ಮುಂಡಗೋಡ:
ನಾಗಪ್ಪ ಯಲ್ಲಪ್ಪ ಅಲ್ಲಾಪುರ ಎಂಬುವರಿಗೆ ಸೇರಿದ ಹುಲ್ಲಿನ ಬಣವೆಗೆ ಬೆಂಕಿ ತಗುಲಿದ್ದು, ಸುಮಾರು ಮೂರು ಟ್ರ್ಯಾಕ್ಟರ್ ಬತ್ತದ ಹುಲ್ಲು ಹಾಗೂ ಎರಡು ಟ್ರ್ಯಾಕ್ಟರ್ ಬಿಳಿ ಜೋಳದ ಸಿಪ್ಪೆ ಮತ್ತು ಎರಡು ಟ್ರ್ಯಾಕ್ಟರ್ ಹುರುಳಿಯ ಸಿಪ್ಪೆ ಸುಟ್ಟು ಹಾನಿ ಉಂಟಾಗಿದೆ. ಮುಂಡಗೋಡ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದು, ಆಗಬಹುದಾದ ಮತ್ತಷ್ಟು ಹಾನಿ ತಪ್ಪಿಸಿದ್ದಾರೆ.
ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ, ಚಂದ್ರಪ್ಪ ಪೂಜಾರಿ, ಮಲ್ಲಿಕಾರ್ಜುನ ಮಲ್ಲೀಗವಾಡ, ಅಡಿವೆಪ್ಪ ಕುರುವಿನಕೊಪ್ಪ, ಅರುಣ್ ಮುಲಗೆ, ಸೋಮಶೇಖರ್ ಜೀವನವರ್ ಹಾಗೂ ರಾಹುಲ ಜಿಡ್ಡಿಮನಿ ಮುಂತಾದವರು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.ಪಾರ್ಟ್ ಟೈಮ್ ಜಾಬ್ ಆಮಿಷ: ₹7 ಲಕ್ಷ ವಂಚನೆಆನ್ಲೈನ್ ಪಾರ್ಟ್ ಟೈಮ್ ಕೆಲಸದ ಹೆಸರಿನಲ್ಲಿ ಸೈಬರ್ ವಂಚಕರು ಮಹಿಳೆಯೊಬ್ಬರಿಗೆ ಬರೋಬ್ಬರಿ ₹7 ಲಕ್ಷ ವಂಚಿಸಿರುವ ಘಟನೆ ಕಾರವಾರ ನಗರದಲ್ಲಿ ಬೆಳಕಿಗೆ ಬಂದಿದೆ. ಹೆಚ್ಚಿನ ಲಾಭದ ಆಸೆಗೆ ಬಿದ್ದ ಕಾರವಾರದ ಹೈಚರ್ಚ್ ರಸ್ತೆ ನಿವಾಸಿ ವರ್ಷಾ ವಿ. ರೇವಣಕರ್ ಹಣ ಕಳೆದುಕೊಂಡು ಈಗ ಪೊಲೀಸರ ಮೊರೆ ಹೋಗಿದ್ದಾರೆ.
ಗ್ರೂಪ್ ಅಡ್ಮಿನ್ ಆಗಿದ್ದ ಅನನ್ಯ ಎಂಬಾಕೆ ವಾಟ್ಸ್‌ಆ್ಯಪ್ ಕರೆ ಮಾಡಿ ವರ್ಷಾ ಅವರಿಗೆ ಕೆಲಸದ ವಿವರ ವಿವರಿಸಿದ್ದಳು. ನೀವು ನಾವು ನೀಡುವ ಟಾಸ್ಕ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಅತಿ ಹೆಚ್ಚಿನ ಲಾಭಾಂಶ ಪಡೆಯಬಹುದು ಎಂದು ಆಮಿಷ ಒಡ್ಡಿದ್ದಳು. ಆರಂಭದಲ್ಲಿ ನಂಬಿಕೆ ಬರಲೆಂದು ವರ್ಷಾ ಅವರಿಂದ ₹200 ಹೂಡಿಕೆ ಮಾಡಿಸಿ, ಅವರ ಬ್ಯಾಂಕ್ ಖಾತೆಗೆ ₹300 ಮರಳಿ ಜಮೆ ಮಾಡಲಾಗಿತ್ತು. ಕೇವಲ ಒಂದು ಟಾಸ್ಕ್‌ನಿಂದ ₹100 ಲಾಭ ಸಿಕ್ಕಿದ್ದನ್ನು ನೋಡಿ ವರ್ಷಾ ವಂಚಕರ ಮಾತನ್ನು ಪೂರ್ತಿಯಾಗಿ ನಂಬಿದರು.
ನಂತರ ಹಂತ ಹಂತವಾಗಿ ದೊಡ್ಡ ಮೊತ್ತದ ಹಣ ಹೂಡಿಕೆ ಮಾಡಿದರೆ ಲಕ್ಷಾಂತರ ರೂಪಾಯಿ ಲಾಭ ಸಿಗಲಿದೆ ಎಂದು ವಂಚಕರು ನಂಬಿಸಿದರು. ಇದನ್ನು ಸತ್ಯವೆಂದು ಭಾವಿಸಿದ ವರ್ಷಾ ಫೆ. 27ರಿಂದ ಮಾ. 2ರ ಅವಧಿಯಲ್ಲಿ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು ₹7,02,000 ವರ್ಗಾಯಿಸಿದರು. ಆದರೆ, ಇಷ್ಟು ದೊಡ್ಡ ಮೊತ್ತ ಜಮೆಯಾದ ನಂತರ ವಂಚಕರು ಲಾಭದ ಹಣವನ್ನೂ ನೀಡದೆ, ಅಸಲು ಹಣವನ್ನೂ ಹಿಂದಿರುಗಿಸದೆ ಕೈಕೊಟ್ಟಿದ್ದಾರೆ.ಮೋಸ ಹೋಗಿರುವುದು ತಿಳಿಯುತ್ತಿದ್ದಂತೆಯೇ ವರ್ಷಾ ಕಾರವಾರ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.