ಕನ್ನಡಪ್ರಭ ವಾರ್ತೆ ಗೋಕಾಕ
ಧನ ಮತ್ತು ಕೀರ್ತಿ ಸಂಪತ್ತು ಉಳಿಯುವುದಿಲ್ಲ. ಸಂಪತ್ತು ಯಾರ ಹತ್ತಿರ ಉಳಿಯುವುದಿಲ್ಲ, ಜೀವನ ಕ್ಷಣಿಕವಾಗಿದೆ. ಉಸಿರು ತೆಗೆದುಕೊಂಡರೆ ಹುಟ್ಟು, ಉಸಿರು ಬಿಟ್ಟರೆ ಸಾವು. ಯಾರ ಹೃದಯ ಸ್ವಚ್ಛವಿದೆ ಅವರ ಹೃದಯದೊಳಗೆ ದೇವರು ಇರುತ್ತಾನೆ. ಕರ್ತೃನೊಬ್ಬನೇ ದೇವ. ಭೂಮಿ ಮೇಲಿನ ಮೂರು ರತ್ನಗಳು ಅನ್ನ, ನೀರು, ಒಳ್ಳೆಯ ಎರಡು ಮಾತು. ಧರ್ಮ ಎಂದರೆ ಒಳ್ಳೆಯ ಕೆಲಸ, ನಾಲಿಗೆ ಮೇಲೆ ಎರಡು ಒಳ್ಳೆಯ ಮಾತು, ಹೃದಯದೊಳೆಗೆ ದೇವರ ನೆನೆಪು ಇರಬೇಕು ಎಂದು ಹೇಳಿದರು.ಹೊಸಳ್ಳಿ ಅಭಿನವ ಬೂದೀಶ್ವರ ಸ್ವಾಮಿಜಿ, ಬಳಗಾನೂರ ಶಿವಶಾಂತವೀರ ಸ್ವಾಮೀಜಿ ಮಾತನಾಡಿದರು. ಸುಣಧೋಳಿ ಅಭಿನವ ಶಿವಾನಂದ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಮಲ್ಲಿಕಾರ್ಜುನ ಕೊಡಗನೂರ ತಬಲಾ ಸಾಥ್, ಕಲ್ಲೂರದ ಶಂಕರಯ್ಯ ಗುರುಮಠ ಸಂಗೀತ ಸೇವೆ ನಡೆಯಿತು. ಈ ವೇಳೆ ಈಶ್ವರ ಬಳಿಗಾರ, ಶ್ರೀಧರ ದೇಯಣ್ಣವರ, ಬಸವರಾಜ ಪಣದಿ, ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ, ದುಂಡಪ್ಪ ಮಾಳೇದ, ಮಲ್ಲಪ್ಪ ಪಣದಿ, ಬಾಳಪ್ಪ ಕನೋಜಿ, ನಿಂಗಪ್ಪ ಕಂಬಿ, ದುಂಡಪ್ಪ ಕಂಬಿ, ಈರಣ್ಣ ಬಳಿಗಾರ, ಈರಪ್ಪ ದೇಯಣ್ಣವರ, ಯಲ್ಲಪ್ಪ ಮೇಳೆಣ್ಣವರ, ಸುರೇಶ ನೀಲಣ್ಣವರ, ಭೀಮನಾಯ್ಕ ನಾಯಕರ, ಭರಮಣ್ಣ ಪೂಜೇರ ಸೇರಿ ಸ್ಥಳೀಯರು ಹಾಗೂ ಪ್ರವಚನ ಆಯೋಜನೆ ಸಮಿತಿ ಪದಾಧಿಕಾರಿಗಳು, ಸದಸ್ಯರು, ಅಪಾರ ಸಂಖ್ಯೆಯಲ್ಲಿ ಭಕ್ತ ಜನ ಸಮೂಹ ಈ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.