ಜಿ.ದೇವರಾಜ ನಾಯ್ಡು
ಪಟ್ಟಣ ಪಂಚಾಯಿತಿ ಸನಿಹದಲ್ಲೇ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಪಟ್ಟಣದ ಸಾರ್ವಜನಿಕ ಶೌಚಾಲಯ ಗುಂಡಿಯಲ್ಲಿ ಮಲ ತುಂಬಿರುವುದರಿಂದ ಶೌಚಾಲಯದ ಬಾಗಿಲು ಮುಚ್ಚಿ ಬಂದ್ ಮಾಡಲಾಗಿದೆ. ಇದರಿಂದಾಗಿ ಈ ಭಾಗದ ಧಾರ್ಮಿಕ ಮತ್ತು ಪ್ರವಾಸಿ ತಾಣಗಳಿಗೆ ತೆರಳುವ ಸಾರ್ವಜನಿಕರಿಗೆ ಹಾಗೂ ದಿನನಿತ್ಯ ನೂರಾರು ವಾಹನಗಳಲ್ಲಿ ಬಂದು ಹೋಗುವವರು ಶೌಚಕ್ಕಾಗಿ ಪರದಾಡುವಂತಹ ಸ್ಧಿತಿ ನಿರ್ಮಾಣವಾಗಿದೆ.
ಅನೈರ್ಮಲ್ಯ: ಪಟ್ಟಣ ಪಂಚಾಯಿತಿ ಮೆಟ್ಟಿಲು ಬಳಿಯೇ ಬರುವ ಈ ಸಾರ್ವಜನಿಕ ಶೌಚಾಲಯದ ಶೌಚದ ಗುಂಡಿ ಮಲ ತುಂಬಿಕೊಂಡಿದ್ದು, ಅದನ್ನು ಸ್ವಚ್ಛತೆಗೊಳಿಸದೆ ಬಾಗಿಲು ಮುಚ್ಚಲಾಗಿದೆ. ಇದರಿಂದ ಶೌಚದ ಸುತ್ತಲೂ ಇರುವ ಕಸ, ಕಡ್ಡಿ, ಪ್ಲಾಸ್ಟಿಕ್ ಇನ್ನಿತರ ತ್ಯಾಜ್ಯಗಳಿಂದ ಸಂಗ್ರಹವಾಗಿ ಅನೈರ್ಮಲ್ಯ ವಾತಾವರಣ ನಿರ್ಮಾಣವಾಗಿ ಗಬ್ಬುನಾರಿ, ರೋಗ ರುಜಿನಿಗಳ ಆವಾಸಸ್ಥಾನವಾಗಿ ಮಾರ್ಪಟ್ಟಿದೆ.ಸ್ವಚ್ಛತೆಗೆ ಅಗ್ರಹ: ಪಟ್ಟಣದ ಸಾರ್ವಜನಿಕ ಶೌಚಾಲಯ ಹಾಗೂ ಪಟ್ಟಣ ಪಂಚಾಯತಿ ಸನಿಹದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡದಿರುವುದರಿಂದ ಪ್ಲಾಸ್ಟಿಕ್, ಕಸ, ಕಡ್ಡಿ ತ್ಯಾಜ್ಯಸಂಗ್ರಹವಾಗಿ ಕೊಳಚೆ ನೀರು ನಿಂತು ಗಬ್ಬುನಾರುತ್ತಿದೆ. ಇದು ಬಂದ್ ಆಗಿರುವುದರಿಂದ ದಿನನಿತ್ಯ ಪಟ್ಟಣಕ್ಕೆ ಸುತ್ತ ಮುತ್ತಲಿನ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಸಾರ್ವಜನಿಕರಿಗೆ ಶೌಚಕ್ಕೆ ತೀವ್ರ ತೊಂದರೆಯಾಗಿದ್ದು, ಕೂಡಲೇ ಸ್ವಚ್ಛಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಬಸವರಾಜು, ಮಾಜಿ ಉಪಾಧ್ಯಕ್ಷ, ಪಟ್ಟಣ ಪಂಚಾಯಿತಿ ಹನೂರು.