ಬೊಳ್ತಜೀರ ನೂತನ ಐನ್ ಮನೆಯಲ್ಲಿ ಹರಿಸೇವೆ, ದೈವ ಕೋಲ

KannadaprabhaNewsNetwork |  
Published : Apr 21, 2025, 12:56 AM IST
ಕಾಂತೂರು ಗ್ರಾಮದ ಬೊಳ್ತಜೀರ ನೂತನ ಐನ್ ಮನೆಯಲ್ಲಿ ಆಯೋಜಿಸಿದ ದೈವ ಕೋಲ. | Kannada Prabha

ಸಾರಾಂಶ

ಬೊಳ್ತಜೀರ ನೂತನ ಐನ್‌ಮನೆಯಲ್ಲಿ ಶ್ರೀ ವೆಂಕಟರಮಣ ದೇವರ ಹರಿಸೇವೆ ಹಾಗೂ ದೈವಗಳ ಕೋಲ ಶ್ರದ್ಧಾ ಭಕ್ತಿಯಿಂದ ಜರುಗಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿಗೆ ಸಮೀಪದ ಮೂರ್ನಾಡು ಗ್ರಾಮ ಪಂಚಾಯಿತಿಯ ಕಾಂತೂರು ಗ್ರಾಮದ ಬೊಳ್ತಜೀರ ನೂತನ ಐನ್ ಮನೆಯಲ್ಲಿ ಆಯೋಜಿಸಿದ ಶ್ರೀ ವೆಂಕಟರಮಣ ದೇವರ ಹರಿಸೇವೆ ಹಾಗೂ ದೈವಗಳ ಕೋಲ ಶ್ರದ್ಧಾ ಭಕ್ತಿಯಿಂದ ಜರುಗಿತು.

ಐದು ವರ್ಷಕ್ಕೆ ಒಮ್ಮೆ ಜರುಗುವ ಹರಿಸೇವೆಯಲ್ಲಿ ಭಕ್ತಾದಿಗಳು 15 ಹರಕೆ ಸೇವೆಯನ್ನು ನೆರವೇರಿಸಿಕೊಟ್ಟರು. ಬಳಿಕ ವಂಶಪರಂಪರೆಯಿಂದ ನಡೆಸಿಕೊಂಡು ಬರುತ್ತಿರುವ ಕೊರತ್ತಿ, ಪೊಟ್ಟ ದೈವ, ಗುಳಿಗ, ಅಂಗರೆ, ಚೌಂಡಿ ದೈವ ಕೋಲಗಳು ಭಯ ಭಕ್ತಿಗಳಿಂದ ಸಾಂಪ್ರದಾಯಿಕವಾಗಿ ನೆರವೇರಿತು. ಈ ಸಂದರ್ಭ ನೆರದ ಭಕ್ತಾದಿಗಳು ವಿವಿಧ ಹರಕೆ ಕಾಣಿಕೆಗಳನ್ನು ಒಪ್ಪಿಸಿ ಪ್ರಸಾದ ಸ್ವೀಕರಿಸುವುದರೊಂದಿಗೆ ಪುನೀತ ಬಾವ ಹೊಂದಿದರು.

ಕಾರ್ಯಕ್ರಮ ಮುಖ್ಯಸ್ಥರಾದ ಸಿದ್ದಾರ್ಥ (ನಂದ) ಅವರ ಮಂದಾಳತ್ವದಲ್ಲಿ ಎಲ್ಲರ ಸಹಕಾರದೊಂದಿಗೆ ವಿಜೃಂಭಣೆಯಿಂದ ನೆರವೇರಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟ್ಯೂಷನ್‌ ಹೋಗದ್ದಕ್ಕೆ ಬೈದರೆಂದುಮನೆ ಬಿಟ್ಟು ಹೋಗಿದ್ದ ಮಕ್ಕಳ ರಕ್ಷಣೆ
ಗೀತರಚನೆ ಕಲಿಸಲು ಕಾರ್ಯಾಗಾರ ಮಾಡಿ ಉಪಯೋಗ ಇಲ್ಲ: ಕಾಯ್ಕಿಣಿ