ಹರಕೆ ತೀರಿಸಿದ ಬೆಂ. ಗ್ರಾ. ಸಂಸದರ ಪತ್ನಿ

KannadaprabhaNewsNetwork | Published : Sep 5, 2024 12:30 AM

ಸಾರಾಂಶ

ಹರಕೆ ತೀರಿಸಿದ ಬೆಂ. ಗ್ರಾ. ಸಂಸದರ ಪತ್ನಿ

ಕನ್ನಡಪ್ರಭ ವಾರ್ತೆ ಕನಕಪುರ

ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣಾ ಸಮಯದಲ್ಲಿ ಚೀರಣಕುಪ್ಪೆ ಗ್ರಾಮದಲ್ಲಿ ನಮ್ಮ ಪಕ್ಷದ ನಾಯಕರುಗಳು ಗ್ರಾಮದ ಬೂತ್ ನಲ್ಲಿ ನಮ್ಮ ಪಕ್ಷ ಹೆಚ್ಚು ಮತಗಳಿಸಿದರೆ ಗ್ರಾಮದ ಬಸವೇಶ್ವರ ದೇವಸ್ಥಾನಕ್ಕೆ ಬಸವನನ್ನು ಬಿಡುವುದಾಗಿ ಹೊತ್ತಿದ್ದ ಹರಕೆಯನ್ನು ಇಂದು ತೀರಿಸಲು ಬಂದಿರುವುದಾಗಿ ಸಂಸದ ಮಂಜುನಾಥ್ ರವರ ಪತ್ನಿ ಅನುಸೂಯಮ್ಮ ತಿಳಿಸಿದರು.

ಗ್ರಾಮದ ಚೀರಣಕುಪ್ಪೆ ಗ್ರಾಮದ ಬಸವೇಶ್ವರ ದೇವಸ್ಥಾನ ಕ್ಕೆ ಆಗಮಿಸಿ ಬಸವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಮ್ಮ ಪಕ್ಷದ ಮುಖಂಡರು ಕಾರ್ಯಕರ್ತರ ನಂಬಿಕೆಯಂತೆ ಬಸವನಿಗೆ ಪೂಜೆ ಸಲ್ಲಿಸಿ ಕರುವನ್ನು ದೇವಸ್ಥಾನಕ್ಕೆ ಒಪ್ಪಿಸಿದ್ದೇವೆ.ಈ ಕಾರ್ಯಕ್ರಮಕ್ಕೆ ಸಂಸದ ಮಂಜುನಾಥ್ ರವರು ಬರಬೇಕಾಗಿತ್ತು ಕಾರಣಾಂತರಗಳಿಂದ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗದ ಕಾರಣ ಅವರ ಅನುಪಸ್ಥಿತಿಯಲ್ಲಿ ನನಗೆ ಅವಕಾಶ ನೀಡಿದಕ್ಕೆ ಧನ್ಯವಾದಗಳನ್ನು ತಿಳಿಸಿದರು.

ಬಹಳ ಹಿಂದಿನಿಂದಲೂ ಗ್ರಾಮಗಳಲ್ಲಿ ಸಾಂಕೇತಿಕವಾಗಿ ದೇವಸ್ಥಾನಗಳಿಗೆ ಬಸವಗಳನ್ನು ಗ್ರಾಮದ ಒಳಿತಿಗಾಗಿ ಬಿಡುವುದು ವಾಡಿಕೆಯಾಗಿದೆ. ಹಿಂದಿನ ಕಾಲದಲ್ಲಿ ಅವರ ಮನೆಯ ಸಂಪತ್ತನ್ನು ರಾಸುಗಳ ಮುಖಾಂತರ ಅಳೆ ಯುತ್ತಿದ್ದರು ಆದರೆ ಇಂದು ಆಧುನಿಕ ಜೀವನ ಶೈಲಿ ಯಿಂದ ನಿಜವಾದ ಜೀವನ ಕ್ರಮಗಳು ಬದಲಾಗಿವೆ ಎಂದರು.

ತಾಲೂಕು ಜೆಡಿಎಸ್ ಅಧ್ಯಕ್ಷ ಬಿ ನಾಗರಾಜು, ಜೆಡಿಎಸ್ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಚಿನ್ನಸ್ವಾಮಿ, ಕೊತ್ತನೂರು ನಾರಾಯಣ್, ಸ್ಟುಡಿಯೋ ಚಂದ್ರು, ನಲ್ಲಹಳ್ಳಿ ಶಿವಕುಮಾರ್, ತೊಪ್ಪಗನಹಳ್ಳಿ ಮಂಜುಕುಮಾರ್ ರಾಮಕೃಷ್ಣ, ಸಿದ್ದಮರಿಗೌಡ, ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ,ಉಪಾಧ್ಯಕ್ಷೆ ಪವಿತ್ರ, ಶಾಂತಾ ಬಿಜೆಪಿ ಪಕ್ಷದ ಗ್ರಾಮಾಂತರ ಮಂಡಲ ಅಧ್ಯಕ್ಷ ಕೊತ್ತನೂರು ಕುಮಾರ್, ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ್, ಮಂಜುನಾಥ್, ರಾಜೇಶ್,ಮಮತಾ ಹಾಗೂ ಮುಖಂಡರು, ಕಾರ್ಯಕರ್ತರು ಈ ವೇಳೆ ಹಾಜರಿದ್ದರು.

Share this article