ಪರಶುರಾಂಪುರ ಬ್ಯಾರೇಜ್ ನಿರ್ಮಾಣಕ್ಕೆ ಆಂಧ್ರ ಆಕ್ಷೇಪಿಸಿತ್ತು । ನಾಲ್ಕು ವರ್ಷಗಳ ಹಿಂದೆ ಕೇಂದ್ರಕ್ಕೆ ದೂರು ನೀಡಿತ್ತುಚಿಕ್ಕಪ್ಪನಹಳ್ಳಿ ಷಣ್ಮುಖ
ಕಾರ್ಯಸಾಧುವಲ್ಲದ ಆಲೋಚನೆ ಎಂದು ಸರ್ಕಾರ ಉನ್ನತ ಅಧಿಕಾರಿಗಳು ಹೇಳಿದರೂ ಕಿವಿಗೆ ಹಾಕಿಕೊಳ್ಳದೆ ಅರ್ಧ ಟಿಎಂಸಿ ನೀರಿಗಾಗಿ ಅಮರಣಾಂತ ಉಪವಾಸ ಕುಳಿತು ನಂತರ, ಸುಧಾಕರ್ ನೀಡಿದ ಷರಬತ್ತು ಸೇವಿಸಿ ಸತ್ರಾಗ್ರಹಕ್ಕೆ ಮಂಗಳ ಹಾಡಿದ ಹಿರಿಯೂರು ಹೋರಾಟಗಾರರು ಭವಿಷ್ಯದಲ್ಲಿ ಎದುರಾಗುವ ಸಂಕಷ್ಟಗಳ ಬಗ್ಗೆ ಆಲೋಚನೆ ಮಾಡಿದಂತೆ ಕಾಣಿಸುತ್ತಿಲ್ಲ. ವಿವಿ ಸಾಗರ ಜಲಾಶಯದಲ್ಲಿ ನೀರೇ ಇಲ್ಲದಿದ್ದರೂ ಗಾಯತ್ರಿ ಜಲಾಶಯಕ್ಕೆ ನೀರು ಕೇಳಿ ಅನಗತ್ಯ ವಿವಾದಕ್ಕೆ ಕಾರಣರಾಗಿದ್ದಾರೆ.
ರಾಜ್ಯದ ಗಡಿಗೆ ಹೊಂದಿಕೊಂಡಂತೆ ಬೈರವನಿತಿಪ್ಪ(ಬಿಟಿ ಡ್ಯಾಂ)ಇದೆ. ಆಂಧ್ರದ ಅನಂತಪುರ ಜಿಲ್ಲೆಯ ಗುಮ್ಮಗಟ್ಟದಲ್ಲಿ 1961ರಲ್ಲಿ ಬೈರವನಿ ತಿಪ್ಪ ಜಲಾಶಯ ನಿರ್ಮಿಸಲಾಗಿದೆ. 1976ರಲ್ಲಿ ಅಂದಿನ ಮೈಸೂರು ಸರ್ಕಾರ ಹಾಗೂ ಆಂದ್ರ ಪ್ರದೇಶದ ನಡುವೆ ಒಪ್ಪಂದವಾಗಿದ್ದು ವಿವಿ ಸಾಗರ ಜಲಾಶಯದಿಂದ ಬೈರವನಿ ತಿಪ್ಪ ಜಲಾಶಯದವರೆಗೆ ಯಾವುದೇ ಬಗೆಯ ಚೆಕ್ ಡ್ಯಾಂ, ಬ್ಯಾರೇಜ್ ಕಂ ಬ್ರಿಡ್ಜ್ ಏನೂ ನಿರ್ಮಿಸುವಂತಿಲ್ಲ. ಆದರೆ ಸುಮಾರು 18 ಬ್ಯಾರೇಜುಗಳು ಈಗಾಗಲೇ ನಿರ್ಮಿಸಲಾಗಿದ್ದು ಮತ್ತೇ ಮೂರು ಬ್ಯಾರೇಜ್ ನಿರ್ಮಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ.ಚಳ್ಳಕೆರೆ ತಾಲೂಕಿನ ಪರಶುರಾಂಪುರ ಬಳಿ ವೇದಾವತಿ ನದಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಿಸಿದಾಗ ಆಂಧ್ರಪ್ರದೇಶ ಸರ್ಕಾರ 4 ವರ್ಷದ ಹಿಂದೆ ಅಂದರೆ ಡಿಸೆಂಬರ್ 13, 2021ರಲ್ಲಿ ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ದೂರು ನೀಡಿ ಇದು ಒಪ್ಪಂದಗಳ ಉಲ್ಲಂಘನೆಯಾಗಿದೆ. ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆಯಾಗಿ ಘೋಷಣೆ ಮಾಡಲು ಅವಕಾಶ ಕೊಡಬಾರದೆಂದು ಖ್ಯಾತೆ ತೆಗೆದಿತ್ತು.
