ಹಾಸನಾಂಬ ಉತ್ಸವ: ಡಿಸಿ ನಡೆಗೆ ಶಾಸಕ ಸ್ವರೂಪ್ ಆಕ್ರೋಶ

KannadaprabhaNewsNetwork | Published : Nov 5, 2023 1:15 AM

ಸಾರಾಂಶ

ಹಾಸನಾಂಬ ಉತ್ಸವದಲ್ಲಿಕಳಸ ಪ್ರತಿಷ್ಠಾಪನೆ, ಹೋಮ, ಹೆಲಿಟೂರಿಸಂ, ಪ್ಯಾರಾಗ್ಲೈಡಿಂಗ್ ಸೇರಿದಂತೆ ಎಲ್ಲವನ್ನೂ ಜಿಲ್ಲಾಧಿಕಾರಿ ಅವರೇ ಏಕಪಕ್ಷೀಯವಾಗಿ ಚಾಲನೆ ನೀಡುತ್ತಿದ್ದಾರೆ. ನಾವೇನು ದನ ಕಾಯೋಕ್ಕೆ ಇದ್ದೀವಾ ಶಾಸಕ ಹೆಚ್.ಪಿ. ಸ್ವರೂಪ್ ಪ್ರಶ್ನಿಸಿದರು.

ಹಾಸನ: ಹಾಸನಾಂಬ ಉತ್ಸವದಲ್ಲಿ ಕಳಸ ಪ್ರತಿಷ್ಠಾಪನೆ, ಹೋಮ, ಹೆಲಿಟೂರಿಸಂ, ಪ್ಯಾರಾಗ್ಲೈಡಿಂಗ್ ಸೇರಿದಂತೆ ಎಲ್ಲವನ್ನೂ ಜಿಲ್ಲಾಧಿಕಾರಿ ಅವರೇ ಏಕಪಕ್ಷೀಯವಾಗಿ ಚಾಲನೆ ನೀಡುತ್ತಿದ್ದಾರೆ. ನಾವೇನು ದನ ಕಾಯೋಕ್ಕೆ ಇದ್ದೀವಾ ಶಾಸಕ ಹೆಚ್.ಪಿ. ಸ್ವರೂಪ್ ಪ್ರಶ್ನಿಸಿದರು.

ಹಾಸನಾಂಬ ಉತ್ಸವದಲ್ಲಿ ಸ್ಥಳೀಯ ಶಾಸಕರ ಕಡೆಗಣನೆಯಾಗಿದೆ ಎಂಬ ವಿಚಾರವಾಗಿ ಶನಿವಾರ ಜಿಲ್ಲಾಧಿಕಾರಿ, ಎಸಿ ಹಾಗೂ ಶಾಸಕರ ನಡುವೆ ಕೆಲ ಸಮಯ ವಾಗ್ವಾದ ನಡೆಯಿತು. ಇದೆ ವೇಳೆ ಶಾಸಕರ ಬೆಂಬಲಿಗರು ಅಸಮಧಾನ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

ಹಾಸನಾಂಬೆ ದೇವಿಯ ಗರ್ಭಗುಡಿ ಬಾಗಿಲು ತೆರೆದು ಮೂರನೇ ದಿನದಂದು ಹಾಸನ ಕ್ಷೇತ್ರದ ಶಾಸಕರ ಮತ್ತು ಜನರುಗಳ ಕೆಂಗಣ್ಣಿಗೆ ಜಿಲ್ಲಾಡಳಿತ ಗುರಿಯಾಗಿದೆ. ಪ್ರಥಮ ದಿನದಲ್ಲಿ ಕಳಸ ಪ್ರತಿಷ್ಠಾಪನೆ, ಹೋಮಗಳು, ಪ್ರವಾಸದ ಬಸ್ ಸಂಚಾರಕ್ಕೆ ಚಾಲನೆ ನಡೆದಿದ್ದು, ಇನ್ನು ಎರಡನೇ ದಿವಸದಂದು ಹೆಲಿಟೂರಿಸಂ, ಪ್ಯಾರಾಗ್ಲೈಡಿಂಗ್ ಸೇರಿದಂತೆ ಎಲ್ಲವನ್ನೂ ಜಿಲ್ಲಾಧಿಕಾರಿ ಅವರೇ ಚಾಲನೆ ನೀಡಿದ್ದಾರೆ ಎಂದು ಶಾಸಕರ ಆರೋಪಿಸಿದ್ದಾರೆ.

