ನಮ್ಮ ಕಾರ್ಯಕರ್ತರಿಗೆ ಕಿರುಕುಳ ಕೊಟ್ಟರೆ ಸುಮ್ಮನಿರಲ್ಲ: ರೇವಣ್ಣ

KannadaprabhaNewsNetwork |  
Published : Feb 12, 2025, 12:32 AM IST
ರೇವಣ್ಣ | Kannada Prabha

ಸಾರಾಂಶ

ದೇವೇಗೌಡರು, ರೇವಣ್ಣ ಅವರದ್ದು ಮುಗಿದೆ ಹೋಯಿತು ಅಂತ ತಿಳ್ಕೊಂಡಿದ್ದರೆ ಅದು ಕನಸು. ಯಾರಿಗೂ ಹೆದರಬೇಕಿಲ್ಲ ಧೈರ್ಯವಾಗಿರಿ, ಇಲ್ಲಿ ನ್ಯಾಯವಾಗಿ ಇರಬೇಕು. ಓಟು ಯಾರಿಗಾದರೂ ಹಾಕಿಕೊಳ್ಳಿ ನನಗೆ ಸಂಬಂಧವಿಲ್ಲ. ಊರು ನೆಮ್ಮದಿಯಾಗಿರಬೇಕು ಅಷ್. ಯಾರಾದರೂ ನಮ್ಮ ಕಾರ್ಯಕರ್ತರಿಗೆ ನೋವು ಕೊಟ್ಟರೆ ಬೇರೆ ತರ ಆಗುತ್ತೆ ಎಂದು ಸಂಸದರ ಹೆಸರೇಳದೇ ಪರೋಕ್ಷವಾಗಿ ಶಾಸಕ ಎಚ್.ಡಿ.ರೇವಣ್ಣ ಗುಡುಗಿದರು.

ಹಾಸನ: ದೇವೇಗೌಡರು, ರೇವಣ್ಣ ಅವರದ್ದು ಮುಗಿದೆ ಹೋಯಿತು ಅಂತ ತಿಳ್ಕೊಂಡಿದ್ದರೆ ಅದು ಕನಸು. ಯಾರಿಗೂ ಹೆದರಬೇಕಿಲ್ಲ ಧೈರ್ಯವಾಗಿರಿ, ಇಲ್ಲಿ ನ್ಯಾಯವಾಗಿ ಇರಬೇಕು. ಓಟು ಯಾರಿಗಾದರೂ ಹಾಕಿಕೊಳ್ಳಿ ನನಗೆ ಸಂಬಂಧವಿಲ್ಲ. ಊರು ನೆಮ್ಮದಿಯಾಗಿರಬೇಕು ಅಷ್. ಯಾರಾದರೂ ನಮ್ಮ ಕಾರ್ಯಕರ್ತರಿಗೆ ನೋವು ಕೊಟ್ಟರೆ ಬೇರೆ ತರ ಆಗುತ್ತೆ ಎಂದು ಸಂಸದರ ಹೆಸರೇಳದೇ ಪರೋಕ್ಷವಾಗಿ ಶಾಸಕ ಎಚ್.ಡಿ.ರೇವಣ್ಣ ಗುಡುಗಿದರು.ತಾಲೂಕಿನ ಮಾವಿನಕೆರೆ ಗ್ರಾಮದಲ್ಲಿ ಶ್ರೀ ಲಕ್ಷ್ಮೀವೆಂಕಟೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಜೆಡಿಎಸ್ ಕಾರ್ಯಕರ್ತರು ಆಯೋಜಿಸಿದ್ದ ಆರ್ಕೆಸ್ಟ್ರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನಾನು ಶಾಸಕನಾಗಿ ಮೂವತ್ತು ವರ್ಷ ಆಯ್ತು, ಕ್ಷೇತ್ರದ ಗ್ರಾಮೀಣ ಪ್ರದೇಶದಲ್ಲಿ ದೇವೇಗೌಡರು ಹಾಗೂ ಅವರ ಮಾರ್ಗದರ್ಶದಲ್ಲಿ ನಾನು ಮಾಡಿದ ಕೆಲಸಗಳು ಎಲ್ಲರಿಗೂ ಕಾಣುತ್ತೆ, ಉದಾಹರಣೆಗೆ ಕಾಮಸಮುದ್ರಕ್ಕೆ ಎಷ್ಟು ಮನೆ ಕಟ್ಟುಸ್ದೆ, ತಾಲೂಕಿನಲ್ಲಿ ಸುಮಾರು ಮುನ್ನೂರರಿಂದ ನಾಲ್ಕನೂರು ದೇವಸ್ಥಾನ ಕಟ್ಟಿಸಿದೆ ಎಂದರು.

