ಸಂಕಷ್ಟದ ಸಮಯದಲ್ಲಿ ಹಾವೇಮುಲ್ ರೈತರ ಬೆನ್ನಿಗೆ ನಿಲ್ಲಲಿದೆ: ಪ್ರಕಾಶ ಬನ್ನಿಹಟ್ಟಿ

KannadaprabhaNewsNetwork |  
Published : Oct 31, 2026, 02:15 AM IST
ರಾಸುಗಳನ್ನು ಕಳೆದುಕೊಂಡ ಬ್ಯಾಡಗಿ ತಾಲೂಕಿನ ವಿವಿಧ ಗ್ರಾಮಗಳ ರೈತರಿಗೆ ಪರಿಹಾರದ ಚೆಕ್‌ಗಳನ್ನು ಹಾವೇಮುಲ್ ನಿರ್ದೇಶಕ ಪ್ರಕಾಶ ಬನ್ನಿಹಟ್ಟಿ ವಿತರಿಸಿದರು. | Kannada Prabha

ಸಾರಾಂಶ

ಬರಗಾಲ ಸೇರಿದಂತೆ ವಿವಿಧ ಸಂಕಷ್ಟಗಳು ರೈತರ ಬದುಕನ್ನು ಹೈರಾಣಾಗಿಸಿವೆ. ಎಂತಹುದೇ ಸಂಕಷ್ಟ ಎದುರಾದರೂ ಕೂಡ ಹಾವೇರಿ ಜಿಲ್ಲಾ ಹಾಲು ಒಕ್ಕೂಟ (ಹಾವೇಮುಲ್) ರೈತರ ಬೆನ್ನಿಗೆ ಸದಾ ನಿಲ್ಲಲಿದೆ ಎಂದು ನಿರ್ದೇಶಕ ಪ್ರಕಾಶ ಬನ್ನಿಹಟ್ಟಿ ಭರವಸೆ ನೀಡಿದರು.

ಬ್ಯಾಡಗಿ: ಬರಗಾಲ ಸೇರಿದಂತೆ ವಿವಿಧ ಸಂಕಷ್ಟಗಳು ರೈತರ ಬದುಕನ್ನು ಹೈರಾಣಾಗಿಸಿವೆ. ಎಂತಹುದೇ ಸಂಕಷ್ಟ ಎದುರಾದರೂ ಕೂಡ ಹಾವೇರಿ ಜಿಲ್ಲಾ ಹಾಲು ಒಕ್ಕೂಟ (ಹಾವೇಮುಲ್) ರೈತರ ಬೆನ್ನಿಗೆ ಸದಾ ನಿಲ್ಲಲಿದೆ ಎಂದು ನಿರ್ದೇಶಕ ಪ್ರಕಾಶ ಬನ್ನಿಹಟ್ಟಿ ಭರವಸೆ ನೀಡಿದರು.

ತಾಲೂಕಿನ ಹಿರೇಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಭೇಟಿ ನೀಡಿ, ಆಡಳಿತ ಮಂಡಳಿ ಸಭೆಯಲ್ಲಿ ಪಾಲ್ಗೊಂಡು, ಹಾಲು ಉತ್ಪಾದಕರ ನಂಬಿಕೆಯ ಒಡನಾಡಿಯಾಗಿರುವ ರಾಸುಗಳು ಮೃತಪಟ್ಟ ಹಿನ್ನೆಲೆಯಲ್ಲಿ ಸಂತ್ರಸ್ತ ರೈತ ಕುಟುಂಬಗಳಿಗೆ ಪರಿಹಾರದ ಚೆಕ್ ವಿತರಿಸಿ ಅವರು ಮಾತನಾಡಿದರು.

