ಕನ್ನಡಪ್ರಭ ವಾರ್ತೆ ಮೈಸೂರು
ಜೀವನದಲ್ಲಿ ಯಶಸ್ವಿಯಾಗಲು ಸ್ಪಷ್ಟ ಗುರಿಗಳನ್ನು ಹೊಂದಿಸುವ ಮಹತ್ವದ ಕುರಿತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಮಾನವರಾಗಲು ಪ್ರೋತ್ಸಾಹಿಸಿದರು. ಮೂಲ ವಿಜ್ಞಾನಗಳು ವಿಜ್ಞಾನದ ಆಧಾರಸ್ತಂಭಗಳು ಎಂದು ಅವರು ಅಭಿಪ್ರಾಯಪಟ್ಟರು. ರಸಾಯನಶಾಸ್ತ್ರವು ದಿನನಿತ್ಯದ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನಾವು ಮಾಡುವ ಕ್ರಿಯಾ ಚಟುವಟಿಕೆಗಳಲ್ಲಿ ಹೆಚ್ಚಿನವು ರಸಾಯನಶಾಸ್ತ್ರವನ್ನು ಒಳಗೊಂಡಿರುತ್ತದೆ ಎಂದು ಹೇಳಿದರು.
ಉದ್ಘಾಟನೆಯ ನಂತರ ರಸಾಯನ ಶಾಸ್ತ್ರದಲ್ಲಿ ಪ್ರಯೋಗಾಲಯ ಅಭ್ಯಾಸಗಳ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.ಮಹಾರಾಣಿಯ ವಿಜ್ಞಾನ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಮಲ್ಲಿಕಾರ್ಜುನ ರಸಾಯನಶಾಸ್ತ್ರದಲ್ಲಿನ ಪ್ರಯೋಗಾಲಯ ಅಭ್ಯಾಸಗಳ ಕುರಿತು ಮಾತನಾಡಿ, ಪ್ರಯೋಗಾಲಯ ಅಭ್ಯಾಸಗಳು ಸುರಕ್ಷಿತ, ನಿಖರ ಮತ್ತು ನೈತಿಕ ವೈಜ್ಞಾನಿಕ ಕೆಲಸದ ಅಡಿಪಾಯ ಎಂದು ಒತ್ತಿ ಹೇಳಿದರು.
ಪ್ರಾಂಶುಪಾಲರಾದ ಡಾ. ರೇಚಣ್ಣ ಅವರು ಮತ್ತು ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಡಿ.ಎಂ. ಲೋಕೇಶ್ವರಿ ಇದ್ದರು. ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.