ನಮ್ಮ ರಕ್ಷಣಾ ಇಲಾಖೆಯವರಿಗೆ ಹೇಳುವುದು ಇಷ್ಟೆ. ಯಾವ ಪಾರ್ಟಿಯಾವರಾಗಲಿ ಊರು ನೆಮ್ಮದಿಯಾಗಿ ಇಡಿ. ಚುನಾವಣೆಯಲ್ಲಿ ನನ್ನ ಹಣೆ ಮೇಲೆ ಏನು ಬರೆದಿರುತ್ತೆ ಯಾರು ತಪ್ಪಿಸಲು ಆಗಲ್ಲ. ಇವತ್ತು ನನ್ನ ರಾಜಕೀಯ ಮುಗಿದೆ ಹೋಯಿತು ಎಂದು ತಿಳಿದುಕೊಂಡಿದ್ದಾರೆ. ಯಾರು ಹೆಂಗೆ ಅಂತ ನನಗೆ ಗೊತ್ತಿದೆ. ಈ ಊರಿಗೆ ಯಾರಾದರೂ ಹತ್ತು ರು.ಕೆಲಸ ಮಾಡಿದ್ರೆ ರಾಜಕೀಯ ಬಿಟ್ಟು ಹೋಗುತ್ತೇನೆ. ರಾಜಕಾರಣ ಒಂದು ಕಡೆ ಬಿಟ್ಟಾಕಿ ಜತೆಗೆ ಊರು ನೆಮ್ಮದಿಯಾಗಿ ಇಟ್ಕಳಿ ಮತ್ತು ಉಳಿದಿದ್ದು ನಮಗೆ ಬಿಡಿ, ನಾನು ಕೆಲಸ ಮಾಡ್ತಿನಿ. ಶ್ರೀ ರಂಗನಾಥಸ್ವಾಮಿ ಹಾಗೂ ಶ್ರೀ ಲಕ್ಷೀವೆಂಕಟರಮಸ್ವಾಮಿ ನಂಬಿದವರು ಯಾರೂ ಕೆಟ್ಟಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹಳೇಕೋಟೆ ಗ್ರಾಪಂ ಅಧ್ಯಕ್ಷ ಸೂರಿ ಕುಮಾರ್, ತಹಸೀಲ್ದಾರ್ ಎಲ್.ಎಸ್.ರಮೇಶ್, ಉಪ ತಹಸೀಲ್ದಾರ್ ಕಿರಣ್, ಡಿವೈಎಸ್ಪಿ ಶಾಲು, ವೃತ್ತ ನಿರೀಕ್ಷಕ ಮೋಹನಕೃಷ್ಣ, ಪಿಎಸ್ಸೈಗಳಾದ ಅರುಣ್‌ಕುಮಾರ್, ವಿನಯ್‌ಕುಮಾರ್, ಅಭಿಜಿತ್, ರಮೇಶ್, ರಜಸ್ವ ನಿರೀಕ್ಷಕ ಯೋಗಾನಂದ, ಗ್ರಾಮ ಲೆಕ್ಕಾಧಿಕಾರಿಗಳಾದ ಗುರುಮೂರ್ತಿ, ಹರೀಶ್ ಬಣಕರ್, ಜಯರಾಮ್ ಕೆ.ಆರ್., ಹೇಮಾ, ಗ್ರಾ.ಪಂ. ಮಾಜಿ ಸದಸ್ಯ ಶೆಟ್ಟಿಗೌಡ, ಗ್ರಾಮದ ಹಿರಿಯರಾದ ಸುಬ್ಬರಾಜು, ಜೈಪ್ರಕಾಶ್ ಎಂ.ಎನ್., ಅಶೋಕ, ಸೀತರಾಮು, ಸೋಮಶೇಖರ, ಮಧು, ವಸಂತಕುಮಾರ್, ರಮೇಶ್, ಚಂದ್ರು, ಚಂದ್ರಶೇಖರ್, ಇತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