ಬರಗಾಲ ಸೇರಿದಂತೆ ವಿವಿಧ ಸಂಕಷ್ಟಗಳು ರೈತರ ಬದುಕನ್ನು ಹೈರಾಣಾಗಿಸಿವೆ, ಇಂತಹ ಸಂದರ್ಭದಲ್ಲಿ ರೈತರು ಕಷ್ಟಪಟ್ಟು ಸಾಕಿ, ಸಲುಹಿ ಬೆಳೆಸಿದ ರಾಸುಗಳು ಮೃತಪಟ್ಟರೆ ಅವರ ಆರ್ಥಿಕ ಪರಿಸ್ಥಿತಿ ಮತ್ತಷ್ಟು ದುಸ್ತರವಾಗುತ್ತದೆ. ಹಾಲು ಉತ್ಪಾದನೆಯನ್ನೇ ನಂಬಿ ಜೀವನ ನಡೆಸುವ ಕುಟುಂಬಗಳಿಗೆ ರಾಸುಗಳ ನಷ್ಟ ತುಂಬಲಾರದ ಹೊಡೆತ ನೀಡುತ್ತದೆ. ಇಂತಹ ಕಷ್ಟದ ಸಮಯದಲ್ಲಿ ರೈತರು ಧೃತಿಗೆಡಬಾರದು. ಒಕ್ಕೂಟ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳು ಸದಾ ರೈತರ ನೆರವಿಗೆ ನಿಲ್ಲಲಿವೆ ಎಂದರು.

ಐತಿಹಾಸಿಕ ನಿರ್ಧಾರ : ಅನ್ನದಾತರ ಬದುಕಿಗೆ ಆರ್ಥಿಕ ಬಲ ತುಂಬುವ ಉದ್ದೇಶದಿಂದ ''''''''ನಂದಿನಿ'''''''' ಹಾಲಿನ ಖರೀದಿ ದರವನ್ನು ಪ್ರತಿ ಲೀಟರ್‌ಗೆ 8 ರು. ಹೆಚ್ಚಿಸುವ ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿದೆ. ಇದರಲ್ಲಿ 7 ರು. ನೇರವಾಗಿ ಹಾಲು ಉತ್ಪಾದಕರಿಗೆ ದೊರೆಯಲಿದ್ದು, ಉಳಿದ 1 ರು. ಅನ್ನು ಒಕ್ಕೂಟದ ಅಭಿವೃದ್ಧಿಗೆ ಮೀಸಲಿಡಲಾಗಿದೆ. ನ.1ರಿಂದ ಹೊಸ ದರ ಜಾರಿಗೆ ಬರಲಿದೆ. ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ 460 ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ಪ್ರತಿದಿನ ಸುಮಾರು 1.80 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, 23,518 ಹಾಲು ಉತ್ಪಾದಕರು ಹಾಗೂ ಅವರ ಕುಟುಂಬಗಳಿಗೆ ಈ ದರ ಹೆಚ್ಚಳ ದೀಪಾವಳಿ ಉಡುಗೊರೆಯಾಗಿದೆ. ರೈತರು ಆರ್ಥಿಕವಾಗಿ ನೆಮ್ಮದಿಯಿಂದ ಇದ್ದಾಗ ಮಾತ್ರ ನಾಡು ಸಮೃದ್ಧವಾಗಿರಲು ಸಾಧ್ಯ. ಅನ್ನದಾತರ ಬದುಕಿನಲ್ಲಿ ಬೆಳಕು ಮೂಡಿಸುವುದೇ ನಮ್ಮ ಮುಖ್ಯ ಸಂಕಲ್ಪವಾಗಿದೆ ಎಂದು ಹೇಳಿದರು.

ಪರಿಹಾರದ ಚೆಕ್ ವಿತರಣೆ ಇದೇ ಸಂದರ್ಭದಲ್ಲಿ ರಾಸುಗಳನ್ನು ಕಳೆದುಕೊಂಡ ಬಡಮಲ್ಲಿ ಗ್ರಾಮದ ಕುಮಾರ ಲಮಾಣಿ ಅವರಿಗೆ 55 ಸಾವಿರ, ಗಣೇಶ ಕಾಯಕದ ಅವರಿಗೆ 50 ಸಾವಿರ ಹಾಗೂ ಹಿರೇಹಳ್ಳಿಯ ಜಾಫರ್ ಹಂಸಬಾವಿ ಅವರಿಗೆ 50 ಸಾವಿರ ಪರಿಹಾರದ ಚೆಕ್‌ಗಳನ್ನು ವಿತರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಡೆಯಾಜ್ಞೆ ಇದ್ದರೂ ಪೊಲೀಸರಿಂದ ಚಾರ್ಜ್‌ಶೀಟ್‌: ಹೈಕೋರ್ಟ್‌ ಗರಂ
ಪ್ರೀತಿಗೆ ಪೋಷಕರು ವಿರೋಧ: ಪ್ರೇಮಿಗಳಿಂದ ಆತ್ಮಹತ್ಯೆ ಯತ್ನ