ಕರೇಕಲ್ ಆಂಜನೇಯಸ್ವಾಮಿ ಸನ್ನಿಧಿಯಲ್ಲಿ ಹನುಮ ಜಯಂತಿ

KannadaprabhaNewsNetwork | Published : Dec 25, 2023 1:30 AM

ಸಾರಾಂಶ

ಧರ್ನುಮಾಸ ದ್ವಾದಶಿಯಂದು ಹನುಮ ಜಯಂತಿ ಆಚರಣೆ ಮಾಡಲಾಗುತ್ತದೆ

ಚಳ್ಳಕೆರೆ: ಪ್ರತಿವರ್ಷದಂತೆ ಈ ವರ್ಷವೂ ನಾಯಕನಹಟ್ಟಿ ರಸ್ತೆಯ ಕರೇಕಲ್ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಹನುಮ ಜಯಂತಿ ಕಾರ್ಯಕ್ರಮವನ್ನು ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಕ್ತಿ, ಶ್ರದ್ಧೆಯಿಂದ ನಡೆಸಲಾಯಿತು.

ಹನುಮ ಜಯಂತಿ ವಿಶೇಷವೆಂದರೆ ದೇವಸ್ಥಾನದಲ್ಲಿರುವ ಆಂಜನೇಯ ಸ್ವಾಮಿಗೆ ವಿಶೇಷ ಅಲಂಕಾರ ಮಾಡಿದ್ದು, ಶಿವನ ಆಕಾರದಲ್ಲಿ ಮಾರುತಿ ಮತ್ತು ವೆಂಕಟೇಶ್ವರ ಸ್ವಾಮಿಯ ದರ್ಶನ ಮಾಡಿಸುವ ಮೂಲಕ ಆಗಮಿಸಿದ್ದ ಎಲ್ಲಾ ಭಕ್ತರಿಗೆ ಶಿವ, ಮಾರುತಿ, ವೆಂಕಟೇಶನ ಅನುಗ್ರಹ ಪಡೆಯುವಂತೆ ಮಾಡಲಾಯಿತು. ವೇದಬ್ರಹ್ಮ ನಾಗಶಯನ ಗೌತಮ್ ಪೂಜಾ, ಹವನ, ಹೋಮ ನಡೆಸಿದ್ದು, ಹೇಮಂತ್‌ ಗೌತಮ್ ಮತ್ತು ಪ್ರಕಾಶ್ ವಿಶೇಷ ಹೂವಿನ ಅಲಂಕಾರವನ್ನು ಮಾಡಿದ್ದರು.

ಬೆಳಗ್ಗಿನಿಂದಲೇ ವಿಶೇಷ ಪೂಜಾ ಕಾರ್ಯಕ್ರಮ ಆರಂಭವಾಗಿದ್ದು, ಜನರ ಕಲ್ಯಾಣಕ್ಕಾಗಿ ಹೋಮ ಹಾಗೂ ಪೂಜಾದಿಗಳನ್ನು ನಡೆಸಲಾಯಿತು. ಮಹಿಳೆಯರಿಂದ ಭಜನಾ ಕಾರ್ಯಕ್ರಮ ನಡೆದವು. ನಂತರ ಆಂಜನೇಯ ಸ್ವಾಮಿಗೆ ಅಷ್ಟೋತ್ತರ ಪೂಜಾ ಸೇವೆ ನಡೆಯಿತು. ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಡಾ.ಅನಂತರಾಮ್‌ ಗೌತಮ್, ಪ್ರದೀಪ್‌ ಶರ್ಮಾ, ಪ್ರವೀಣ್‌ ಶರ್ಮಾ, ಭೀಮರಾಜ್, ಸಿ.ಎಸ್.ಗೋಪಿನಾಥ, ಜೆ.ಎಸ್.ಶ್ರೀನಾಥ ಶರ್ಮಾ ಮುಂತಾದವರು ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ನಗರದ ಪರಿಮಳ ಏಜೆನ್ಸಿವತಿಯಿಂದ ಆಗಮಿಸಿದ್ದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ನಗರದ ಅಜ್ಜಯ್ಯಗುಡಿ ರಸ್ತೆಯಲ್ಲಿನ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಹನುಮಜಯಂತಿ ಹಿನ್ನೆಲೆಯಲ್ಲಿ ವಿಶೇಷ ಪೂಜಾ ಕಾರ್ಯ ನಡೆದವು. ಹಳೇಟೌನ್‌ನ ಪೇಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲೂ ಸಹ ಹನುಮ ಜಯಂತಿ ಕಾರ್ಯಕ್ರಮವನ್ನು ಭಕ್ತಿ ಶ್ರದ್ಧೆಯಿಂದ ನಡೆಯಿತು.

ನೂರಾರು ಭಕ್ತರು ಬೆಳಗಿನಿಂದ ಆಗಮಿಸಿ ಸ್ವಾಮಿಯ ದರ್ಶನ, ಅನುಗ್ರಹ ಪಡೆದರು. ಪ್ರಧಾನ ಆರ್ಚಕರಾದ ಎ.ಶಿವಕುಮಾರಶರ್ಮ ಮಾರ್ಗದರ್ಶನದಲ್ಲಿ ಪೂಜಾ ಕಾರ್ಯಗಳು ನಡೆದವು. ಬಿಎಂ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿರುವ ಶ್ರೀಆಂಜನೇಯಸ್ವಾಮಿ ದೇವಸ್ಥಾನದಲ್ಲೂ ಸಹ ಹನುಮ ಜಯಂತಿ ಕಾರ್ಯಕ್ರಮ ವೈಭವದಿಂದ ನಡೆಯಿತು. ಸುತ್ತಮುತ್ತಲ ನೂರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದರು, ದೇವಸ್ಥಾನ ಸುತ್ತ ಕೇಸರಿ

Share this article