ರಾಜ್ಯೋತ್ಸವದಂದೇ ಪ್ರತ್ಯೇಕ ತುಳುನಾಡು ರಾಜ್ಯ ಅಭಿಯಾನ

KannadaprabhaNewsNetwork | Updated : Nov 02 2023, 01:01 AM IST

ಸಾರಾಂಶ

ಪ್ರತ್ಯೇಕ ತುಳುನಾಡು ರಾಜ್ಯಕ್ಕೆ ಅಭಿಯಾನ
ಕನ್ನಡಪ್ರಭ ವಾರ್ತೆ ಮಂಗಳೂರು ಕರ್ನಾಟಕ ರಾಜ್ಯೋತ್ಸವದಂದೇ ಪ್ರತ್ಯೇಕ ತುಳುನಾಡಿನ ಕೂಗು ಎದ್ದಿದೆ. ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತ್ಯೇಕ ತುಳುನಾಡು ರಾಜ್ಯ ಎಂದು ಘೋಷಣೆ ಮಾಡುವಂತೆ ಸಾಮಾಜಿಕ ಜಾಲತಾಣದಲ್ಲಿ ಹ್ಯಾಶ್‌ ಟ್ಯಾಗ್‌ ಅಭಿಯಾನ ನಡೆಸಲಾಗಿತ್ತು. ಫೇಸ್‌ಬುಕ್‌, ಎಕ್ಸ್‌ನಲ್ಲಿ ‘ತುಳುನಾಡು ಸ್ಟೇಟ್‌’ ಎನ್ನುವ ಹ್ಯಾಶ್‌ ಟ್ಯಾಗ್‌ ಅಡಿಯಲ್ಲಿ ವಿಶೇಷ ರೀತಿಯ ಬರಹ, ಪೋಸ್ಟರ್‌ಗಳು ಕಂಡುಬಂದಿವೆ. ಮಂಗಳವಾರ ಸಂಜೆ ವೇಳೆಗೆ 10 ಸಾವಿರ ಮಂದಿ ತುಳು ಪ್ರತ್ಯೇಕ ರಾಜ್ಯಕ್ಕಾಗಿ ಟ್ವೀಟ್‌ ಮಾಡಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2011ರ ಸಮೀಕ್ಷೆಯ ಪ್ರಕಾರ ಕನ್ನಡಕ್ಕೆ ಜಿಲ್ಲೆಯಲ್ಲಿ ಐದನೇ ಸ್ಥಾನವಿದ್ದು, ತುಳು, ಬ್ಯಾರಿ, ಮಲಯಾಳಂ, ಕೊಂಕಣಿಯ ಬಳಿಕ ಕನ್ನಡ ಭಾಷೆ ಇದೆ. ಈ ಕಾರಣದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚು ಮಾತನಾಡುವ ಭಾಷೆ ತುಳುವನ್ನು ಪರಿಗಣಿಸಿಕೊಂಡು ತುಳು ರಾಜ್ಯ ಮಾಡಬೇಕು ಎಂದು ತುಳು ಸಂಘಟನೆಗಳು ಸಾಮಾಜಿಕ ಜಾಲತಾಣದಲ್ಲಿ ಈ ಹ್ಯಾಶ್‌ಟ್ಯಾಗ್‌ ಅಭಿಯಾನ ನಡೆಸಿವೆ.

Share this article