಮದುವಣಗಿತ್ತಿಯಂತೆ ವಿದ್ಯುತ್ ದೀಪಲಂಕಾರಗಳಿಂದ ಸಿಂಗರಿಸಲಾಗಿತ್ತು.

ಕಸಬಾ ಹೋಬಳಿ ಸೋಮಸಂದ್ರದ ಶ್ರೀ ಆಂಜನೇಯ, ಜಲಸಿದ್ದೇಶ್ವರ ಬೆಟ್ಟದ ತಪ್ಪಲಿನ ವೀರಾಂಜನೇಯಸ್ವಾಮಿ, ಬಿಡದಿ ಹೋಬಳಿಯ ಹನುಮಂತನಗರದ ಇತಿಹಾಸ ಪ್ರಸಿದ್ಧ ಶ್ರೀ ಕೋತಿ ಆಂಜನೇಯಸ್ವಾಮಿ, ಮಂಚನಾಯ್ಕನಹಳ್ಳಿಯ ಶ್ರೀ ಬ್ಯಾಟರಾಯಸ್ವಾಮಿ, ಬಿಡದಿ ಮುಖ್ಯರಸ್ತೆ, ಬೈರಮಂಗಲ ವೃತ್ತ, ಛತ್ರವಾರ್ಡಿನ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಭಕ್ತರು ವಿವಿಧ ಧಾರ್ಮಿಕ ಪೂಜಾ ಕೈಂಕರ್ಯ ಗಳೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಜೈ ಹನುಮಾನ್ ಮಂತ್ರ ಪಠಣ ಮಾಡಿದರು.

ಬೆಳಿಗ್ಗೆಯಿಂದಲೇ ದೇವಾಲಯಗಳ ಮುಂದೆ ಸರದಿ ಸಾಲಿನಲ್ಲಿ ನಿಂತು ಅಪಾರ ಭಕ್ತರು ದರ್ಶನ ಪಡೆದರು. ಹನುಮ ಜಯಂತಿ ಅಂಗವಾಗಿ ಎಲ್ಲ ದೇವಾಲಯಗಳಲ್ಲಿನ ಉತ್ಸವ ಮೂರ್ತಿಗಳನ್ನು ಬೆಣ್ಣೆ, ಗಂಧ, ಅರಿಶಿನ ಸೇರಿದಂತೆ ವಿವಿಧ ಬಗೆಯ ಫಲ, ಪುಷ್ಪಗಳಿಂದ ಸಿಂಗರಿಸಿ, ವಿಶೇಷ ಪೂಜಾ ಕಾರ್ಯ ಗಳನ್ನು ನೆರವೇರಿಸಿದರು.

ವೀರಾಂಜನೇಯಸ್ವಾಮಿಗೆ ಬೆಣ್ಣೆ ಅಲಂಕಾರ :

ರಾಮನಗರ ತಾಲೂಕಿನ ಬಿಳಗುಂಬ ಗ್ರಾಮದ ಜಲಸಿದ್ದೇಶ್ವರ ಬೆಟ್ಟದ ತಪ್ಪಲಿನಲ್ಲಿರುವ ಶ್ರೀ ವೀರಾಂಜನೇಯಸ್ವಾಮಿಗೆ ಬೆಣ್ಣೆ ಅಲಂಕಾರ ಮಾಡಲಾಗಿತ್ತು.

ಜಯಂತ್ಯುತ್ಸವ ನಿಮ್ಮಿತ್ತ ಹೋಮ, ಹವನ, ಅಭಿಷೇಕ ಮಹಾಮಂಳಾರತಿ ನಡೆಯಿತು. ವೀರಾಂಜುನೇಯಸ್ವಾಮಿಗೆ ವಿಶೇಷವಾಗಿ ಬೆಣ್ಣೆ ಅಲಂಕಾರ ನೆರವೇರಿಸಲಾಗಿತ್ತು ,ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಬಗೆ ಬಗೆಯ ಪ್ರಸಾದ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ದೇವಸ್ಥಾನದ ಅಭಿವೃದ್ಧಿಗೆ ಹೆಚ್ಚಿನ ಶ್ರಮವಹಿಸಿ ಕಾರ್ಯನಿರ್ವಹಿಸಿದ ಪ್ರದೀಪ್ ಅವರನ್ನು ಯುವ ಮಿತ್ರರು ಮತ್ತು ಬಿಳಗುಂಬ ಗ್ರಾಮಸ್ಥರ ಪರವಾಗಿ ಬಿ.ಟಿ.ರಾಜೇಂದ್ರ ಪರಿಸರ ಪ್ರೇಮಿ ಗೌರವಿಸಲಾಯಿತು ಕಾರ್ಯಕ್ರಮದಲ್ಲಿ ಗ್ರಾಮದ ಪಿ.ಮೋಹನ್ ಕುಮಾರ್, ಚಂದ್ರಶೇಖರ್(ಕೆಂಚೇಗೌಡ),ಬಿ.ಸಿ.ಶಾಂತಯ್ಯ,ಬಿ.ಟಿ.ದಿನೇಶ್ ಬಿಳಗುಂಬ, ಶಿವಲಿಂಗಯ್ಯ, ತಮ್ಮಯ್ಯ, ಬಿ.ಸಿ.ಕುಮಾರ್ ಹನುಮೇಶ್,ರಾಮಚಂದ್ರು, ರಾಮಕೃಷ್ಣಯ್ಯ,ಮಲ್ಲಿಕಾರ್ಜುನ, ಸುರೇಶ್,ರಾಜು, ಶಂಕರ್, ಸಚಿನ್, ಚೇತನ್,ಹೇಮಂತ್,ವಾಸು,ಶಿವರಾಜ್, ರವಿಕುಮಾರ್,ರಘು,ಕೃಷ್ಣಪ್ಪ,ಕುಮಾರ್, ಶ್ರೀಧರ್,ವಿಕ್ಕಿ,ಅನೀಲ್ ಗ್ರಮದ ಹಿರಿಯ ಮುಖಂಡರು ಯುವಕ ಮಿತ್ರರು ಮತ್ತು ಗ್ರಾಮಸ್ಥರು ಹಾಜರಿದ್ದರು.

13ಕೆಆರ್ ಎಂಎನ್ 4,5,6.ಜೆಪಿಜಿ

5.ವೀರಾಂಜುನೇಯಸ್ವಾಮಿಗೆ ಬೆಣ್ಣೆ ಅಲಂಕಾರ ಮಾಡಿರುವುದು

6.ಆಂಜನೇಯ ಮೂರ್ತಿಗೆ ಹೂವಿನ ಅಲಂಕಾರ ಮಾಡಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಳಿಪಟ ದಾರ ಕುತ್ತಿಗೆ ಸೀಳಿ ಮಗಳನ್ನು ಹಾಸ್ಟೆಲ್‌ನಿಂದ ಕರೆತರಲು ಹೊರಟಿದ್ದ ಅಪ್ಪ ದಾರುಣ ಸಾವು
ಪೌರಾಯುಕ್ತೆಗೆ ಬೆಂಕಿ: ಕಾಂಗ್ರೆಸ್ಸಿಗನಿಂದ ಧಮ್ಕಿ