ಕನ್ನಡಪ್ರಭವಾರ್ತೆ ಚಿತ್ರದುರ್ಗ
ಹರಿದಾಸ ಹಬ್ಬದಲ್ಲಿ ಪಾರಾಯಣ, ಭಜನೆ, ಉಪನ್ಯಾಸ, ಪವನ-ಹೋಮ ಶ್ರೀರಾಮಡೋಲೋತ್ಸವ ಆರ್ಶೀವಚನ, ದಾಸ ಲಹರಿ ಶ್ರೀ ರಾಮನ ಸ್ತುತಿ, ಸ್ತೋತ್ರ, ಪ್ರವಚನ, ಭವ್ಯ ಶೋಭಾಯಾತ್ರೆ, ಶ್ರೀರಾಮತಾರಕ ಹೋಮ ಕಾರ್ಯಕ್ರಮಗಳು ನಡೆಯಲಿದೆ. ಕಾರ್ಯಕ್ರಮದ ಸಾನಿಧ್ಯವನ್ನು ಭೀಮನಕಟ್ಟೆಯ ಶ್ರೀ ಭೀಮಸೇತು ಮುನಿವೃಂದ ಮಠದ ಶ್ರೀ ರಘುವರೇಂದ್ರತೀರ್ಥ ಶ್ರೀಗಳು ವಹಿಸಲಿದ್ದಾರೆ.
ಜ.20ರ ಸಂಜೆ 6.30ಕ್ಕೆಮ ವಾಸವಿ ಶಾಲಾ ಆವರಣದಲ್ಲಿ ಹರಿದಾಸ ಹಬ್ಬದ ಉದ್ಘಾಟನೆ ನಡೆಯಲಿದ್ದು, ಬೆಂಗಳೂರಿನ ರೀ ಪೂರ್ಣಪ್ರಜ್ಞ ವಿದ್ಯಾ ಪೀಠದ ಅಧ್ಯಾಪಕ ಕೃಷ್ಣರಾಜ ಕುತ್ವಾಡಿ ಉಪನ್ಯಾಸ ನೀಡಲಿದ್ದಾರೆ. ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ಎಸ್. ಮಂಜುನಾಥ್, ಶ್ರೀ ರಾಘವೇಂದ್ರಸ್ವಾಮಿ ಮಠದ ವ್ಯವಸ್ಥಾಪಕ ಪ್ರಾಣೇಶಾಚಾರ್ಯ, ಉತ್ತರಾಧಿ ಮಠದ ವ್ಯವಸ್ಥಾಪಕ ಉಪಾಧ್ಯ ಪ್ರಭಂಜನಾಚಾರ್ಯ ಕೂಸಸೂರು, ನಗರಸಭೆ ಸದಸ್ಯ ಹರೀಶ್, ಬಡಗನಾಡು ಬ್ರಾಹ್ಮಣ ಸಂಘದ ಅಧ್ಯಕ್ಷ ಶೇಷಗಿರಿ ರಾವ್, ಗುರುರಾಜ ಸೇವಾ ಸಂಘದ ಅಧ್ಯಕ್ಷ ವೇದವ್ಯಾಸಚಾರ್ಯ, ವೃಷ್ಣವ ಸಭಾದ ಅಧ್ಯಕ್ಷ ಜಗದೀಶ್ ಭಾಗವಹಿಸಲಿದ್ದಾರೆ.ಪ್ರತಿ ದಿನ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಬೆಳಿಗ್ಗೆ 8 ರಿಂದ ಮಹಾಭಾರತ ತಾತ್ಪರ್ಯ ನಿರ್ಣಯಗಳ ಬಗ್ಗೆ ಪಾಠ-ಪ್ರವಚನ 9ರಿಂದ ಶ್ರೀಗಳು ಗೃಹ ಭೇಟಿ ಪಾದಪೂಜಾ ಕಾರ್ಯಕ್ರಮ, 10.30ರಿಂದ ಸಂಸ್ಥಾನ ಪೂಜೆ ನಡೆಯಲಿದೆ. ಇದ ರೊಂದಿಗೆ ಪ್ರತಿ ದಿನ ಸಂಜೆ ವಾಸವಿ ಶಾಲೆಯ ಆವರಣದಲ್ಲಿ ಸಂಜೆ 6ರಿಂದ ಸಾಮೂಹಿಕ ವಿಷ್ಣು ಸಹಸ್ರನಾಮ ಸ್ತೋತ್ರ ಪಾರಾಯಣ, 6.30ರಿಂದ ಶ್ರೀ ರಾಮನಾಮ ಭಜನೆ ಸಂಕೀರ್ತನೆ 7ರಿಂದ ಅಯೋಧ ರಾಮನ ಬಗ್ಗೆ ಉಪನ್ಯಾಸ ನಡೆಯಲಿದ್ದು, 8 ರಿಂದ ಶ್ರೀಪಾದಂಗಳವರ ಅನುಗ್ರಹ ಅಮೃತವಾಣಿ ನಡೆಯಲಿದೆ.
ಜ.27ರ ಶನಿವಾರ ಬೆಳ್ಳಿಗೆ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಶ್ರೀ ವಾಯುಸ್ತುತಿ ಪುನಃಶ್ಚರಣ ಹೋಮ, ಬೆಳಿಗ್ಗೆ 5.30ಕ್ಕೆ ಪುಣ್ಯಾಹ, ಕಳಶ ಸ್ಥಾಪನೆ, ಹೋಮ 9.15ಕ್ಕೆ ಪೂರ್ಣಾಹುತಿ ಕಾರ್ಯಕ್ರಮ ನಡೆಯಲಿದೆ. ಸಂಜೆ 6 ಕ್ಕೆ ವಾಸವಿ ವಿದ್ಯಾಸಂಸ್ಥೆಯ ಆವರಣದಲ್ಲಿ ಶ್ರೀರಾಮ ಸಂಕೀರ್ತನ ಶ್ರೀ ಬೃಂದಾವನ ಭಜನಾ ಮಂಡಲಿಯವರಿಂದ ಸಂಜೆ 6.30ಕ್ಕೆ 2024ರ ಹರಿದಾಸ ಹಬ್ಬದ ಸಮಾರೋಪ ಸಮಾರಂಭ ನಡೆಯಲಿದ್ದು, ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಆಶೋಕ ಹಾರನಹಳ್ಳಿ ಆಗಮಿಸಲಿದ್ದಾರೆ.