ನೈಸ್‌ ಅಕ್ರಮ ವಿರುದ್ಧ ಇಂದಿನಿಂದ ಎಚ್‌ಡಿಕೆ ಹೋರಾಟದ ಅಖಾಡಕ್ಕೆ

KannadaprabhaNewsNetwork |  
Published : Oct 02, 2026, 04:00 AM IST
ಫೋಟೋ- ಹಿಂದು 1 ಮತ್ತು 2 | Kannada Prabha

ಸಾರಾಂಶ

ನೈಸ್‌ ಯೋಜನೆ ಅಕ್ರಮಗಳ ಬಗ್ಗೆ ಗಾಂಧಿ ಜಯಂತಿ ದಿನವೇ ಹೋರಾಟ ಆರಂಭಿಸಿ ಯೋಜನೆ ಬಾಧಿತ ಹಳ್ಳಿಗಳಿಗೆ ತೆರಳಿ ಅಹವಾಲು ಆಲಿಸುವುದಾಗಿ ಘೋಷಿಸಿದ್ದ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಶುಕ್ರವಾರ ನೈಸ್‌ ರಸ್ತೆ ಜಂಕ್ಷನ್‌ ಮಾದವಾರ ಟೋಲ್‌ನಿಂದ ತಮ್ಮ ಪ್ರವಾಸ ಆರಂಭಿಸಲಿದ್ದಾರೆ.

-ಇಡೀ ದಿನ ಯೋಜನೆ ಸಂತ್ರಸ್ತರ ಭೇಟಿ

-ಮಾದವಾರ ಟೋಲ್‌ನಿಂದ ಪ್ರವಾಸ ಆರಂಭ ಕನ್ನಡಪ್ರಭ ವಾರ್ತೆ ಬೆಂಗಳೂರು

ನೈಸ್‌ ಯೋಜನೆ ಅಕ್ರಮಗಳ ಬಗ್ಗೆ ಗಾಂಧಿ ಜಯಂತಿ ದಿನವೇ ಹೋರಾಟ ಆರಂಭಿಸಿ ಯೋಜನೆ ಬಾಧಿತ ಹಳ್ಳಿಗಳಿಗೆ ತೆರಳಿ ಅಹವಾಲು ಆಲಿಸುವುದಾಗಿ ಘೋಷಿಸಿದ್ದ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಶುಕ್ರವಾರ ನೈಸ್‌ ರಸ್ತೆ ಜಂಕ್ಷನ್‌ ಮಾದವಾರ ಟೋಲ್‌ನಿಂದ ತಮ್ಮ ಪ್ರವಾಸ ಆರಂಭಿಸಲಿದ್ದಾರೆ.

ಬೆಳಗ್ಗೆ 10ಕ್ಕೆ ಮಾದವಾರ ಟೋಲ್‌ನಿಂದ ಪ್ರವಾಸ ಆರಂಭಿಸುವ ಕುಮಾರಸ್ವಾಮಿ ಅವರು ಬಳಿಕ ನೈಸ್‌ ರಸ್ತೆ ಮೂಲಕ ಕೆಂಗೇರಿಯತ್ತ ಪ್ರಯಾಣ ಬೆಳೆಸಲಿದ್ದಾರೆ. ಬೆಳಗ್ಗೆ 11ಕ್ಕೆ ನೈಸ್‌ ಹೆಚ್ಚುವರಿ ಜಮೀನು ಕೆಂಗೇರಿ ಸ್ಯಾಟಲೈಟ್‌ ಕ್ಲಬ್‌ ಹಿಂಭಾಗ ಪರಿಶೀಲಿಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಚಿಕ್ಕತೋಗೂರಿನ ಎಲೆಕ್ಟ್ರಾನಿಕ್‌ ಸಿಟಿ ನೈಸ್‌ ಟೋಲ್‌ ಪ್ಲಾಜಾಕ್ಕೆ ಭೇಟಿ ನೀಡಿ ನೈಸ್‌ ತಂತ್ರಸ್ತರೊಂದಿಗೆ ಸಂವಾದ ನಡೆಸಲಿದ್ದಾರೆ.

ಸಂತ್ರಸ್ತರ ಜತೆ ಸಂವಾದ:

ನಂತರ ಮಧ್ಯಾಹ್ನ 1 ಗಂಟೆಗೆ ಸೋಂಪುರ ವೃತ್ತಕ್ಕೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಬಳಿಕ ಅಲ್ಲೇ ನೈಸ್‌ ಸಂತ್ರಸ್ತ ರೈತರೊಂದಿಗೆ ಸಂವಾದ ನಡೆಸಲಿದ್ದಾರೆ.

ಬೆಂಗಳೂರು-ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆಗಾಗಿ (ನೈಸ್‌) ಭೂಮಿ ಕಳೆದುಕೊಂಡಿರುವ ನೊಂದ ಸಾರ್ವಜನಿಕರ ಅಹವಾಲು ಸ್ವೀಕರಿಸಲು ಹೊರಟಿದ್ದೇನೆ. ಬೆಳಗ್ಗೆ ಮಾದಾವರ ಜಂಕ್ಷನ್‌ನಿಂದ ಆರಂಭವಾಗುವ ಪ್ರಯಾಣ ಗಾಣಸಂದ್ರದಲ್ಲಿ ಕೊನೆಗೊಳ್ಳಲಿದೆ. ಸಾರ್ವಜನಿಕರು ಮತ್ತು ಜೆಡಿಎಸ್‌ ಪಕ್ಷದ ಕಾರ್ಯಕರ್ತರು, ಮುಖಂಡರು, ಪ್ರಮುಖವಾಗಿ ಭೂಮಿ ಕಳೆದುಕೊಂಡ ಜನರು ದೊಡ್ಡ ಪ್ರಮಾಣದಲ್ಲಿ ಸೇರಿ. ಒಗ್ಗಟ್ಟಾಗಿ ಹೋರಾಟ ನಡೆಸೋಣ, ಗುರಿ ಮುಟ್ಟುವ ತನಕ ವಿಶ್ರಮಿಸುವುದು ಬೇಡ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಸಾಮಾಜಿಕ ಜಾಲತಾಣದಲ್ಲಿ ಕರೆ ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಖೋಟಾ ನೋಟು ಮುದ್ರಣಕ್ಕೆ 6 ತಿಂಗಳು ಪ್ರಯೋಗ
ರಾಜಕಾರಣಗಳ ಭ್ರಷ್ಟಾಚಾರಕ್ಕೆ ಚು. ವ್ಯವಸ್ಥೆಯೂ ಕಾರಣ: ಸಿದ್ದರಾಮಯ್ಯ ಬೇಸರ