ಪ್ರಕೃತಿಗೆ ಕೃತಜ್ಞತೆ ಸಲ್ಲಿಸುವ ಹಬ್ಬವೇ ಸುಗ್ಗಿ ಸಂಕ್ರಾಂತಿ

KannadaprabhaNewsNetwork |  
Published : Jan 14, 2026, 02:30 AM IST
ಪೊಟೊ-13ಕೆಎನ್ಎಲ್ಎಮ್1- ನೆಲಮಂಗಲ ನಗರದ ಪೇಟೆಬೀದಿಯ ಮಹಂತಿನ ಮಠದ ಆವರಣದಲ್ಲಿ ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದಿಂದ ನಡೆದ ಸುಗ್ಗಿ ಸಂಕ್ರಾಂತಿ ಕಾರ್ಯಕ್ರಮವನ್ನುಅಖಿಲ ಭಾರತ ವೀರಶೈವ ಲಿಂಗಾ ಯತ ಮಹಾಸಭಾ ಕೇಂದ್ರ ಘಟಕದ ಉಪಾಧ್ಯಕ್ಷ ಬಿ. ಎಸ್ ಸಚ್ಚಿದಾನಂದಮೂರ್ತಿ ಉದ್ಘಾಟಿಸಿದರು.ಸಂದರ್ಭದಲ್ಲಿ ಮಹಾಸಭಾ ತಾಲ್ಲೂಕು ಅಧ್ಯಕ್ಷ ಎನ್ ರಾಜಶೇಖರ್, ಸಂದರ್ಭದಲ್ಲಿ ಮಹಾಸಭಾ ಕೇಂದ್ರ ಸಮಿತಿ ಮಾಜಿ ನಿರ್ದೇಶಕ ಎನ್ ಎಸ್ ನಟರಾಜು.ಆರ್ ಜಿಲ್ಲಾಧ್ಯಕ್ಷ ರೇವಣ್ಣ ಸಿದ್ದಯ್ಯಮತ್ತಿತರರು ಇದ್ದರು, | Kannada Prabha

ಸಾರಾಂಶ

ನೆಲಮಂಗಲ: ಭೂತಾಯಿಗೆ ಕೃತಜ್ಞತೆ ಸಲ್ಲಿಸುವ ಹಬ್ಬವೇ ಸಂಕ್ರಾಂತಿ. ಎಳ್ಳು-ಬೆಲ್ಲ ವಿನಿಮಯದ ಮೂಲಕ ಪ್ರೀತಿ ಮತ್ತು ಸೌಹಾರ್ದತೆ ಹಂಚಿಕೊಳ್ಳುವುದು ಹಬ್ಬದ ವಿಶೇಷ ಎಂದು ಮಹಾಸಭಾ ಕೇಂದ್ರ ಘಟಕದ ಉಪಾಧ್ಯಕ್ಷ ಬಿ.ಎಸ್.ಸಚ್ಚಿದಾನಂದಮೂರ್ತಿ ತಿಳಿಸಿದರು.

ನೆಲಮಂಗಲ: ಭೂತಾಯಿಗೆ ಕೃತಜ್ಞತೆ ಸಲ್ಲಿಸುವ ಹಬ್ಬವೇ ಸಂಕ್ರಾಂತಿ. ಎಳ್ಳು-ಬೆಲ್ಲ ವಿನಿಮಯದ ಮೂಲಕ ಪ್ರೀತಿ ಮತ್ತು ಸೌಹಾರ್ದತೆ ಹಂಚಿಕೊಳ್ಳುವುದು ಹಬ್ಬದ ವಿಶೇಷ ಎಂದು ಮಹಾಸಭಾ ಕೇಂದ್ರ ಘಟಕದ ಉಪಾಧ್ಯಕ್ಷ ಬಿ.ಎಸ್.ಸಚ್ಚಿದಾನಂದಮೂರ್ತಿ ತಿಳಿಸಿದರು.

ನಗರದ ಮಹಂತಿನ ಮಠದ ಆವರಣದಲ್ಲಿ ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕ ಆಯೋಜಿಸಿದ್ದ ಸುಗ್ಗಿ ಸಂಕ್ರಾಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೈತರಿಗೆ ಸಮೃದ್ಧಿಯ ಸಂಕೇತ. ಹಬ್ಬದಂದು ರಂಗೋಲಿ ಬಿಡುವುದು, ಗಾಳಿಪಟ ಹಾರಿಸುವುದು ಮತ್ತು ಜಾನುವಾರುಗಳಿಗೆ ಪೂಜೆ, ಹೊಸ ಫಸಲನ್ನು ಮನೆಗೆ ತುಂಬಿಕೊಳ್ಳುವ ಸಂಭ್ರಮ ಎಂದರು.

