ಹಾರೂಗೊಪ್ಪ ಮಹಾರಥೋತ್ಸವ ಸಂಭ್ರಮ

KannadaprabhaNewsNetwork |  
Published : Feb 13, 2025, 12:49 AM IST
ಬೈಲಹೊಂಗಲ | Kannada Prabha

ಸಾರಾಂಶ

ಬೈಲಹೊಂಗಲ ಸಮೀಪದ ಹಾರೂಗೊಪ್ಪ ಗ್ರಾಮದ ಉಳವಿ ಚನ್ನಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಮಹಾರಥೋತ್ಸವ ಬುಧವಾರ ಸಂಜೆ ವಿಜೃಂಭಣೆಯಿಂದ ನೇರವೆರಿತು. ನವಿಲಿನ ಕಳಸ ಹೊತ್ತು ಆಕರ್ಷಕ ರಥವನ್ನು ಭಕ್ತರು ಹುಮ್ಮಸಿನಿಂದ ಏಳೆದರು. ಭಕ್ತರು ಹರ ಹರ ಮಹದೇವ ಉಳವಿ ಚನ್ನಬಸವೇಶ್ವರ ಮಹಾರಾಜಕಿ ಜೈ ಎನ್ನುತ್ತಾ ರಥವನ್ನು ಏಳೆದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಸಮೀಪದ ಹಾರೂಗೊಪ್ಪ ಗ್ರಾಮದ ಉಳವಿ ಚನ್ನಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಮಹಾರಥೋತ್ಸವ ಬುಧವಾರ ಸಂಜೆ ವಿಜೃಂಭಣೆಯಿಂದ ನೇರವೆರಿತು. ನವಿಲಿನ ಕಳಸ ಹೊತ್ತು ಆಕರ್ಷಕ ರಥವನ್ನು ಭಕ್ತರು ಹುಮ್ಮಸಿನಿಂದ ಏಳೆದರು. ಭಕ್ತರು ಹರ ಹರ ಮಹದೇವ ಉಳವಿ ಚನ್ನಬಸವೇಶ್ವರ ಮಹಾರಾಜಕಿ ಜೈ ಎನ್ನುತ್ತಾ ರಥವನ್ನು ಏಳೆದರು.

ಸುತ್ತಲಿನ ಗ್ರಾಮಗಳಿಂದ ಬಂದ ಜನ ಹೂವು ಹಣ್ಣು ಕಾರಿಕಗಳನ್ನು ರಥಕ್ಕೆ ಎಸೆದರು. ದೇವಸ್ಥಾನದಲ್ಲಿ ಉಳವಿ ಚನ್ನಬಸವೇಶ್ವರ ನಂದಿ ಮೂರ್ತಿಗಳಿಗೆ ವಿಶೇಷ ಪೂಜೆ, ಮಹಾ ಅಭಿಷೇಕ, ಆನೆ, ಕುಂಭಮೇಳ, ಪಲ್ಲಕ್ಕಿ ಉತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಇಡೀ ದಿನ ನಡೆದವು, ಅರಭಾವಿ ಪುಣ್ಯಾರಣ್ಯ ಮಠದ ಗುರುಬಸವಲಿಂಗ ಮಹಾಸ್ವಾಮಿಗಳು ನೇತೃತ್ವ ವಹಿಸಿದ್ದರು. ಅರಭಾವಿ ಮಠದ ಗುರುಬಸವ ಲಿಂಗ ಮಹಾಸ್ವಾಮೀಜಿ ರಥಕ್ಕೆ ಪೂಜೆ ಸಲ್ಲಿಸಿ, ಚಾಲನೆ ನೀಡಿದರು. ರಥಕ್ಕೆದ ಮುಂದೆ ಪುರವoತರು ಒಡಪು, ಬಸವೇಶ್ವರ ಕರಡಿ ಮಜಲು, ಬೀರೇಶ್ವರ ಡೊಳ್ಳಿನ, ಮಜಲು, ಉಳವಿ ಚೆನ್ನಬಸವೇಶ್ವರ ತಂಡದಿಂದ ಭಜನೆಯೊಂದಿಗೆ ರಥದ ಮುಂದೆ ಸಾಗಿತು. ಭಕ್ತರು ಹರ ಹರ ಮಹಾದೇವ ಎನ್ನುತ್ತ ರಥವನ್ನು ಮುಂದೆ ಏಳೆದರು.ಈ ವೇಳೆ ಗುರುಬಸವ ಲಿಂಗ ಮಹಾಸ್ವಾಮಿಗಳು, ಬಸವರಾಜ ಕೌಜಲಗಿ, ಉಳವಿ ಚನ್ನಬಸವೇಶ್ವರ ಯುವಕ ಮಂಡಳಿ ಸದಸ್ಯರು, ಸ್ವಸಹಾಯ ಸಂಘದ ಸದಸ್ಯರು, ಜಾತ್ರಾ ಕಮಿಟಿಯವರು ಪಾಲ್ಗೊಂಡಿದ್ದರು. ಕಲ್ಯಾಣ ಕ್ರಾಂತಿಯ ನಂತರ ಚನ್ನಬಸವೇಶ್ವರ ವಚನ ಸಾಹಿತ್ಯವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಉಳಿಯುತ್ತ ಧಾವಿಸಿದರು. ಪಾದಯಾತ್ರೆ ಮೂಲಕ ಬಂದ ಶರಣು ಶರಣೀಯರು ಕೆಲಸಮಯ್ಯ ಮಾರ್ಗದಲ್ಲಿ ಹಾರುಗೋಪ್ಪ ಗ್ರಾಮದಲ್ಲಿ ವಿಶ್ರಾಂತಿ ಪಡೆದರು. ಲಿಂಗ ಪೂಜೆಗಳನ್ನು ಮಾಡಿದರು. ಅದರ ಸ್ಮರಣಾರ್ಥ ಚಿಕ್ಕ ದೇವಸ್ಥಾನವನ್ನು ಅಲ್ಲಿ ನಿರ್ಮಿಸಲಾಗಿದೆ. ಊರಿನ ಭಕ್ತರು ಅದನ್ನು ಕಾಲಕಾಲಕ್ಕೆ ಅಭಿವೃದ್ಧಿ ಮಾಡುತ್ತ ಬಂದಿದ್ದಾರೆ. ಕಳೆದ 20 ವರ್ಷಗಳಿಂದ ಅದ್ಧೂರಿ ಜಾತ್ರೆ ಕೂಡ ನಡೆಯುತ್ತ ಬಂದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''