ಕಠಿಣ ಪರಿಶ್ರಮಕ್ಕೆ ಪ್ರತಿಫಲ ಖಚಿತ: ಅರ್ಪಿತ್ ಜಗದೀಶ್ ಕಬ್ರಾ

KannadaprabhaNewsNetwork |  
Published : Jun 16, 2026, 02:45 AM IST
15ಸಿಎ | Kannada Prabha

ಸಾರಾಂಶ

ಐಸಿಎಐನ ಬೋರ್ಡ್ ಆಫ್ ಸ್ಟಡೀಸ್ ಸಹಯೋಗದಲ್ಲಿ ಐಸಿಎಐ ಉಡುಪಿ ಶಾಖೆ (ಸಿಐಆರ್‌ಸಿ) ಹಾಗೂ ಐಸಿಎಐ ಉಡುಪಿ ಶಾಖೆಯ ಸಿಕಾಸಾ (ಸಿಐಸಿಎಎಸ್‌ಎ) ವತಿಯಿಂದ, ಸಿಎ ವಿದ್ಯಾರ್ಥಿಗಳಿಗಾಗಿ ಎರಡು ದಿನಗಳ ರಾಜ್ಯ ಮಟ್ಟದ ಸಮ್ಮೇಳನ “ಯುಕ್ತಾ 2026 – Integrated Minds | Infinite Possibilities”ವನ್ನು ಜೂ. 12, 13ರಂದು ಉಡುಪಿಯ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ಯಶಸ್ವಿಯಾಗಿ ಜರುಗಿತು.

ಉಡುಪಿ: ಐಸಿಎಐನ ಬೋರ್ಡ್ ಆಫ್ ಸ್ಟಡೀಸ್ ಸಹಯೋಗದಲ್ಲಿ ಐಸಿಎಐ ಉಡುಪಿ ಶಾಖೆ (ಸಿಐಆರ್‌ಸಿ) ಹಾಗೂ ಐಸಿಎಐ ಉಡುಪಿ ಶಾಖೆಯ ಸಿಕಾಸಾ (ಸಿಐಸಿಎಎಸ್‌ಎ) ವತಿಯಿಂದ, ಸಿಎ ವಿದ್ಯಾರ್ಥಿಗಳಿಗಾಗಿ ಎರಡು ದಿನಗಳ ರಾಜ್ಯ ಮಟ್ಟದ ಸಮ್ಮೇಳನ “ಯುಕ್ತಾ 2026 – Integrated Minds | Infinite Possibilities”ವನ್ನು ಜೂ. 12, 13ರಂದು ಉಡುಪಿಯ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ಯಶಸ್ವಿಯಾಗಿ ಜರುಗಿತು. ಈ ಸಮ್ಮೇಳನದ ಮುಖ್ಯ ಅತಿಥಿಯಾಗಿದ್ದ ಐಸಿಎಐ ಕೇಂದ್ರ ಸಮಿತಿ ಸದಸ್ಯರಾದ ಸಿಎ ಅರ್ಪಿತ್ ಜಗದೀಶ್ ಕಬ್ರಾ ಉದ್ಘಾಟಿಸಿದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಶ್ರದ್ದೆ, ಕಠಿಣ ಪರಿಶ್ರಮದೊಂದಿಗೆ ಸಿಎ ವ್ಯಾಸಂಗ ಮಾಡಿ. ಸಾಧನೆಗೆ ಪ್ರತಿಫಲ ಖಂಡಿತ ದೊರೆಯುತ್ತದೆ. ಭಾರತದಲ್ಲಿ ಲೆಕ್ಕಪರಿಶೋಧಕರಿಗೆ ಉತ್ತಮ ಬೇಡಿಕೆ ಇದೆ. ವೃತ್ತಿಪರ ಬೆಳವಣಿಗೆ ಹಾಗೂ ಭವಿಷ್ಯದ ಅವಕಾಶಗಳು ಬಹಳಷ್ಟು ಇವೆ. ಹಿರಿಯರ ಮಾರ್ಗದರ್ಶನದಲ್ಲಿ ತರಬೇತಿ ಪಡೆದು ಉತ್ತಮ ಸಿಎಗಳಾಗಿ ರೂಪುಗೊಳ್ಳಿ ಎಂದು ಶುಭ ಹಾರೈಸಿದರು.

ಐಸಿಎಐ ಉಡುಪಿ ಶಾಖೆಯ ಅಧ್ಯಕ್ಷರಾದ ಸಿಎ ಎಂ. ರಾಘವೇಂದ್ರ ಮೊಗೆರಾಯ ಸ್ವಾಗತಿಸಿದರು. ಸಂಸ್ಥೆ ವತಿಯಿಂದ ಮುಖ್ಯ ಅತಿಥಿಯಾದ ಸಿಎ ಅರ್ಪಿತ್ ಜಗದೀಶ್ ಕಬ್ರಾ ಅವರನ್ನು ಗೌರವಿಸಲಾಯಿತು.

ಉಪಾಧ್ಯಕ್ಷರಾದ ಸಿಎ ಅಶ್ವತ್ ಜೆ. ಶೆಟ್ಟಿ, ಖಜಾಂಚಿ ಸಿಎ ಅರ್ಚನಾ ಆರ್. ಮೈಯ್ಯ, ಕಾರ್ಯದರ್ಶಿ ಸಿಎ ಕೆ. ಲಕ್ಷ್ಮೀಶ ರಾವ್, ಸಿಕಾಸಾ ಅಧ್ಯಕ್ಷ ಸಿಎ ಸೋನಿತ್ ಎಸ್. ಶೆಟ್ಟಿ, ಶಾಖೆಯ ಮಾಜಿ ಅಧ್ಯಕ್ಷರು, ಸದಸ್ಯರು ಹಾಗೂ ನೂರಾರು ಸಿಎ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಂಸಿಸಿ ಬ್ಯಾಂಕ್‌: ವಾರ್ಷಿಕ ಕಾರ್ಯಕ್ಷಮತೆ ಪರಿಶೀಲನೆ, ಪ್ರಶಸ್ತಿ ಪ್ರದಾನ
ನ್ಯಾಯದಾನಕ್ಕೆ ಮುಕ್ತ ವಾತಾವರಣ ಅಗತ್ಯ: ನ್ಯಾ. ನರೇಂದ್ರ ಪ್ರಸಾದ್