ಏಳನೇ ತರಗತಿಯ ಬಾಲಕನೊಬ್ಬ ಇವೆಲ್ಲವನ್ನೂ ಬದಿಗಿಟ್ಟು ವಿಶಿಷ್ಟ ಸಾಧನೆಯ ಮೂಲಕ ಏಷ್ಯನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದು ಎಲ್ಲರ ಗಮನ ಸೆಳೆದಿದ್ದಾನೆ. ಸಿ.ಎ. ಪರಿಣಿತ್ ಗೌಡ, ನನಗೆ ಮೂರು ವರ್ಷಗಳ ಹಿಂದೆ ಜನ್ಮದಿನದ ಉಡುಗೊರೆಯಾಗಿ ಮೊದಲ ಬಾರಿಗೆ ೩೩ ಕ್ಯೂಬ್ ದೊರೆಯಿತು. ಅದನ್ನು ಹಿಡಿದು ಆಟ ಕಲಿಯಲು ಪ್ರಾರಂಭಿಸಿದೆ. ಏನಾದರೂ ವಿಭಿನ್ನ ಸಾಧನೆ ಮಾಡಬೇಕು ಎಂಬ ಆಸೆ ನನಗಿತ್ತು. ಯೂಟ್ಯೂಬ್‌ನಲ್ಲಿ ಕ್ಯೂಬ್ ಆಟದ ಬಗ್ಗೆ ವೀಕ್ಷಣೆ ಮಾಡಿ ಹಂತ ಹಂತವಾಗಿ ಕಲಿತೆ. ಈ ಸಾಧನೆಯಲ್ಲಿ ನನ್ನ ತಂದೆ-ತಾಯಿ ಸಂಪೂರ್ಣ ಸಹಕಾರ ನೀಡಿದರು ಎಂದು ತಿಳಿಸಿದ.
ಕನ್ನಡಪ್ರಭ ವಾರ್ತೆ ಹಾಸನ
ನಗರದ ಏಳನೇ ತರಗತಿಯ ಬಾಲಕನೊಬ್ಬ ಇವೆಲ್ಲವನ್ನೂ ಬದಿಗಿಟ್ಟು ವಿಶಿಷ್ಟ ಸಾಧನೆಯ ಮೂಲಕ ಏಷ್ಯನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದು ಎಲ್ಲರ ಗಮನ ಸೆಳೆದಿದ್ದಾನೆ.ನಗರದ ಪೋದಾರ್ ಶಾಲೆಯಲ್ಲಿ ೭ನೇ ತರಗತಿಯ ಸಿ.ಎ. ಪರಿಣಿತ್ ಗೌಡ ಎಂಬ ಬಾಲಕ, ಕ್ಯೂಬ್ ಆಟದಲ್ಲಿ ಅಪೂರ್ವ ಸಾಧನೆ ಮಾಡುವ ಮೂಲಕ ಏಷ್ಯನ್ ಬುಕ್ ಆಫ್ ರೆಕಾರ್ಡ್‌ಗೆ ಆಯ್ಕೆಯಾಗಿದ್ದು, ಏಷ್ಯಾದ ವಿವಿಧ ದೇಶಗಳ ೪೭ ಸ್ಪರ್ಧಿಗಳ ಪೈಕಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ. ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿ.