ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಧ್ಯರಂಗನ ಸನ್ನಿಧಿಗೆ ಆಗಮಿಸಿ ಅವರ ಅಮೃತ ಹಸ್ತದಿಂದ ಕಾರ್ಯಕ್ರಮ ಉದ್ಘಾಟಿಸಿ ಪೂಜಾ, ಕೈಂಕರ್ಯಗಳಲ್ಲಿ ಪಾಲ್ಗೊಂಡಿದ್ದು ಸಂತಸ ತಂದಿದೆ ಎಂದು ಶಾಸಕ ಎಂ.ಆರ್. ಮಂಜುನಾಥ್ ಹೇಳಿದರು.
ಸರ್ಕಾರ, ದಾನಿಗಳಿಂದ ಕೊನೆಗೂ ಜೀರ್ಣೋದ್ಧಾರ: ನಿಟ್ಟುಸಿರು
---ಕನ್ನಡಪ್ರಭ ವಾರ್ತೆ ಕೊಳ್ಳೇಗಾಲಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಧ್ಯರಂಗನ ಸನ್ನಿಧಿಗೆ ಆಗಮಿಸಿ ಅವರ ಅಮೃತ ಹಸ್ತದಿಂದ ಕಾರ್ಯಕ್ರಮ ಉದ್ಘಾಟಿಸಿ ಪೂಜಾ, ಕೈಂಕರ್ಯಗಳಲ್ಲಿ ಪಾಲ್ಗೊಂಡಿದ್ದು ಸಂತಸ ತಂದಿದೆ ಎಂದು ಶಾಸಕ ಎಂ.ಆರ್. ಮಂಜುನಾಥ್ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಮಧ್ಯರಂಗನ ದೇಗುಲ ಲೋಕಾರ್ಪಣೆ ಹೆಮ್ಮೆಯ ವಿಚಾರ. ಇತಿಹಾಸ ಪ್ರಸಿದ್ಧ ಮಧ್ಯರಂಗನಾಥಸ್ವಾಮಿ ದೇಗುಲ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು, ಇದಕ್ಕೆ ಸರ್ಕಾರ ಹಾಗೂ ದಾನಿಗಳು ಕೈಜೋಡಿಸಿದ್ದಾರೆ. ಅಂತೂ ದೇಗುಲ ಜೋರ್ಣೋದ್ಧಾರವಾಗಿದೆ. ಎಲ್ಲಾ ಪೂಜಾ ಕೈಂಕರ್ಯಗಳು ಸಾಂಗವಾಗಿ ಸಾಗಿವೆ ಎಂದು ಸಂತಸ ವ್ಯಕ್ತಪಡಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.