- ಸರ್ಕಾರಕ್ಕೆ ಸೋಷಲಿಸ್ಟ್ ಕಮ್ಯುನಿಸ್ಟ್ ಪಕ್ಷ ಮನವಿ
- - - ದಾವಣಗೆರೆ: ಮೈಕ್ರೋ ಫೈನಾನ್ಸ್‌ಗಳು, ಖಾಸಗಿ ಹಣಕಾಸು ಸಂಸ್ಥೆಗಳಿಂದ ರಾಜ್ಯದಲ್ಲಿ ಜನಜೀವನಕ್ಕೆ ತೀವ್ರ ಸಂಕಷ್ಟ ಎದುರಾಗುತ್ತಿದೆ. ಇಂತಹ ಹಣಕಾಸು ಸಂಸ್ಥೆಗಳ ಹಾವಳಿಗೆ ಕಡಿವಾಣ ಹಾಕಲು ಸರ್ಕಾರ ಶೀಘ್ರ ಮುಂದಾಗಲಿ ಎಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಸಮಿತಿ ಒತ್ತಾಯಿಸಿದೆ.ಖಾಸಗಿ ಹಣಕಾಸು ಸಂಸ್ಥೆಗಳ ಹಾವಳಿ ದಿನದಿನಕ್ಕೂ ಹೆಚ್ಚುತ್ತಿದೆ. ಸಂಸ್ಥೆಗಳ ಸಾಲ ವಸೂಲಿಗಾರರ ಕಿರುಕುಳ ತಾಳಲಾಗದೇ, ಚಾಮರಾಜ ನಗರ, ಮೈಸೂರು, ಹಾವೇರಿ, ಬೆಳಗಾವಿ ಹೀಗೆ ಅನೇಕ ಕಡೆ ಹತ್ತಾರು ಗ್ರಾಮಗಳ ನೂರಾರು ಮಂದಿ ಮನೆ, ಜಮೀನು ತೊರೆದು ನಾಪತ್ತೆಯಾಗಿದ್ದಾರೆ ಎಂದು ಟೀಕಿಸಲಾಗಿದೆ.
ಸಾಲ ಪಡೆದವರು ಸಕಾಲಕ್ಕೆ ಮರುಪಾವತಿ ಮಾಡುವುದು ತಡವಾದರೆ, ವಿಫಲವಾದರೆ ಅವರ ಮನೆಗಳ ಮುಂದೆ ನಿಲ್ಲುವುದು, ಅವಾಚ್ಯವಾಗಿ ನಿಂದಿಸುವುದು, ಮನೆಗಳ ಮೇಲೆ ಬರೆಯುವುದು, ಆಸ್ತಿ ಮುಟ್ಟುಗೋಲು ಮಾಡುತ್ತಿದ್ದಾರೆ. ಹಣಕಾಸು ಸಂಸ್ಥೆಗಳ ಕಿರುಕುಳ ನಿಯಂತ್ರಣಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಶೀಘ್ರ ಮಧ್ಯೆ ಪ್ರವೇಶಿಸಿ ಜನರ ರಕ್ಷಣೆಗೆ ಸೂಕ್ತ ಕಾನೂನು ರೂಪಿಸಬೇಕಿದೆ. ಸಾಲ ವಸೂಲಾತಿಗೆ ಮನೆಗೆ ಬಂದು ಕಿರುಕುಳ ಕೊಡುವುದನ್ನು ತಕ್ಷಣವೇ ತಡೆಗಟ್ಟಬೇಕು ಎಂದು ಒತ್ತಾಯಿಸಿದ್ದಾರೆ.ದುಬಾರಿ, ಮಿತಿಮೀರಿದ ಬಡ್ಡಿ ವಿಧಿಸುವ ಕಂಪನಿಗಳನ್ನು ಪತ್ತೆಹಚ್ಚಿ ಶಿಕ್ಷೆ ವಿಧಿಸಬೇಕು. ಮೈಕ್ರೋ ಫೈನಾನ್ಸ್ ಗಳ ವ್ಯವಹಾರದ ನಿಯಂತ್ರಣಕ್ಕೆ ಸೂಕ್ತ ಕಾಯಿದೆ ರೂಪಿಸಬೇಕು. ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಸಹಕಾರಿ ಸಂಸ್ಥೆಗಳು ಬಡ- ಮಧ್ಯಮ ವರ್ಗದವರಿಗೆ ಸಾಲ ಪಡೆಯಲು ಸಾಧ್ಯವಾಗುವಂತೆ ನಿಯಮ ಸರಳೀಕೃತಗೊಳಿಸಬೇಕು ಎಂದು ಎಸ್‌ಯುಸಿಐಸಿ ರಾಜ್ಯ ಕಾರ್ಯದರ್ಶಿ ಕೆ.ಉಮಾ, ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಕೈದಾಳೆ ಒತ್ತಾಯಿಸಿದ್ದಾರೆ.
- - - -(ಸಾಂದರ್ಭಿಕ ಚಿತ್ರ):