ಎ. ಪರಿಣಿತ್ ಗೌಡ, ನನಗೆ ಮೂರು ವರ್ಷಗಳ ಹಿಂದೆ ಜನ್ಮದಿನದ ಉಡುಗೊರೆಯಾಗಿ ಮೊದಲ ಬಾರಿಗೆ ೩೩ ಕ್ಯೂಬ್ ದೊರೆಯಿತು. ಅದನ್ನು ಹಿಡಿದು ಆಟ ಕಲಿಯಲು ಪ್ರಾರಂಭಿಸಿದೆ. ಏನಾದರೂ ವಿಭಿನ್ನ ಸಾಧನೆ ಮಾಡಬೇಕು ಎಂಬ ಆಸೆ ನನಗಿತ್ತು. ಯೂಟ್ಯೂಬ್‌ನಲ್ಲಿ ಕ್ಯೂಬ್ ಆಟದ ಬಗ್ಗೆ ವೀಕ್ಷಣೆ ಮಾಡಿ ಹಂತ ಹಂತವಾಗಿ ಕಲಿತೆ. ಈ ಸಾಧನೆಯಲ್ಲಿ ನನ್ನ ತಂದೆ-ತಾಯಿ ಸಂಪೂರ್ಣ ಸಹಕಾರ ನೀಡಿದರು ಎಂದು ತಿಳಿಸಿದ.“ನಂತರ ಕ್ಯೂಬ್ ಆಟವನ್ನು ಸಂಪೂರ್ಣವಾಗಿ ಅರಿತುಕೊಂಡ ಮೇಲೆ ಕಣ್ಣು ಮುಚ್ಚಿಕೊಂಡೇ ಅದನ್ನು ಒಂದು ನಿಮಿಷದಲ್ಲಿ ಪೂರೈಸುವ ಅಭ್ಯಾಸ ಮಾಡಿಕೊಂಡೆ. ಅಮ್ಮ ವಿಭಿನ್ನ ರೀತಿಯ ಕ್ಯೂಬ್‌ಗಳನ್ನು ತಂದುಕೊಡಲು ಪ್ರಾರಂಭಿಸಿದರು. ಒಟ್ಟು ಎಂಟು ವಿಧದ ಕ್ಯೂಬ್‌ಗಳನ್ನು ಕಣ್ಣು ಮುಚ್ಚಿಕೊಂಡೇ ಒಂದು ನಿಮಿಷದಲ್ಲಿ ನಿರ್ವಹಿಸುವ ಮಟ್ಟಕ್ಕೆ ತಲುಪಿದ್ದೇನೆ. ಮೊದಲು ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಹೆಸರು ದಾಖಲಾಗಿತ್ತು. ಬಳಿಕ ಅಲ್ಲಿನವರು ಏಷ್ಯನ್ ಬುಕ್ ಆಫ್ ರೆಕಾರ್ಡ್‌ಗೆ ಪ್ರಯತ್ನಿಸಲು ಸಲಹೆ ನೀಡಿದರು. ಅದರಂತೆ ಈಗ ಈ ಸಾಧನೆ ಸಾಧ್ಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.ಈ ವೇಳೆ ಸಿ.ಎ. ಪರಿಣಿತ್ ಗೌಡ ತಾಯಿ ರಂಜಿತಾ ಮಾತನಾಡಿ, ನನ್ನ ಮಗ ಯೂಟ್ಯೂಬ್‌ನಲ್ಲಿ ಗೇಮ್ಸ್ ಅಥವಾ ಕಾರ್ಟೂನ್‌ಗಳನ್ನು ನೋಡುವ ಬದಲು ಕ್ಯೂಬ್ ಆಟವನ್ನು ವೀಕ್ಷಿಸಿ ಕಲಿಯುತ್ತಿದ್ದ. ಮೊದಲಿಗೆ ಒಂದು ನಿಮಿಷದಲ್ಲಿ ಕ್ಯೂಬ್ ಪೂರೈಸುತ್ತಿದ್ದ. ಈ ಆಟದಲ್ಲೇ ಏನಾದರೂ ಸಾಧನೆ ಮಾಡಬೇಕು ಎಂಬ ಬಯಕೆ ಅವನಲ್ಲಿತ್ತು. ಬುಕ್ ಆಫ್ ರೆಕಾರ್ಡ್‌ನಲ್ಲಿ ಮಗನ ಹೆಸರು ಬರಬೇಕು ಎಂಬ ಆಸೆ ನಮಗೂ ಇತ್ತು. ಕಣ್ಣು ಮುಚ್ಚಿಕೊಂಡು ಕ್ಯೂಬ್ ಪೂರೈಸುವ ಅಭ್ಯಾಸವೇ ಅವನನ್ನು ಈ ಮಟ್ಟಕ್ಕೆ ತಂದಿದೆ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.