ಶನಿವಾರದಂದು ಶಾಸಕ ಸ್ವರೂಪ್ ಮತ್ತು ಅಭಿಮಾನಿಗಳು ದೇವಾಲಯದ ಮುಖ್ಯದ್ವಾರದ ಮುಂದೆ ನಿಂತು ಡಿಸಿ ಮತ್ತು ಎಸಿ ಅವರಿಗೆ ಪ್ರಶ್ನೆ ಮಾಡಿ ಜಿಲ್ಲಾಧಿಕಾರಿಯನ್ನ ತರಾಟೆಗೆ ತೆಗೆದುಕೊಂಡರು.

ಶಾಸಕರನ್ನ ಯಾವುದಕ್ಕೂ ಪರಿಗಣಿಸುತ್ತಿಲ್ಲ. ಈ ಭಾರಿ ಹಾಸನಾಂಬ ಉತ್ಸವ ಆಗಿಲ್ಲ, ಸತ್ಯಭಾಮ ಉತ್ಸವ ಆಗಿದೆ ಎಂದು ನಗರಸಭೆ ಸದಸ್ಯರು, ಬಿಜೆಪಿ ಸದಸ್ಯರು, ಜೆಡಿಎಸ್ ಮುಖಂಡರು ಆರೋಪಿಸಿದರು.

ಕಲಶ ಸ್ಥಾಪನೆಗೆ ನನ್ನನ್ನು ಯಾಕೆ ಆಹ್ವಾನಿಸಿಲ್ಲ. ನಿನ್ನೆ ಮಾಜಿ ಪ್ರಧಾನಿ ದೇವೇಗೌಡ್ರಿಗೆ ಅಭಿನಂದನೆ ಸಲ್ಲಿಸೋದನ್ನೂ ಬಿಟ್ಟು ಹೆಲಿ ಟೂರಿಸಂಗೆ ಚಾಲನೆ ಕೊಡೋದಕ್ಕೆ ಹೋಗಿದ್ರು. ನಾನು ಎರಡು ಲಕ್ಷ ಜನರಿಂದ ಆರಿಸಿ ಬಂದಿದ್ದೇನೆ ಎಂದು ಸ್ವರೂಪ್ ಸಿಡಿಮಿಡಿಗೊಂಡರು.

ಹಿಂದಿನಿಂದಲೂ ಹಾಸನಾಂಬೆ ದೇವಾಲಯದಲ್ಲಿ ಪ್ರತಿಭಟನೆಯಾದ ಇತಿಹಾಸವಿಲ್ಲ. ಆದರೇ ನಮ್ಮ ಆತ್ಮಗೌರವಕ್ಕೆ ದಕ್ಕೆ ಆದ ವೇಳೆ ನಾವು ಕೂಡ ಪ್ರತಿಭಟಿಸಬೇಕಾಗುತ್ತದೆ. ದೇವಸ್ಥಾನದ ಪ್ರೋಟೊಕಾಲ್ ಪ್ರಕಾರ ಶಾಸಕರ ಅಧ್ಯಕ್ಷತೆ ಇರುತ್ತದೆ. ನಮ್ಮ ಗಮನಕ್ಕೆ ಬಾರದಂತೆ ಕಳಸ ಪ್ರತಿಷ್ಠಾಪನೆ, ಹೋಮಗಳನ್ನು ಡಿಸಿ ಮತ್ತು ಅವರ ಪತಿ ಸೇರಿ ನಿರ್ವಹಿಸಿದ್ದು, ನನ್ನ ಆಹ್ವಾನ ಕೂಡ ಮಾಡಿರುವುದಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದಕ್ಕೆ ಜಿಲ್ಲಾಧಿಕಾರಿಗಳು ದುರಂಕಾರದ ಮಾತುಗಳನ್ನು ಆಡಿದ್ದಾರೆ. ನಗರಸಭೆ ಪೌರಕಾರ್ಮಿಕರು ಕಸ ತೆಗೆದು ಸ್ವಚ್ಛ ಮಾಡುವ ಎಲ್ಲಾ ಕೆಲಸ ಮಾಡುತ್ತಾರೆ. ಆದರೇ ಎಲ್ಲಾರನ್ನು ಕಡೆಗಣಿಸಿದ್ದಾರೆ ಎಂದು ದೂರಿದರು.