ಆದರೆ ಆಂದ್ರ ಪ್ರದೇಶ ಇಷ್ಟಕ್ಕೆ ಸುಮ್ಮನಾಗುವುದಿಲ್ಲ, ಭವಿಷ್ಯದಲ್ಲಿ ಖ್ಯಾತೆ ತೆಗೆಯುವುದಿಲ್ಲವೆಂಬುದಕ್ಕೆ ಗ್ಯಾರಂಟಿಗಳಿಲ್ಲ. ವಿವಿ ಸಾಗರ ಜಲಾಶಯದಲ್ಲಿ 20ಕ್ಕೂ ಹೆಚ್ಚು ಟಿಎಂಸಿ ನೀರು ಸಂಗ್ರಹವಾಗಿರುವುದರಿಂದ ಕೆಳ ಭಾಗದ ರಾಜ್ಯಗಳಿಗೆ ನೀರು ಬೀಡುವಂತೆ ಕೋರಬಹುದು. ಬೈರವನಿತಿಪ್ಪ ಜಲಾಶಯ ಅರ್ಧ ಖಾಲಿಯಾಗಿದ್ದು, ಈ ಬೇಸಗೆ ಎದುರಿಸುತ್ತದೆಯೇ ಎಂಬ ಬಗ್ಗೆ ಅನುಮಾನಗಳಿವೆ. ಹಾಗಾಗಿ ಹಿರಿಯೂರಿನ ಮಂದಿ ವಿವಿ ಸಾಗರದಲ್ಲಿ ನೀರಿದೆ ಎಂದು ಬೊಬ್ಬೆ ಹೊಡೆದುಕೊಂಡರೆ ಅದು ಆಂದ್ರಕ್ಕೆ ಹೆಚ್ಚುವರಿ ನೀರು ಪಡೆಯಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಅಂಧ್ರ ಖ್ಯಾತೆ ಮುಂದುವರಿದದ್ದೇ ಆದಲ್ಲಿ ವೇದಾವತಿ ನದಿಯುದ್ದಕಕ್ಕೂ ಕಟ್ಟಲಾದ ಬ್ಯಾರೇಜುಗಳ ತೆರವು ಮಾಡಬೇಕಾಗುತ್ತದೆ. ಹಿಂದೊಮ್ಮೆ ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ ಕೆಆರ್‌ಎಸ್ ಬರಿದಾಗಿದ್ದರೂ ತಮಿಳು ನಾಡಿಗೆ ನೀರು ಬಿಡುವಂತ ಸುಪ್ರೀ ಕೋರ್ಟ್ ಆದೇಶಿಸಿತ್ತು. ಇಂತಹ ಕಟು ವಾಸ್ತವವ ಹಿರಿಯೂರು ರೈತರು ಅರಿಯಬೇಕು. ಹಿರಿಯೂರು ತಾಲೂಕಿನಲ್ಲಿ ನಿರ್ಮಿಸಲಾದ ಬ್ಯಾರೇಜುಗಳು ನಮ್ಮವೇ ಎಂಬ ಅರಿವು ಅವರಿಗೆ ಇರಬೇಕು. ನಾಳೆ ಸುಪ್ರೀಂಕೋರ್ಟ್ ಬಿಟಿ ಡ್ಯಾಂಗೆ ನೀರು ಬಿಡಿ ಎಂದು ನಿರ್ದೇಶಿಸಿದರೆ ಅದರಿಂದಾಗುವ ಪರಿಣಾಮಗಳ ಜಿಲ್ಲೆಯ ಜನ ಉಣ್ಣುತ್ತಾರೆ.
ವೇದಾವತಿ ನದಿಯುದ್ದಕ್ಕೂ ಕಟ್ಟಲಾದ ಬ್ಯಾರೇಜ್‌ಗಳು
ಕೂನಿಕೆರೆ ಬ್ಯಾರೇಜ್
ಆಲೂರು ಪಿಟ್ಲಹಳ್ಳಿ ಬ್ಯಾರೇಜ್
ಹಳೇ ಯಳನಾಡು ಬ್ಯಾರೇಜ್
ಕೆರೆ ಓಬವ್ವನಹಳ್ಳಿ ಬ್ಯಾರೇಜ್
ಕಂಬತ್ತಳಹಳ್ಳಿ ಬ್ಯಾರೇಜ್ಸಿಡ್ಲನಕೋಟೆ ಬ್ಯಾರೇಜ್ ಕಂ ಬ್ರಿಡ್ಜ್
ಕಲಮರಹಳ್ಳಿ ಬ್ರಿಜ್ ಕಂ ಬ್ಯಾರೇಜ್ಗೊರ್ಲತ್ತು ಬ್ಯಾರೇಜ್
ಬೊಂಬೇರಹಳ್ಳಿ ಬ್ಯಾರೇಜ್ಚೌಳೂರು ಬ್ರಿಡ್ ಕಂ ಬ್ಯಾರೇಜ್
ಪರಶುರಾಂಪುರ ಬ್ಯಾರೇಜ್ಪಡಗಲಬಂಡೆ ಬ್ಯಾರೇಜ್
ನಾಗಗೊಂಡನಹಳ್ಳಿ ಬ್ಯಾರೇಜ್ಮೈಲನಹಳ್ಳಿ ಬ್ರಿಡ್ಜ್ ಕಂ ಬ್ಯಾರೇಜ್
ನಿರ್ಮಾಣ ಮಾಡಲು ಉದ್ದೇಶಿತ ಬ್ಯಾರೇಜುಗಳು:
ತೊರೆ ಬೀರನಹಳ್ಳಿ ಬ್ರಿಡ್ಜ್ ಕಂ ಬ್ಯಾರೇಜ್ಗೋಸಿಕೆರೆ ಬ್ರಿಡ್ಜ್ ಕಂ ಬ್ಯಾರೇಜ್
ಗುಡಿಹಳ್ಳಿ ಬ್ರಿಡ್ಜ್ ಕಂ ಬ್ಯಾರೇಜ್