ಹಾರೋಹಳ್ಳಿ ತಾಪಂ ಕಚೇರಿ ಲೋಕಾರ್ಪಣೆ

KannadaprabhaNewsNetwork |  
Published : Apr 08, 2026, 01:15 AM IST
7ಕೆಆರ್ ಎಂಎನ್ 1.ಜೆಪಿಜಿಹಾರೋಹಳ್ಳಿ ತಾಲೂಕು ಪಂಚಾಯಿತಿ ನೂತನ ಕಚೇರಿಯನ್ನು ಶಾಸಕ ಇಕ್ಬಾಲ್ ಹುಸೇನ್ ಉದ್ಘಾಟಿಸಿದರು. ಅಶೋಕ್, ಹರೀಶ್, ಅಪೂರ್ವ ಕುಲಕರ್ಣಿ, ಮೋಹನ್ ಬಾಬು ಇದ್ದಾರೆ. | Kannada Prabha

ಸಾರಾಂಶ

ಹಾರೋಹಳ್ಳಿ: ಪಟ್ಟಣದ ಮಾರಸಂದ್ರ ರಸ್ತೆ ವಿನಾಯಕ ಚಿತ್ರಮಂದಿರ ಸಮೀಪ ತಾಲೂಕು ಪಂಚಾಯಿತಿ ನೂತನ ಕಚೇರಿಯನ್ನು ಶಾಸಕ ಇಕ್ಬಾಲ್ ಹುಸೇನ್ ಲೋಕಾರ್ಪಣೆ ಮಾಡಿದರು

ಹಾರೋಹಳ್ಳಿ: ಪಟ್ಟಣದ ಮಾರಸಂದ್ರ ರಸ್ತೆ ವಿನಾಯಕ ಚಿತ್ರಮಂದಿರ ಸಮೀಪ ತಾಲೂಕು ಪಂಚಾಯಿತಿ ನೂತನ ಕಚೇರಿಯನ್ನು ಶಾಸಕ ಇಕ್ಬಾಲ್ ಹುಸೇನ್ ಲೋಕಾರ್ಪಣೆ ಮಾಡಿದರು.

ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಹಾರೋಹಳ್ಳಿ ನೂತನ ತಾಲೂಕು ರಚನೆಯಾದ ನಂತರ ತಾಲೂಕು ಪಂಚಾಯಿತಿ ಕಚೇರಿಯು ಕಗ್ಗಲಹಳ್ಳಿ ಕರ್ತವ್ಯ ನಿರ್ವಹಿಸುತ್ತಿತ್ತು. ತಾಲೂಕಿನ ಎಲ್ಲಾ ಭಾಗದ ಜನರಿಗೆ ಸರ್ಕಾರದ ಸೌಲಭ್ಯಗಳು ಆದಷ್ಟು ಬೇಗ ಸಿಗಲಿ ಎನ್ನುವ ಉದ್ದೇಶದಿಂದ ತಾಲೂಕು ಪಂಚಾಯಿತಿ ಕಚೇರಿಯನ್ನು ಪಟ್ಟಣದ ಕೇಂದ್ರ ಸ್ಥಾನದಲ್ಲಿ ಆರಂಭಿಸಲಾಗಿದೆ ಎಂದರು.

ತಾಲೂಕಿನ ಆಡಳಿತವನ್ನು ಸುಗಮವಾಗಿ ನಡೆಸಲು ಹಂತಹಂತವಾಗಿ ಕಚೇರಿಗಳನ್ನು ತೆರೆಯಲಾಗುತ್ತಿದೆ. ತಾಲೂಕು ಪಂಚಾಯಿತಿ ಆಡಳಿತದಲ್ಲಿ ಸಮನಾಗಿ ಅಭಿವೃದ್ಧಿ ಪಡಿಸುವುದೇ ನನ್ನ ಉದ್ದೇಶ ಎಂದು ಹೇಳಿದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಪೂರ್ವ.ವಿ.ಕುಲಕರ್ಣಿ ಮಾತನಾಡಿ, ಈ ಹಿಂದೆ ಹಂತ ಹಂತವಾಗಿ ಕಾರ್ಯ ನಿರ್ವಹಿಸುತ್ತಿದ್ದ ಕಚೇರಿಯನ್ನು ಹಾರೋಹಳ್ಳಿ ಕೇಂದ್ರ ಸ್ಥಾನದಲ್ಲಿ ಆರಂಭಿಸಲಾಗಿದೆ. ಸಾರ್ವಜನಿಕರು ಇದರ ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಈ ವೇಳೆ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಮೋಹನ್ ಬಾಬು, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜೆಸಿಬಿ ಅಶೋಕ್, ಬೊಮುಲ್ ನಿರ್ದೇಶಕ ಹರೀಶ್, ನಿರಂಜನ್ ಸೇರಿದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಸಿಬ್ಬಂದಿ ಹಾಜರಿದ್ದರು.

7ಕೆಆರ್ ಎಂಎನ್ 1.ಜೆಪಿಜಿ

ಹಾರೋಹಳ್ಳಿ ತಾಲೂಕು ಪಂಚಾಯಿತಿ ನೂತನ ಕಚೇರಿಯನ್ನು ಶಾಸಕ ಇಕ್ಬಾಲ್ ಹುಸೇನ್ ಉದ್ಘಾಟಿಸಿದರು. ಅಶೋಕ್, ಹರೀಶ್, ಅಪೂರ್ವ ಕುಲಕರ್ಣಿ, ಮೋಹನ್ ಬಾಬು ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಪ್‌ ಚುಪ್‌ ಕೊಲೆ ಪ್ರಕರಣ ಭೇದಿಸಿದ ಪೊಲೀಸರು
ನನಗೆ ಸುಪ್ರೀಂ ಕೋರ್ಟಿನಲ್ಲಿ ಜಯ: ಕೊಂಡವಾಡಿ ಚಂದ್ರಶೇಖರ್