ಎಂ.ಎಲ್.ಸಿ. ಹರಿಪ್ರಸಾದ್ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ಮಾಡುವುದರಲ್ಲಿ ವಿಶೇಷ ಏನಿದೆ? ಅವರು ನಮ್ಮ ಪಕ್ಷದ ಹಿರಿಯ ನಾಯಕರು. ಅವರು ನಮ್ಮ ಮನೆಗೆ ಬರುತ್ತಾರೆ. ನಾನು ಪರಮೇಶ್ವರ್ ಮನೆಗೆ ಹೋಗ್ತೀನಿ. ಅದಕ್ಕೆ ರಾಜಕೀಯ ಕಲ್ಪಿಸುವ ಅವಶ್ಯಕತೆ ಇಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ ಹೇಳಿದರು. ಬದಲಾವಣೆ ಆಗುತ್ತಲೇ ಇರುತ್ತದೆ. ನಾನು ಮಂತ್ರಿ ಅಷ್ಟೇ. ಈ ಪ್ರಶ್ನೆನಾ ನಮ್ಮ ಹತ್ರ ಕೇಳಬಾರದು ಬೆಂಗಳೂರಿನಲ್ಲಿ ಕೇಳಿದರೇ ನಿಮ್ಮ ಉತ್ತರ ಅಲ್ಲಿ ಸಿಗುತ್ತದೆ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಹಾಸನ
ಎಂ.ಎಲ್.ಸಿ. ಹರಿಪ್ರಸಾದ್ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ಮಾಡುವುದರಲ್ಲಿ ವಿಶೇಷ ಏನಿದೆ? ಅವರು ನಮ್ಮ ಪಕ್ಷದ ಹಿರಿಯ ನಾಯಕರು. ಅವರು ನಮ್ಮ ಮನೆಗೆ ಬರುತ್ತಾರೆ. ನಾನು ಪರಮೇಶ್ವರ್ ಮನೆಗೆ ಹೋಗ್ತೀನಿ. ಅದಕ್ಕೆ ರಾಜಕೀಯ ಕಲ್ಪಿಸುವ ಅವಶ್ಯಕತೆ ಇಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿ, ಎಂ.ಎಲ್.ಸಿ. ಹರಿಪ್ರಸಾದ್ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿ, ರಾಜಕೀಯದಲ್ಲಿ ಯಾರೂ ಶತ್ರು ಅಲ್ಲ, ಮಿತ್ರನೂ ಅಲ್ಲ ಅನ್ನುವ ಹಾಗೇ ಇದು. ರಾಜಕಾರಣ ಯಾವಾಗಲೂ ಒಂದೇ ಥರ ಇರಲ್ಲ. ಬದಲಾವಣೆ ಆಗುತ್ತಲೇ ಇರುತ್ತದೆ. ನಾನು ಮಂತ್ರಿ ಅಷ್ಟೇ. ಈ ಪ್ರಶ್ನೆನಾ ನಮ್ಮ ಹತ್ರ ಕೇಳಬಾರದು ಬೆಂಗಳೂರಿನಲ್ಲಿ ಕೇಳಿದರೇ ನಿಮ್ಮ ಉತ್ತರ ಅಲ್ಲಿ ಸಿಗುತ್ತದೆ ಎಂದು ಹೇಳಿದರು. ಕನ್ನಡ ಭಾಷೆ ಬಗ್ಗೆ ನಟ ಕಮಲಹಸನ್ ಹೇಳಿಕೆ ವಿಚಾರವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಈಗಾಗಲೇ ಬಹಳಷ್ಟು ಜನ ಹೇಳಿಕೆ ಕೊಟ್ಟಿದ್ದಾರೆ. ಅವರು ಅದಕ್ಕೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಅದರ ಬಗ್ಗೆ ನಾನು ಏನು ಹೇಳಲು ಆಗುವುದಿಲ್ಲ ಎಂದು ಹೇಳಿದರು.
ಮಳೆ ಬಂದು ಇಲ್ಲಿ ಸಮಸ್ಯೆ ಆಗಿದ್ದರೂ ಸರಕಾರಕ್ಕೆ ಮಳೆ ಬಂದಿರುವುದೇ ಗೊತ್ತಿಲ್ಲ, ಸಚಿವರು ಭೇಟಿ ಮಾಡಿಲ್ಲ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿಕೆ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ದೊಡ್ಡ ಇಲಾಖೆಯಿದೆ. ಶಿರಾಢಿಘಾಟ್ನಲ್ಲಿ ದೊಡ್ಡ ಅನಾಹುತ ಏನು ಆಗಿರುವುದಿಲ್ಲ. ಆದರೂ ಕೂಡ ಇಲಾಖೆ ಅಧಿಕಾರಿಗಳು ವೀಕ್ಷಣೆ ಮಾಡಿದ್ದು, ಸಣ್ಣ ಪ್ರಮಾಣದಲ್ಲಿ ನಷ್ಟವಾಗಿದೆ. ನಾವು ಕೂಡ ಭೇಟಿ ಮಾಡುತ್ತಿದ್ದೇವೆ. ಯಾವುದೇ ಆರೋಪ ಮಾಡಿದರೇ ಯಾವ ಪ್ರಯೋಜನವಿಲ್ಲ ಎಂದು ತಿಳಿಸಿದರು.
ಹಿರಿಯ ಸಾಹಿತಿ ಬಾನು ಮುಷ್ತಾಕ್ ಅವರಿಗೆ ಬೂಕರ್ ಪ್ರಶಸ್ತಿ ಸಿಕ್ಕಿರುವುದು ನಮಗೆ ಹೆಮ್ಮೆಯ ವಿಷಯ. ಸರ್ಕಾರ ಅವರಿಗೆ ಗೌರವ ಕೊಡುವ ಬಗ್ಗೆ ಚಿಂತನೆ ಮಾಡುತ್ತಿದೆ ಎಂದರು.
ಇದೇ ವೇಳೆ ಸಂಸದ ಶ್ರೇಯಸ್ ಎಂ. ಪಟೇಲ್, ಶಾಸಕ ಕೆ.ಎಂ. ಶಿವಲಿಂಗೇಗೌಡ, ಹೆಚ್.ಕೆ. ಸುರೇಶ್, ಸಿಮೆಂಟ್ ಮಂಜು ಇತರರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.