ಕನ್ನಡಪ್ರಭ ವಾರ್ತೆ ಮಡಿಕೇರಿ
ಮಡಿಕೇರಿ ರೋಟರಿ ಸಭಾಂಗಣದಲ್ಲಿ ರೋಟರಿ ಮಡಿಕೇರಿ ವುಡ್ಸ್ ನ ನೂತನ ಅಧ್ಯಕ್ಷರಾಗಿ ಹರೀಶ್ ಕಿಗ್ಗಾಲು ಮತ್ತು ಕಾರ್ಯದರ್ಶಿಯಾಗಿ ಕಿರಣ್ ಕುಂದರ್ ಹಾಗೂ ತಂಡದ ಪದಗ್ರಹಣ ನೆರವೇರಿಸಿ ಅವರು ಮಾತನಾಡಿದರು.
ಸರಿಯಾದ ವೇದಿಕೆಗಳು ದೊರಕದೇ ಇದ್ದಾಗ ಅಸಾಮಾನ್ಯ ವ್ಯಕ್ತಿ ಕೂಡ ಸಾಮಾನ್ಯನಾಗಿ ಬಿಡುತ್ತಾನೆ. ರೋಟರಿಯಂಥ ನಾಯಕತ್ವ ಬೆಳೆಸುವ ಸಂಸ್ಥೆಗಳು ಅಸಮಾನ್ಯ ವ್ಯಕ್ತಿತ್ವದವರೊಂದಿಗೆ ಸಾಮಾನ್ಯನನ್ನೂ ಅಸಮಾನ್ಯ ವ್ಯಕ್ತಿತ್ವದ ನಾಯಕನನ್ನಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಹೀಗಾಗಿ ರೋಟರಿಯಂಥ ಸೇವಾ ಸಂಸ್ಥೆಗಳಲ್ಲಿ ಸೇರ್ಪಡೆಯಾಗಿ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಟಿ 20 ವಿಶ್ವಕಪ್ ನಲ್ಲಿ ಭಾರತ ತಂಡ ಹೇಗೆ ಎಲ್ಲ ಆಟಗಾರರ ಸಾಮರ್ಥ್ಯ ಬಳಸಿಕೊಂಡು ಗೆಲುವಿನ ಜಯಭೇರಿ ಕಂಡಿದೆಯೋ ಅಂತೆಯೇ ರೋಟರಿ ಸಂಸ್ಥೆ ಕೂಡ ತನ್ನಲ್ಲಿನ ಎಲ್ಲ ಸದಸ್ಯರ ಪ್ರತಿಭೆಯನ್ನು ಬಳಸಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡುವಂತಾಗಬೇಕು ಎಂದು ಕೇಶವ್ ಆಶಿಸಿದರು.
ಈ ರೋಟರಿ ವರ್ಷದ ಸಂದೇಶವಾದ ಮ್ಯಾಜಿಕ್ ಆಫ್ ರೋಟರಿ ಮೂಲಕ ರೋಟರಿಯ ಸೇವಾ ಕಾರ್ಯಗಳು ಜನರ ಜೀವನದಲ್ಲಿ ಉಂಟು ಮಾಡುತ್ತಿರುವ ಮ್ಯಾಜಿಕ್ ನಂಥ ಅದ್ಭುತವನ್ನು ಜನರಿಗೆ ತಲುಪಿಸಬೇಕೆಂದೂ ಕೇಶವ್ ನುಡಿದರು. ಸಮಾಜದ ವಿವಿಧ ವರ್ಗಗಳ ಜನರಿಗೆ, ಅಗತ್ಯವುಳ್ಳವರಿಗೆ ರೋಟರಿಯು 119 ವರ್ಷಗಳಿಂದ ನಿರಂತರವಾಗಿ ಸಲ್ಲಿಸುತ್ತಿರುವ ಸೇವೆ, ಕೊಡುಗೆಗಳನ್ನು ತಿಳಿಸುತ್ತಲೇ, ಹೊಸ ಸದಸ್ಯರನ್ನು ರೋಟರಿಗೆ ಸೇರ್ಪಡೆಗೊಳಿಸಲು ಸೂಕ್ತ ಸಮಯ ಇದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು,
ರೋಟರಿ ವಲಯ ಸೇನಾನಿ ಅನಿತಾ ಪೂವಯ್ಯ ಮಾತನಾಡಿ, ರೋಟರಿ ಮಿಸ್ಟಿ ಹಿಲ್ಸ್ 3 ವರ್ಷಗಳ ಹಿಂದೆ ಪ್ರಾರಂಭಿಸಿದ ಮಡಿಕೇರಿಯ ಮೂರನೇ ರೋಟರಿ ಸಂಸ್ಥೆಯಾದ ರೋಟರಿ ವುಡ್ಸ್ ಸಮಾಜ ಸೇವೆಯಲ್ಲಿ ಸಾರ್ಥಕತೆಯೊಂದಿಗೆ ಜನರ ಮನಗೆದ್ದಿದೆ ಎಂದು ಶ್ಲಾಘಿಸಿದರು.
ಇದೇ ಸಂದರ್ಭ ಜಾದೂಗಾರ ವಿಕ್ರಂಶೆಟ್ಟಿ ಮ್ಯಾಜಿಕ್ ಮೂಲಕ ಬುಟ್ಟಿಯೊಳಗಿನಂದ ರೋಟರಿ ವುಡ್ಸ್ ನ ವಾತಾ೯ ಸಂಚಿಕೆ ಅನಾವರಣಗೊಳಿಸಿ ಗಮನ ಸೆಳೆದರು,
ರೋಟರಿ ವುಡ್ಸ್ ನಿರ್ಗಮಿತ ಅಧ್ಯಕ್ಷ ವಸಂತ್ ಕುಮಾರ್ ತನ್ನ ಅವಧಿಯ ಸೇವಾ ಕಾರ್ಯಗಳ ಮಾಹಿತಿ ನೀಡಿದರು. ರೋಟರಿ ವುಡ್ಸ್ ಕಾರ್ಯದರ್ಶಿ ಕಿರಣ್ ಕುಂದರ್ ವಂದಿಸಿದ ಕಾರ್ಯಕ್ರಮದಲ್ಲಿ ರೋಟರಿ ವಲಯ 6 ರ ವಿವಿಧ ರೋಟರಿ ಸಂಸ್ಥೆಗಳ ನೂರಾರು ಸದಸ್ಯರು ಪಾಲ್ಗೊಂಡಿದ್ದರು,