ಹರಪನಹಳ್ಳಿ ತಾಲೂಕು ವಿಜಯನಗರ ಜಿಲ್ಲೆಯಲ್ಲಿ ಮೂರನೇ ಸ್ಥಾನ ಪಡೆದಿದೆ.
ಹರಪನಹಳ್ಳಿ: 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದೆ. ಶೇ.96.33 ಫಲಿತಾಂಶ ಪಡೆಯುವುದರ ಮೂಲಕ ಹರಪನಹಳ್ಳಿ ತಾಲೂಕು ವಿಜಯನಗರ ಜಿಲ್ಲೆಯಲ್ಲಿ ಮೂರನೇ ಸ್ಥಾನ ಪಡೆದಿದೆ.ಈ ಕುರಿತು ಮಾಹಿತಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಲೇಪಾಕ್ಷಪ್ಪ ಅವರು ಈ ಬಾರಿ ಪರೀಕ್ಷೆಗೆ ತಾಲೂಕಿನ ಸರ್ಕಾರಿ ಅನುದಾನಿತ, ಅನುದಾನ ರಹಿತ ಹಾಗೂ ವಸತಿ ಶಾಲೆಗಳಲ್ಲಿ 1761 ಬಾಲಕರು ಹಾಗೂ 2069ಬಾಲಕಿಯರು ಸೇರಿದಂತೆ ಒಟ್ಟು 3830 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 1675 ಬಾಲಕರು 2018 ಬಾಲಕಿಯರು ಸೇರಿ 3693 ಮಕ್ಕಳು ಉತ್ತೀರ್ಣ ರಾಗುವ ಮೂಲಕ ಶೇ.96.33ರಷ್ಟು ಫಲಿತಾಂಶ ಬಂದಿದೆ.
ಕೆಸಿಎ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪ್ರಾಂಜಲ ಬಿ. 625ಕ್ಕೆ 623 ಅಂಕ ಗಳಿಸುವ ಮೂಲಕ ವಿಜಯನಗರ ಜಿಲ್ಲಾ ಹಂತದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ದ್ವಿತೀಯ ಸ್ಥಾನವನ್ನು ಸುರಭಿ ವಿ.ಎಚ್. 621 ಅಂಕ ಪಡೆದಿದ್ದಾಳೆ. ಆದರ್ಶ ವಿದ್ಯಾಲಯದ ಜಯಶ್ರೀ ಎನ್.ಎಂ. ಹಾಗೂ ಅನುಪಮಾ ಬಿ.ಕೆ. ವಿ.ವಿ. ಎಸ್ ಪ್ರೌಢಶಾಲೆ ಹರಪನಹಳ್ಳಿ ಈ ವಿದ್ಯಾರ್ಥಿಗಳು ತಲಾ 620 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲಾ ಹಂತದ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.ತಾಲೂಕಿಗೆ ಪ್ರಥಮ -ಆದರ್ಶ ವಿದ್ಯಾಲಯ ಕೊಟ್ರೇಶ್ ಕೆ 615ಅಂಕಗಳನ್ನು ಪಡೆದುಕೊಂಡು ತಾಲೂಕ ಹಂತದಲ್ಲಿ ಪ್ರಥಮ ಸ್ಥಾನವನ್ನುಕೆಸಿಎ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಧನುಶ್ರೀ ಕೆ ಐ 614ಅಂಕಗಳು ಪಡೆದು ದ್ವಿತೀಯ ಸ್ಥಾನವನ್ನು,ಆದರ್ಶ ವಿದ್ಯಾಲಯದ ಪೂರ್ಣೀಮಾ ಟಿ.ಎಂ.613 ಅಂಕಗಳನ್ನು ಪಡೆದು ತೃತೀಯ ಸ್ಥಾನ ಗಳಿಸಿರುತ್ತಾರೆ.ಹರಪನಹಳ್ಳಿ ತಾಲೂಕಿನ25 ಸರ್ಕಾರಿ ಪ್ರೌಢ ಶಾಲೆಗಳು ಶೇಕಡಾ ಫಲಿತಾಂಶ 96.15 ರಷ್ಟು,19 ಅನುದಾನಿತ ಪ್ರೌಢ ಶಾಲೆಗಳು ಶೇಕಡ 96.59ರಷ್ಟು ಫಲಿತಾಂಶವನ್ನು ಪಡೆದಿವೆ.ತಾಲೂಕಿನ 15 ಅನುದಾನ ರಹಿತ ಪ್ರೌಢಶಾಲೆಗಳು ಶೇಕಡ 95.21ರಷ್ಟು ಫಲಿತಾಂಶವನ್ನು ದಾಖಲಿಸಿರುತ್ತವೆ.ಹರಪನಹಳ್ಳಿ ತಾಲೂಕು ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯಂತ ಉತ್ತಮವಾದಂತಹ ಪಲಿತಾಂಶವನ್ನು ಪಡೆಯಲು ಸಹಕರಿಸಿದಂತ ಎಲ್ಲಾ ಸರ್ಕಾರಿ , ಅನುದಾನಿತ ಹಾಗೂ ಅನುದಾನ ರಹಿತ ಪ್ರೌಢಶಾಲಾ ಮುಖ್ಯೋಪಾಧ್ಯಾಯರುಗಳು ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಬಿಇಒ ಲೇಪಾಕ್ಷಪ್ಪನವರುಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.