ಕನ್ನಡಪ್ರಭ ವಾರ್ತೆ ಕಲಬುರಗಿ
ಶನಿವಾರ ಆಳಂದ ಪಟ್ಟಣದ ಬಸ್ ನಿಲ್ದಾಣದ ಎದುರು ಭಾರತೀಯ ಜನತಾ ಪಕ್ಷದ ಮಂಡಲ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆಳಂದ ತಾಲೂಕಿನ ಸರಸಂಬಾ ಗ್ರಾಮದ ಮಹಾಂತಪ್ಪ ಆಲೂರೆಯವರು ಫೆ. 29ರಂದು ಹೊಲದಿಂದ ಬರುವಾಗ ಅಪರಿಚಿತ ದುಷ್ಕರ್ಮಿಗಳಿಂದ ಭಯಾನಕವಾಗಿ ಕೊಲೆಯಾಗಿದ್ದಾರೆ. ಮಹಾಂತಪ್ಪ ಆಲೂರೆಯವರು ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡರಾಗಿದ್ದರು. ಅಲ್ಲದೇ ಕಲಬುರಗಿ ಜಿಲ್ಲೆಯ ಭಾರತೀಯ ಜನತಾ ಪಕ್ಷದ ಗ್ರಾಮಾಂತರ ಘಟಕದ ಮಾಜಿ ಉಪಾಧ್ಯಕ್ಷರಾಗಿದ್ದರು. ಇವರ ಕೊಲೆಯ ಹಿಂದೆ ಒಂದು ಷಡ್ಯಂತ್ರ ಇದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರನ್ನು ಗುರಿಯಾಗಿಸಿಕೊಂಡು ಕೊಲೆ ಮಾಡಲಾಗುತ್ತಿದೆ. ಮಾತು ಮಾತಿಗೂ ಭಾಷಣ ಬಿಗಿಯುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಜಿಲ್ಲೆಯಲ್ಲಿ ನಡೆಯುತ್ತಿರುವ ಕೊಲೆಗಳ ಬಗ್ಗೆ ತಿಳಿಯುತ್ತಿಲ್ಲವೇ ಎಂದು ಪ್ರಶ್ನಿಸಿದರು.ಆಳಂದ ತಾಲೂಕಿನಲ್ಲಿ ಹಾಡುಹಗಲೇ ನಡೆಯುತ್ತಿರುವ ಘಟನೆಗಳು ಸಾಮಾನ್ಯ ಜನರನ್ನು ಬೆಚ್ಚಿ ಬಿಳಿಸಿವೆ ಅಲ್ಲದೇ ಪೊಲೀಸ್ ಅಧಿಕಾರಿಗಳು ಸರ್ಕಾರದ, ಶಾಸಕರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆಂದರು. ಮಹಾಂತಪ್ಪ ಆಲೂರೆಯವರ ಕುಟುಂಬದ ಜೊತೆ ಭಾರತೀಯ ಜನತಾ ಪಕ್ಷ ಮತ್ತು ಕಾರ್ಯಕರ್ತರು ನಿಲ್ಲಲಿದ್ದಾರೆಂದೂ ಗುತ್ತೇದಾರ್ ಹೇಳಿದರು.
ಆಳಂದ ಶಾಸಕ ಬಿ.ಆರ್. ಪಾಟೀಲ ಗಾಂಧಿ ಟೋಪಿ ಹಾಕಿರುವ ನಕಲಿ ಗಾಂಧಿವಾದಿ. ಅವರೊಬ್ಬ ಮುಖವಾಡ ಧರಿಸಿರುವ ರಾಜಕಾರಣಿಯಾಗಿದ್ದಾರೆ ಮುಂದಿನ ದಿನಗಳಲ್ಲಿ ಅವರ ವಿರುದ್ಧ ಹಾಗೂ ಕೊಲೆಗಡುಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಉಗ್ರ ಹೋರಾಟ ರೂಪಿಸಲಾಗುವುದು ಎಂದರು.
ಮುಖಂಡರಾದ ವಿಠ್ಠಲರಾವ ಪಾಟೀಲ, ಬಸವರಾಜ ಬಿರಾದಾರ, ಹಣಮಂತ ಕಾಬಡೆ, ಶರಣಗೌಡ ಪಾಟೀಲ ದೇವಂತಗಿ , ಹಣಮಂತರಾವ ಮಾಲಾಜಿ, ಮಲ್ಲಣ್ಣ ನಾಗುರೆ, ಚಂದ್ರಕಾಂತ ಭೂಸನೂರ, ಆನಂದರಾಯ ಗಾಯಕವಾಡ, ಮಲ್ಲಿಕಾರ್ಜುನ ತಡಕಲ, ಲಿಂಗರಾಜ ಪಾಟೀಲ್ ಝಳಕಿ, ರುದ್ರಯ್ಯ ಹಿರೇಮಠ, ಯಶ್ವಂತರಾವ ಪಾಟೀಲ, ಪ್ರಭು ಸರಸಂಬಿ, ಪ್ರಭಾಕರ ರಾಮಜಿ, ಸೋಮನಾಥ ಹತ್ತರಕಿ, ಶಿವಪುತ್ರ ನಡಗೇರಿ, ಆದಿನಾಥ ಹೀರಾ, ಕಲ್ಯಾಣಿ ದೊಡ್ಡಮನಿ, ಆಕಾಶ ದೇಗಾಂವ, ರವಿ ನಾಯಕ, ಜಗನ್ನಾಥ ಹೊಸಕುರುಬ, ಶ್ರೀಧರ ಕೊಟ್ಟರಗಿ, ಅಶೋಕ ಹೊಸಮನಿ, ಶರಣಪ್ಪ ಹೊಸಮನಿ, ಶಿವಪ್ಪ ಘಂಟೆ, ರಘುನಾಥ ಪಾಟೀಲ, ಕುಮಾರ ಬಂಡೆ, ಸಚೀನ ಬಿರಾದಾರ, ಪ್ರಕಾಶ ತೋಳೆ, ತಿಪ್ಪಣ್ಣ ಬಂಡೆ, ಶರಣಬಸಪ್ಪ ಬಿರಾದಾರ, ತಿಪ್ಪಯ್ಯ ಗುತ್ತೇದಾರ, ಶಿವಪ್ರಕಾಶ ಹೀರಾ, ಸಿದ್ದು ಪಾಟೀಲ ಶಕಾಪೂರ, ರಾಮ ಪಾಟೀಲ ಖಂಡಾಳ, ಶಿವರಾಜ ಅವರಳ್ಳಿ, ಪ್ರಫುಲ ಬಾಬಳಸೂರೆ, ಮಹೇಶ ಪಾಟೀಲ, ಭೀಮಾಶಂಕರ ಕಲಶೆಟ್ಟಿ ಇದ್ದರು.