ಈ ವಿಚಾರದಲ್ಲಿ ಜಿಲ್ಲಾಡಳಿತವು ಸಂಪೂರ್ಣ ವಿಫಲವಾಗಿದೆ. ಹಾಸನಾಂಬೆ ಇತಿಹಾಸದಲ್ಲಿ ಯಾವ ಹೋಮ ಮಾಡಿರುವುದಿಲ್ಲ. ಯಾವ ಸ್ವಾಮೀಜಿಗಳನ್ನು ಕರೆಯದೇ ಅವರ ಮನಸ್ಸೋ ಇಚ್ಛೆ ಹೋಮ ಇತರೆ ಕಾರ್ಯ ಮಾಡುತ್ತಿದ್ದಾರೆ. ಇದೆಲ್ಲಾ ನಮ್ಮ ಆತ್ಮ ಗೌರವಕ್ಕೆ ಧಕ್ಕೆ ಆಗಿರುವುದರಿಂದ ಜಿಲ್ಲಾಧಿಕಾರಿ ವಿರುದ್ಧ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ಹೇಳಿದರು.ಪತಿ ಜೊತೆ ಹೋಮದಲ್ಲಿ ಭಾಗಿಯಾದ ಡಿಸಿ!ದೇಗುಲದ ಕಳಸ ಪ್ರತಿಷ್ಠಾಪನೆಯಲ್ಲಿ ಪತಿ ಜೊತೆ ಪೂಜೆಯಲ್ಲಿ ಭಾಗಿಯಾಗಿದ್ದ ಡಿಸಿ ಸತ್ಯಭಾಮ ವಿಚಾರವಾಗಿ ಮಾತನಾಡಿ, ತಮ್ಮ ಕುಟುಂಬದ ಕಾರ್ಯಕ್ರಮದಂತೆ ದಂಪತಿ ಜೊತೆ ಪೂಜೆ ಆಗಿದೆ. ಡಿಸಿ ಸತ್ಯಭಾಮ ಮತ್ತು ಪತಿ ಪೂಜೆಯಲ್ಲಿ ಭಾಗಿಯಾಗಿರೊ ವೀಡಿಯೋ ವೈರಲ್ ಆಗಿದ್ದು, ಶಾಸಕರನ್ನ ಸೌಜನ್ಯಕ್ಕಾದರೂ ಕರೆದಿಲ್ಲ. ಇನ್ನು ಹಾಸನ ಜಿಲ್ಲೆಯಲ್ಲಿ ಬರಗಾಲವಿದ್ದು, ಹೆಲೆಕಾಪ್ಟರ್ ಗೆ ಒಬ್ಬರಿಗೆ ೪೩೦೦ ರೂ ಧರ ನಿಗದಿ ಮಾಡಿದ್ದು, ಆ ದರವನ್ನು ಜಿಲ್ಲಾಡಳಿತವೇ ಭರಿಸಲಿ, ಆ ಈ ಹಣ ಕಡಿಮೆಯೇ ಎಂದು ಹೇಳುವ ಜಿಲ್ಲಾಧಿಕಾರಿಯನ್ನು ನಾನು ಎಂದು ನೋಡಿಲ್ಲ ಎಂದು ಸ್ವರೂಪ್‌ ಮತ್ತು ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು.

Share this article