ಮಹಾಸಭಾ ತಾಲೂಕು ಅಧ್ಯಕ್ಷ ಎನ್.ರಾಜಶೇಖರ್ ಮಾತನಾಡಿ, ನಮ್ಮ ಸಂಸ್ಕೃತಿ, ಸಂಪ್ರದಾಯ, ಹಬ್ಬಗಳ ಆಚರಣೆಯನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕಾದ ಗುರುತರ ಜವಾಬ್ದಾರಿ ಸಮಾಜದ ಪ್ರತಿಯೊಬ್ಬರ ಮೇಲಿದೆ ಎಂದರು.

ಮಕ್ಕಳು ಮತ್ತು ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ಮ್ಯೂಸಿಕಲ್ ಚೇರ್‌ ಸ್ಪರ್ಧೆಗಳು ಆಯೋಜಿಸಿ ವಿಜೇತರಿಗೆ ಬಹುಮಾತ ವಿತರಿಸಿದರು. ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನ ಗೋವುಗಳಿಗೆ ಹಾಗೂ ಧಾನ್ಯ ರಾಶಿಗಳಿಗೆ ಮಹಾಸಭಾದ ಗಣ್ಯರು ಹಾಗೂ ಮಹಿಳೆಯರು ಪೂಜೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಮಹಾಸಭಾ ಕೇಂದ್ರ ಸಮಿತಿ ಮಾಜಿ ನಿರ್ದೇಶಕ ಎನ್.ಎಸ್.ನಟರಾಜು, ರಾಜ್ಯ ಯುವ ಘಟಕದ ಕಾರ್ಯದರ್ಶಿ ಕೊಟ್ರೇಶ್, ಜಿಲ್ಲಾಧ್ಯಕ್ಷ ರೇವಣ್ಣ ಸಿದ್ದಯ್ಯ, ಜಿಲ್ಲಾ ಮಾಜಿ ಕಾರ್ಯದರ್ಶಿ ಎನ್.ಎಸ್.ಶಾಂತಕುಮಾರ್, ನಗರಸಭೆ ಮಾಜಿ ಅಧ್ಯಕ್ಷೆ ಪೂರ್ಣಿಮಾ, ಸದಸ್ಯ ಸಿ.ಪ್ರದೀಪ್, ಸದಸ್ಯೆ ಲೋಲಾಕ್ಷಿ ಗಂಗಾಧರ್, ಮಹಾಸಭಾದ ಜಿಲ್ಲಾ ನಿರ್ದೇಶಕರಾದ ಬೃಂಗೇಶ್, ಮಂಜುಳಾ, ಸುರೇಶ್, ಜಗದೀಶ್, ರುದ್ರೇಶ್ವರ ಕ್ರೇಡಿಟ್ ಸೊಸೈಟಿ ಅಧ್ಯಕ್ಷ ಬಿ.ದಯಾಶಂಕರ್, ವೀರಶೈವ ಸೊಸೈಟಿ ಅಧ್ಯಕ್ಷ ಲೋಕೇಶ್, ಟೌನ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಚನ್ನಬಸವರಾಜು ಇತರರಿದ್ದರು.

ಪೊಟೊ-13ಕೆಎನ್ಎಲ್ಎಮ್1- ನೆಲಮಂಗಲದ ಮಹಂತಿನ ಮಠದಲ್ಲಿ ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕ ಆಯೋಜಿಸಿದ್ದ ಸುಗ್ಗಿ ಸಂಕ್ರಾಂತಿಯನ್ನು ಕೇಂದ್ರ ಘಟಕದ ಉಪಾಧ್ಯಕ್ಷ ಸಚ್ಚಿದಾನಂದಮೂರ್ತಿ ಉದ್ಘಾಟಿಸಿದರು. ತಾಲೂಕು ಅಧ್ಯಕ್ಷ ರಾಜಶೇಖರ್‌ ತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆರೂರು ಗ್ರಾಮಸ್ಥರಿಂದ ರಸ್ತೆ ಅತಿಕ್ರಮಣ ತೆರವಿಗೆ ಗಡುವ ನಿಗದಿ
ಮಸ್ಕಿ ಪಟ್ಟಣದ ವಿವಿಧ ವಾರ್ಡುಗಳಲ್ಲಿ ಶಾಸಕರಿಂದ ಜನರ ಸಮಸ್ಯೆ ಆಲಿಕೆ