ಹಾಸನ ಹಾಲು ಒಕ್ಕೂಟದಿಂದ ಹಸುಗಳ ಚಿಕಿತ್ಸೆಗೆ ಪಶುವೈದ್ಯರ ನೇಮಕ

KannadaprabhaNewsNetwork |  
Published : May 21, 2025, 12:03 AM IST
19ಎಚ್ಎಸ್ಎನ್12 : ನುಗ್ಗೇಹಳ್ಳಿ ಹೋಬಳಿಯ  ಅಕ್ಕನಹಳ್ಳಿ ಗ್ರಾಮದ  ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಸುಮಾರು 16 ಲಕ್ಷ ವೆಚ್ಚದಲ್ಲಿ  ನಿರ್ಮಾಣಗೊಂಡಿದ್ದ ನೂತನ ಕಟ್ಟಡ ಹಾಗೂ 32 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ  ಬಿ ಎಂ ಸಿ  ಘಟಕವನ್ನು ಶಾಸಕ ಸಿಎನ್ ಬಾಲಕೃಷ್ಣ ಸೋಮವಾರ ಉದ್ಘಾಟಿಸಿದರು. | Kannada Prabha

ಸಾರಾಂಶ

ಅಕ್ಕನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಸುಮಾರು 16 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ನೂತನ ಕಟ್ಟಡ ಹಾಗೂ 32 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಬಿಎಂಸಿ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ನೂತನ ಕಟ್ಟಡ ನಿರ್ಮಾಣಕ್ಕೆ ಕೆಎಂಎಫ್‌ನಿಂದ 4.50 ಲಕ್ಷ ಹಾಸನ ಹಾಲು ಒಕ್ಕೂಟದಿಂದ 3ಲಕ್ಷ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 1.50 ಲಕ್ಷ ಅನುದಾನವನ್ನು ಕೊಡಲಾಗುತ್ತಿದೆ. ತಾಲೂಕಿನ ರೈತರನ್ನುಆರ್ಥಿಕವಾಗಿ ರೈತರ ಕೈ ಬಲಪಡಿಸುವೆ ಎಂದು ಶಾಸಕ ಬಾಲಕೃಷ್ಣ ಹೇಳಿದರು.

ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ

ಹೋಬಳಿಯ ಅಕ್ಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ 32 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಬಿಎಂಸಿ ಘಟಕ ಹಾಗೂ ನೂತನ ಕಟ್ಟಡವನ್ನು ಉದ್ಘಾಟಿಸಲಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.ಹೋಬಳಿಯ ಅಕ್ಕನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಸುಮಾರು 16 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ನೂತನ ಕಟ್ಟಡ ಹಾಗೂ 32 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಬಿಎಂಸಿ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ನೂತನ ಕಟ್ಟಡ ನಿರ್ಮಾಣಕ್ಕೆ ಕೆಎಂಎಫ್‌ನಿಂದ 4.50 ಲಕ್ಷ ಹಾಸನ ಹಾಲು ಒಕ್ಕೂಟದಿಂದ 3ಲಕ್ಷ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 1.50 ಲಕ್ಷ ಅನುದಾನವನ್ನು ಕೊಡಲಾಗುತ್ತಿದೆ. ತಾಲೂಕಿನ ರೈತರನ್ನುಆರ್ಥಿಕವಾಗಿ ರೈತರ ಕೈ ಬಲಪಡಿಸುವೆ. ಪ್ರಸ್ತುತ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘ ಸುಮಾರು 21 ಲಕ್ಷ ಆದಾಯದಲ್ಲಿದ್ದು, ಸಂಘದ ಎಲ್ಲರ ಪರಿಶ್ರಮದಿಂದ ಸಂಘ ಆದಾಯ ಗಳಿಸಲು ಸಾಧ್ಯವಾಗಿದೆ. ಜಿಲ್ಲೆಯಲ್ಲಿ ಹೈನೋದ್ಯಮದ ಬೆಳವಣಿಗೆಗೆ ಮಾಜಿ ಪ್ರಧಾನಿಗಳಾದ ಎಚ್ ಡಿ ದೇವೇಗೌಡರು ಹಾಗೂ ಎಚ್ ಡಿ ರೇವಣ್ಣನವರ ಪರಿಶ್ರಮದಿಂದ ಹಾಸನ ಹಾಲು ಒಕ್ಕೂಟ ರಾಜ್ಯದಲ್ಲೇ 2ನೇ ಸ್ಥಾನದಲ್ಲಿದೆ. ಹಾಸನ ಹಾಲು ಒಕ್ಕೂಟದಿಂದ ಹಸುಗಳಿಗೆ ಹೆಚ್ಚಿನ ಚಿಕಿತ್ಸೆ ನೀಡಲು ಪಶುವೈದ್ಯರ ನೇಮಕ ಸೇರಿದಂತೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರಸ್ತುತ ರೈತರಿಗೆ ಪ್ರತಿ ಲೀಟರ್‌ಗೆ 34 ರು. ನೀಡಲಾಗುತ್ತಿದ್ದು, ಸರ್ಕಾರದ ಸಹಾಯಧನ ಸೇರಿ ಸುಮಾರು 39 ರು. ಸಿಗುತ್ತಿದೆ. ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಿದೆ ಎಂದರು.ನೂತನ ಬಿಎಂಸಿ ಘಟಕದಿಂದ ಪ್ರಯೋಜನ:

ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡದಲ್ಲಿ ನಿರ್ಮಾಣಗೊಂಡಿರುವ ಬಿಎಂಸಿ ಘಟಕದಿಂದ ಈ ಭಾಗದ ರೈತರಿಗೆ ಹೆಚ್ಚಿನ ಅನುಕೂಲವಾಗಿದೆ. ರೈತರು ಪ್ರತಿನಿತ್ಯ ಹಾಲನ್ನು ಹಾಕುವ ಸಮಯದಲ್ಲಿ ಹೆಚ್ಚಿನ ಕಾಲಾವಕಾಶ ಸಿಗುವುದರಿಂದ ರೈತರಿಗೆ ಹೆಚ್ಚು ಅನುಕೂಲವಾಗುತ್ತದೆ. ಜೊತೆಗೆ ಸಂಘಕ್ಕೂ ಹೆಚ್ಚಿನ ಲಾಭಾಂಶ ಸಿಗಲಿದೆ ಎಂದರು. ಮಾಜಿ ಎಪಿಎಂಸಿ ಅಧ್ಯಕ್ಷ ಬಿ ಆರ್ ದೊರೆಸ್ವಾಮಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಅಕ್ಕನಹಳ್ಳಿ ಕೂಡು ಗ್ರಾಮ ಪಂಚಾಯತಿ ಅಧ್ಯಕ್ಷ ಹೆಬ್ಬಾಳಲು ರವಿಕುಮಾರ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಂ ಆರ್ ವಾಸು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರತ್ನಮ್ಮ ತಿಮ್ಮ ಶೆಟ್ಟಿ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಉಮೇಶ್, ಗ್ರಾ ಪಂ ಸದಸ್ಯ ಪುಟ್ಟರಾಜು, ಅಕ್ಕನಹಳ್ಳಿ ಕೃಷಿ ಪತ್ತಿನ ಅಧ್ಯಕ್ಷ ಮಧು, ನುಗ್ಗೇಹಳ್ಳಿ ಕೃಷಿ ಪತ್ತಿನ ಅಧ್ಯಕ್ಷ ವಿಕ್ಟರ್, ಅಕ್ಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಎಚ್ ಚಂದ್ರಶೇಖರ್, ಕೃಷಿ ಪತ್ತಿನ ನಿರ್ದೇಶಕರಾದ ತೋಟಿ ನಾಗರಾಜ್, ಹುಲಿಕೆರೆ ಸಂಪತ್ ಕುಮಾರ್, ಮೊದಲಗೆರೆ ದಿಲೀಪ್, ಸೋಸಲಗೆರೆ ನವೀನ್ ಕುಮಾರ್, ಎಎಂ ಕಿಶೋರ್, ಹಾಸನ ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕರಾದ ಎಂ ದಯಾನಂದ್, ಕೃಷ್ಣಮೂರ್ತಿ, ಯೋಗೇಶ್, ವಿಸ್ತರಣಾಧಿಕಾರಿ ಎನ್ ವಿದ್ಯಾ, ಒಕ್ಕೂಟದ ತಾಂತ್ರಿಕ ಅಧಿಕಾರಿ ಪ್ರಶಾಂತ್, ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಎ. ಜಿ ಶೇಷೇಗೌಡ, ನಿರ್ದೇಶಕರುಗಳಾದ ಎಪಿ ರಾಮಸ್ವಾಮಿ, ನಾರಾಯಣ ಶೆಟ್ಟಿ, ಎ ಎನ್ ಯೋಗೇಶ್, ಎ ಎಸ್ ಚಿದಾನಂದ, ನಾಗರಾಜ್, ವಿಶ್ವನಾಥ, ಮಹಾದೇವ ಶೆಟ್ಟಿ, ಶಾರದಮ್ಮ, ರಂಗಮ್ಮ, ಅಕ್ಕನಳ್ಳಿ ಕೃಷಿ ಪತ್ತಿನ ಸಿಇಒ ಎ ಟಿ ರವಿ, ಸಂಘದ ಕಾರ್ಯದರ್ಶಿ ಎಆರ್ ಸಂತೋಷ್, ಹಾಲು ಪರೀಕ್ಷಕ ವಿಜಯ ದೇವ, ಗ್ರಾಮದ ಹಿರಿಯರಾದ ಹೊನ್ನೇ ಗೌಡ್ರು, ಮುಖಂಡರಾದ ಜೆ ಮಾವಿನಹಳ್ಳಿ ಸುರೇಶ್, ದಯಾನಂದ, ಮಲ್ಲೇಗೌಡ, ಎ ಬಿ ನಂಜೇಗೌಡ, ಎ ಎಚ್ ಚಂದ್ರಶೇಖರ್, ನೇರಲಕೆರೆ ಇಂದ್ರಜಿತ್, ಸೋಸಲಗೆರೆ ವಾಸು, ಸೇರಿದಂತೆ ಇತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!